ಅಂತರರಾಷ್ಟ್ರೀಯ

ಮೆಕ್ಸಿಕೋದಲ್ಲಿ ಭಾರತೀಯ ಸಾಫ್ಟ್‌ ವೇರ್‌ ಎಂಜಿನಿಯರ್‌ ಅಂಜಲಿ ಹತ್ಯೆ

ಮೆಕ್ಸಿಕೋದಲ್ಲಿ  ಭಾರತೀಯ  ಸಾಫ್ಟ್‌ ವೇರ್‌  ಎಂಜಿನಿಯರ್‌  ಅಂಜಲಿ  ಹತ್ಯೆ

ಲಾಸ್ ಏಂಜಲೀಸ್, ಅ 23:   ಮೆಕ್ಸಿಕೋದಲ್ಲಿ ಭಾರತೀಯ ಸಾಫ್ಟ್ ವೇರ್ ಎಂಜಿನಿಯರ್ ಅಂಜಲಿ (25)  ಎಂಬ  ಯುವತಿ   ಬರ್ಬರವಾಗಿ ಹತ್ಯೆ ಗೊಳಗಾಗಿದ್ದಾರೆ.   ಕ್ಯಾಲಿಫೋರ್ನಿಯಾದ  ಸ್ಯಾನ್ ಜೋಸ್‌ನಲ್ಲಿರುವ  ಲಿಂಕ್ಡ್‌ಇನ್‌ ಸಂಸ್ಥೆಯಲ್ಲಿ      ಉದ್ಯೋಗ  ಮಾಡುತ್ತಿರುವ ಅಂಜಲಿ ತಮ್ಮ  ಹುಟ್ಟುಹಬ್ಬ   ಆಚರಿಸಲು ಮೆಕ್ಸಿಕೋದ ತುಲುಮ್‌ಗೆ ಪ್ರಯಾಣಿಸಿದ್ದರು.   ಈ   ಕ್ರಮದಲ್ಲಿ   ಅಂಜಲಿ ತಂಗಿದ್ದ ಹೋಟೆಲ್ ನಲ್ಲಿ ಎರಡು ಡ್ರಗ್ಸ್  ಗ್ಯಾಂಗ್  ನಡುವೆ  ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿಯಲ್ಲಿ ಅಂಜಲಿ ಅವರೊಂದಿಗೆ   ಮತ್ತೊಬ್ಬ  ಜರ್ಮನಿ  ಪ್ರವಾಸಿ ಮೃತಪಟ್ಟಿದ್ದಾರೆ.  ಸಾಫ್ಟ್‌ವೇರ್ ಇಂಜಿನಿಯರ್ ಅಂಜಲಿ  ಅವರು   ಹಿಮಾಚಲ ಪ್ರದೇಶ ರಾಜ್ಯದವರು  ಎಂದು ತಿಳಿದುಬಂದಿದೆ.

ಸುದ್ದಿ ಓದಿ