ರಬಾಕಾವಿಬನಹಟ್ಟಿ

ಇನ್ಪೋಸಿಸ್ ಫೌಂಡೇಶನ್ ಸಮಾಜ ಸೇವೆ ಮಹತ್ತರವಾದುದು: ಶಾಸಕ ಸಿದ್ದು ಸವದಿ

ಇನ್ಪೋಸಿಸ್ ಫೌಂಡೇಶನ್ ಸಮಾಜ ಸೇವೆ ಮಹತ್ತರವಾದುದು: ಶಾಸಕ ಸಿದ್ದು ಸವದಿ

ರಬಕವಿ-ಬನಹಟ್ಟಿ 23: ಕೊರೊನಾ ಕಷ್ಟಕಾಲದಲ್ಲಿ ಸಾರ್ವಜನಿಕ ಸೇವೆಯಲ್ಲಿ ನಿರತವಾಗಿರುವ ಪತ್ರಕರ್ತರು ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಗೃಹ ರಕ್ಷಕ ದಳ, ಪೊಲೀಸ್ ಸಿಬ್ಬಂದಿ, ಸರಕಾರಿ ವೈದ್ಯಕೀಯ ಸಿಬ್ಬಂದಿಯವರ ಕಾರ್ಯ ಮೆಚ್ಚುವಂತಹದು. ಅದರಲ್ಲೂ ಆಶಾಕಾರ್ಯಕರ್ತೆಯರ ಸೇವೆ ತುಂಬಾ ಮಿಗಿಲಾದುದು. ಸಾರ್ವಜನಿಕ ಸೇವೆಯಲ್ಲಿ ನಿರತರಾದವರನ್ನು ಗುರುತಿಸಿ ಅವರಿಗೆ ಸೇವೆ ಸಲ್ಲಿಸುತ್ತಿರುವ ಸುಧಾಮೂರ್ತಿ ದಂಪತಿಗಳ ಇನ್ಪೋಸಿಸ್ ಫೌಂಡೇಶನ್‌ನ ಸಮಾಜ ಸೇವೆ ಮಹತ್ತರವಾದುದು ಎಂದು ತೇರದಾಳ ಮತಕ್ಷೇತ್ರದ ಶಾಸಕ ಹಾಗೂ ಕೆ.ಎಚ್‌.ಡಿ.ಸಿ. ನಿಗಮದ ಅಧ್ಯಕ್ಷ ಸಿದ್ದು ಸವದಿ ಹೇಳಿದರು. 

ಬನಹಟ್ಟಿ ಆರೋಗ್ಯ ಸಮುದಾಯ ಕೇಂದ್ರದಲ್ಲಿ ಇನ್ಪೋಸಿಸ್ ಫೌಂಡೇಶನ್‌ದವರು ಇನ್ಪೋಸಿಸ್ ಸಮರ​‍್ಣ ಅಡಿಯಲ್ಲಿ ಆಶಾ ಕಾರ್ಯಕರ್ತೆ ಹಾಗೂ ಗೃಹ ರಕ್ಷಕದಳದ ಸಿಬ್ಬಂದಿಗೆ ಆಹಾರ ಕಿಟ್ ವಿತರಣೆ ಮಾಡಿ ಮಾತನಾಡಿದ ಶಾಸಕ ಸಿದ್ದು ಸವದಿ, ಆಶಾ ಕಾರ್ಯಕರ್ತೆಯರು ಹಗಲು-ಇರಳು ಎನ್ನದೆ ಜನರ ಆರೋಗ್ಯದ ಕಾಳಜಿಯ ಜವಾಬ್ದಾರಿ ಹೊತ್ತು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಅವರನ್ನು ಎಷ್ಟು ಸ್ಮರಿಸಿದರು ಸಾಲದು. ಸುಧಾಮೂರ್ತಿ ದಂಪತಿಗಳು ಮಕ್ಕಳ ಶಿಕ್ಷಣ ಉತ್ತಮಗೊಳಿಸಲು ನಾಡಿನ ಪ್ರತಿ ಸರಕಾರಿ ಶಾಲೆಗೆ ಕಂಪ್ಯೂಟರ್‌ಗಳನ್ನು ನೀಡಿದ್ದಾರೆ. ತಮಗೆ ನೀಡಿರುವ ಸಂಪತ್ತಿನ ಬಹುಪಾಲು ಸಮಾಜ ಸೇವೆಗೆ ಮೀಸಲಿಟ್ಟಿರುವುದು ತುಂಬಾ ಗೌರವ ಪೂರ್ವಕವಾದುದು ಎಂದರು.  

