ಸ್ಥಳೀಯರಿಗೆ ಆದ್ಯತೆ ನೀಡಲು ಇಂಗಳಗಿ ಒತ್ತಾಯ
Ingali urges to give priority to locals
ಗಂಗಾವತಿ 23: ಐತಿಹಾಸಿಕ ಕನಕಗಿರಿ ಉತ್ಸವವನ್ನು ಮೇ-09 ಮತ್ತು 10 ರಂದು ಆಚರಿಸಲು ಉದ್ದೇಶಿಸಲಾಗಿದ್ದು, ನಶಿಸುತ್ತಿರುವ ಕಲೆಗಳ ಜೊತೆಗೆ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರತರ್ಕರ ಸಂಘ ಗಂಗಾವತಿ ತಾಲೂಕು ಘಟಕದ ಗೌರವಧ್ಯಕ್ಷ ಹಾಗು ಕೊಪ್ಪಳ ಜಿಲ್ಲಾ ಕಲಾವಿದರ ವೇದಿಕೆ ಅಧ್ಯಕ್ಷ ನಾಗರಾಜ್ ಇಂಗಳಗಿ ಆಗ್ರಹಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ನಾಡಿನಾದ್ಯಂತ ಆಚರಣೆಗೊಳ್ಳುವ ಉತ್ಸವಗಳಲ್ಲಿ ನಮ್ಮ ಭಾಗದ ಕಲಾವಿದರಿಗೆ ವೇದಿಕೆ ಒದಗಿಸದೆ ನಿರ್ಲಕ್ಷ್ಯ ತಾಳುತ್ತಿದ್ದು ಇದರಿಂದ ಪ್ರತಿಭಾವಂತ ಕಲಾವಿದರು ಮೂಲೆಗುಂಪಾಗುತ್ತಿದ್ದಾರೆ. ಹಂಪಿ ಉತ್ಸವದಲ್ಲಿ ಬೆಂಗಳೂರು ಮೈಸೂರು ಭಾಗದ ಕಲಾವಿದರಿಗೆ ಹೆಚ್ಚು ಆದ್ಯತೆ ನೀಡಿ, ಸ್ಥಳೀಯರನ್ನು ಸಂಪೂರ್ಣ ಕಡೆಗಣಿಸಲಾಗಿತ್ತು, ಕನಕಗಿರಿ ಉತ್ಸವದಲ್ಲಿ ಮರುಕಳಿಸಬಾರದು, ಸಾಕಷ್ಟು ಮುತುವರ್ಜಿ ವಹಿಸಿ ಅಧಿಕಾರಿಗಳು ಇಲ್ಲಿನ ಕಲಾವಿದರಿಗೆ ಹೆಚ್ಚು ಅವಕಾಶ ಒದಗಿಸಬೇಕು, ವರ್ಷವೀಡೀ ಕಲಾ ಸೇವೆಯಲ್ಲಿ ತೊಡಗಿದವರನ್ನು ಗುರುತಿಸಬೇಕು, ನಶಿಸುತ್ತಿರುವ ಜಾನಪದ ಕಲೆಗಳು, ಡೆಪ್ಪಿನಾಟ, ಬಯಲಾಟ, ಸಣ್ಣಾಟ ಇತರೆ ಕಲೆಗಳಿಗೆ ವೇದಿಕೆ ಒದಗಿಸಿ ಪ್ರೋತ್ಸಾಹಿಸಬೇಕು ಇಂಥಕಲೆಗಳ ಜೀವಂತಿಕೆಗೆ ಉತ್ಸವಗಳು ಸೂಕ್ತ ವೇದಿಕೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ಮಗನಿಗಾಗಿ 2ನೇ ದಿನವು ಮುಂದುವರಿದ ಶೋಧ ಕಾರ್ಯ: ಕುಟುಂಬಕ್ಕಿದ್ದ ಒಬ್ಬನೆ ಮಗು ನೀರುಪಾಲು
ಅಕ್ರಮ ಚಟುವಟಿಕೆಗಲ್ಲಿ ಭಾಗಿ : ಇಬ್ಬರು ಆರೋಪಿತರು ಬೆಳಗಾವಿ ಜಿಲ್ಲೆಯಿಂದ ಗಡಿಪಾರು 