ಅಮೆರಿಕ ಅಧಿಕಾರಿಗಳ ವಿರುದ್ಧ ಇರಾನ್ ಸಂಚಿನ ಅರಿವಿದೆ; ಬ್ಲಿಂಕನ್
ವಾಷಿಂಗ್ಟನ್, ಸೆ 4 ಅಮೆರಿಕದ ಪ್ರಸ್ತುತ ಮತ್ತು ಮಾಜಿ ಅಧಿಕಾರಿಗಳು ಸೇರಿದಂತೆ ಇತರ ಪ್ರಜೆಗಳ ವಿರುದ್ಧ ಇರಾನ್ ರೂಪಿಸುತ್ತಿರುವ ಸಂಚಿನ ಕುರಿತು ಅರಿವಿದೆ ಎಂದು ಅಲ್ಲಿನ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಶುಕ್ರವಾರ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೆ ನೀಡಿರುವ ಅವರು, ಅಮೆರಿಕ ಪ್ರಜೆ ಮಾಸಿಹ್ ಅಲೀನೆಜಾಡ್ ಅವರನ್ನು ಅಪಹರಿಸಲು ಸಂಚು ರೂಪಿಸಿದ್ದ, ಇರಾನ್ ಗುಪ್ತಚರ ಸಂಸ್ಥೆಯೊಂದಿಗೆ ಸಂಬಂಧ ಹೊಂದಿ್ದ ನಾಲ್ಕು ಇರಾನ್ ಪ್ರಜೆಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ ಎಂದರು.
ಈ ನಿರ್ದಿಷ್ಟ ಪ್ರಕರಣದ ಹೊರತಾಗಿಯೂ, ಅಮೆರಿಕದ ಇತರ ಹಾಲಿ ಹಾಗೂ ಮಾಜಿ ಅಧಿಕಾರಿಗಳನ್ನು ಗುರಿಯಾಗಿಸಿ ಇರಾನ್ ಸಂಚು ರೂಪಿಸುತ್ತಿರುವುದು ತಮಗೆ ತಿಳಿದಿದೆ ಎಂದು ಬ್ಲಿಂಕನ್ ತಿಳಿಸಿದ್ದಾರೆ.
ಇರಾನಿನ ಅಮೆರಿಕನ್ ಕಾರ್ಯಕರ್ತ ಅಲಿನೆಜಾಡ್‌ನನ್ನು ಅಪಹರಿಸಲು ಸಂಚು ರೂಪಿಸಲಾಗಿದೆ ಎಂದು ಎಫ್‌ಬಿಐ ಆರೋಪಿಸಿದೆ. ಅಪಹರಣಕ್ಕೆ ಸಂಬಂಧಿಸಿದ ಪಿತೂರಿ ಸೇರಿದಂತೆ ಹಲವು ಆರೋಪಗಳ ವಿರುದ್ಧ ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲೆಗಾಗಿ ಅಮೆರಿಕ ಜಿಲ್ಲಾ ನ್ಯಾಯಾಲಯದಲ್ಲಿ ನಾಲ್ವರನ್ನು ದೋಷಾರೋಪಣೆ ಮಾಡಲಾಗಿದೆ.