ಇನ್ಪೊಸಿಸ್ ಫೌಂಡೇಶನ್‌ದ ಸಂಚಾಲಕರ ನಾರಾಯಣ ಕುಲಕರ್ಣಿ ಮಾತನಾಡಿ, ಇಂದು ಜನರು ಆರೋಗ್ಯದಿಂದಿರಲು ಆಶಾ ಕಾರ್ಯಕರ್ತೆಯರೇ ಕಾರಣ. ಕೋರೊನಾ ಸಮಯದಲ್ಲಿ ಪ್ರತಿ ಮನೆ-ಮನೆಗೆ ಜನರ ಆರೋಗ್ಯ ವಿಚಾರಿಸಿದರಲ್ಲದೆ, ಪ್ರತಿಯೊಬ್ಬರ ಆರೋಗ್ಯ ಮಾಹಿತಿ ಸಂಗ್ರಹಿಸುವುದುದಲ್ಲದೆ ಸೊಂಕಿತ ಪ್ರದೇಶದಲ್ಲಿ ಸಂಚರಿಸಿ ಅವರ ಉಪಚಾರದ ವ್ಯವಸ್ಥೆ ಮಾಡಿದ್ದಾರೆ. ಜೀವದ ಹಂಗು ತೊರೆದು ಜನರನ್ನು ರಕ್ಷಿಸಿದ್ದಾರೆ. ಅವರ ಸೇವೆಯನ್ನು ತುಂಬಾ ಪೂಜ್ಯನೀಯ ಭಾವನೆಯಿಂದ ನೋಡಬೇಕಿದೆ. ಸುಧಾಮೂರ್ತಿ ದಂಪತಿ ದೊರೆತ ಸಂಪತ್ತಿನಲ್ಲಿ ಬಡಮ ಮಕ್ಕಳ ಶಿಕ್ಷಣ ಮಟ್ಟವನ್ನು ಸುಧಾರಿಸಲು ಕಂಪ್ಯೂಟರ್ ನೀಡಿದ್ದಾರೆ. ಸರಕಾರಿ ಶಾಲೆಗಳ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಕೋರೊನಾ ಸಮಯದಲ್ಲಿ ಕಷ್ಟದಲ್ಲಿರುವ ಜನತೆ ಆಹಾರ ದಾನ್ಯದ ಕಿಟ್‌ಗಳನ್ನು ನೀಡುವುದರ ಜೊತೆ ಉಚಿತ ಸೇವೆ ನೀಡುವ ಉದ್ದೇಶದಿಂದ ಬೃಹತ್ ಪ್ರಮಾಣದಲ್ಲಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ತಮ್ಮ ಗಳಿಕೆಯ ಬಹುಪಾಲನ್ನು ಸಮಾಜ ಸೇವೆಗೆ ಬಳಿಕೆ ಮಾಡುತ್ತಿರುವ ಸುಧಾಮೂರ್ತಿ ದಂಪತಿಗಳು ಮಾದರಿಯಾಗಿದ್ದಾರೆ ಎಂದರು. 

ಬಿಜೆಪಿ ನಗರಾಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ನಗರಸಭಾ ಅಧ್ಯಕ್ಷ ಶ್ರೀಶೈಲ ಬೀಳಗಿ, ಡಾ. ಎಂ. ಎನ್‌. ನದಾಫ, ಸುರೇಶ ಅಕ್ಕಿವಾಟ ವೇದಿಕೆ ಮೇಲಿದ್ದರು.  

ಇನ್ಪೊಸಿಸ್ ಫೌಂಡೇಶನ್‌ದ ಶ್ರೀನಿವಾಸ ಅಪರಂಜಿ, ಶಂಕರ ಸೊಲ್ಲಾಪೂರ, ಲಗಳಿ ಸರ್, ಬಸವರಾಜ ಮಾಲಾಬಾದಿ, ಡಾಽಽ ವಿರೇಶ ಹುಡೇದಮನಿ, ಡಾಽಽ ಕಾವೇರಿ ಹಲ್ಯಾಳ, ಡಾಽಽ ಆಯಿಷಾ ತಾಂಬೋಳಿ, ಡಾಽಽ ಸುನೀಲ ಹನಗಂಡಿ, ಹೋಮಗಾರ್ಡ್‌ ಪ್ಲೆಟೋ ಅಧಿಕಾರಿ ಈಶ್ವರ ಗದೆಪ್ಪನವರ, ಪತ್ರಕರ್ತರು ಸೇರಿದಂತೆ ರಬಕವಿ-ಬನಹಟ್ಟಿಯ ಆಶಾ ಕಾರ್ಯಕರ್ತೆಯರು, ಗೃಹ ರಕ್ಷಕದಳದವರು ಉಪಸ್ಥಿತರಿದ್ದರು. ಬಿಎಸ್‌. ಪಟ್ಟಣಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿವು ಯಾದವಾಡ ವಂದಿಸಿದರು. 


ಸುದ್ದಿ ಓದಿ