ಹುಕ್ಕೇರಿ

ಅರ್ಥಪೂರ್ಣವಾಗಿ ಅಂತರಾಷ್ಟ್ರೀಯ ಮಹಿಳಾ ದಿನ ಆಚರಣೆ

ಅರ್ಥಪೂರ್ಣವಾಗಿ ಅಂತರಾಷ್ಟ್ರೀಯ ಮಹಿಳಾ ದಿನ ಆಚರಣೆ


ಹುಕ್ಕೇರಿ  08:  ನಗರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ,ಶಿಕ್ಷಣ ಇಲಾಖೆ ಹಾಗೂ ತಾಲೂಕಾ ಆಡಳಿತ ಪರವಾಗಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಹಿರಿಯ ನ್ಯಾಯಾಧಿಶ ಕೆ ಎಸ್ ರೋಟ್ಟೆರ  ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು. ವೇದಿಕೆ ಮೇಲೆ ಕಿರಿಯ ನ್ಯಾಯಾಧಿಶ ಕೆ ಅಂಬಣ್ಣಾ, ತಹಸಿಲ್ದಾರ ಡಾ, ಡಿ ಎಚ್ ಹೂಗಾರ, ವಕೀಲರ ಸಂಘದ ಅದ್ಯಕ್ಷ ಆರ್ ಪಿ ಚೌಗಲಾ, ಸಿ ಡಿ ಪಿ ಓ ಮಂಜುನಾಥ ಪರಸಣ್ಣವರ, ಇ ಓ ಉಮೇಶ ಸಿದ್ನಾಳ, ಉಪಸ್ಥಿತರಿದ್ದರು.  

ನ್ಯಾಯಾಧಿಶ ಕೆ ಎಸ್ ರೋಟ್ಟೆರ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರಶಂಸೆ ಪತ್ರ ನೀಡಿ ಮಾದ್ಯಮಗಳೊಂದಿಗೆ ಮಾತನಾಡಿ ಲಿಂಗ ಭೇಧವಿಲ್ಲದೆ ಎಲ್ಲರೂ ಸಮಾನರು ಎಂದು ಮಹಿಳೆಯರ ಸಬಲಿಕರಣಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಮಹಿಳೆಯರಿಗೆ ಅನ್ಯಾಯವಾದಾಗ ಕಾನೂನು ಸೇವಾ ಸಮಿತಿಗೆ ತಿಳಿಸಿದರೆ ಅವರಿಗೆ ಸಂಬಂಧಿಸಿದ ಇಲಾಖೆಯಿಂದ ನ್ಯಾಯ ಕೋಡಿಸಲಾಗುವದು ಎಂದರು. 

 ಕಿರಿಯ ನ್ಯಾಯಾಧಿಶ ಕೆ ಅಂಬಣ್ಣಾ ಮಾತನಾಡಿ ಲಿಂಗ ಸಮಾನತೆಯ ದೃಷ್ಟಿಯಿಂದ ಈ ವರ್ಷ ಮಹಿಳಾ ದಿನಾಚಾರಣೆ ಆಚರಿಸಲಾಗುತ್ತಿದೆ. ಯಾವ ಕ್ಷೇತ್ರದಲ್ಲಿ ಮಹಿಳೆಯರು ಉನ್ನತೆ ಸಾಧಿಸಿದ್ದಾರೆ ಮತ್ತು ಶೋಷಿತ ಮಹಿಳೆಗೆ ಜಾಗೃತ ಮೂಡಿಸುವದು ಅವಶ್ಯ ವಾಗಿದೆ ಎಂದರು. 

ಅದೆ ರೀತಿ ತಹಸಿಲ್ದಾರ ಡಾ, ಡಿ ಎಚ್ ಹೂಗಾರ ಮಾತನಾಡಿ ತಾಲೂಕಿನಲ್ಲಿ ವಿವಿಧ ಕ್ಷೇತಗಳಲ್ಲಿ ಸಾಧನೆ ಗೈದ ಮಹಿಳೆಯರಿಗೆ ಇಂದು ಅಭಿನಂದಿಸಿ ಸತ್ಕರಿಸಲಾಗುತ್ತಿದೆ ಎಂದರು. 

ಈ ಸಂದರ್ಭದಲ್ಲಿ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳಾದ ಎಮ್ ಕೆ ಪಾಟೀಲ, ಎನ್ ಆಯ್ ದೇಮನ್ನವರ, ಎ ಬಿ ತೋದಲ, ಡಿ ಕೆ ಅವರಗೋಳ, ಎಪಿಪಿ ರಾಜೇಶ್ರೀ ಕೃಷ್ಣಾ ಹಾಗೂ ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