ಅಂತರರಾಷ್ಟ್ರೀಯ

ಉಕ್ರೇನ್ ನಿಂದ ಸ್ವದೇಶಕ್ಕೆ ಮರಳಿದ ಭಾರತೀಯ ನಾಗರೀಕರು, ವಿದ್ಯಾರ್ಥಿಗಳು

ಉಕ್ರೇನ್ ನಿಂದ ಸ್ವದೇಶಕ್ಕೆ ಮರಳಿದ ಭಾರತೀಯ ನಾಗರೀಕರು, ವಿದ್ಯಾರ್ಥಿಗಳು

ಕೈವ್: ಫೆಬ್ರವರಿ 24 : ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಪ್ರಜೆಗಳನ್ನು ಒಳಗೊಂಡ ಉಕ್ರೇನ್‌ನಿಂದ ವಿಶೇಷ ವಿಮಾನ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ರಷ್ಯಾ ಉಕ್ರೇನ್ ಬಿಕ್ಕಟ್ಟು ಹಿನ್ನೆಲೆ ಇಲ್ಲಿನ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ಉಕ್ರೇನ್ ಅನ್ನು ತೊರೆಯುವಂತೆ ಅಲ್ಲಿನ ರಾಯಭಾರಿ ಕಚೇರಿ ಭಾರತೀಯ ನಾಗರೀಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಂದೇಶ ರವಾನಿಸಿತ್ತು.ಈ ಹಿನ್ನೆಲೆ ಮೂರು ಏರ್ ಇಂಡಿಯಾ ವಿಮಾನಗಳನ್ನು ನಿಯೋಜಿಸಿತ್ತು. ಅದರಲ್ಲಿ ಇಂದು ಒಂದು ವಿಮಾನವು ಭಾರತೀಯ ನಾಗರೀಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿ ತಂದಿದೆ.ರಷ್ಯಾ ಇಂದು ಬೆಳಿಗ್ಗೆ ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣ ಘೋಷಿಸಿ ಎಲ್ಲಾ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿರುವುದಲ್ಲದೇ, ಉಕ್ರೇನ್‌ನಿಂದ ಬರುತ್ತಿರುವ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಸುದ್ದಿ ಓದಿ