ಅಂತರರಾಷ್ಟ್ರೀಯ

ಕೆನಡಾ ರಕ್ಷಣಾ ಸಚಿವೆಯಾಗಿ ಭಾರತ ಮೂಲದ ಮಹಿಳೆ

ಕೆನಡಾ ರಕ್ಷಣಾ  ಸಚಿವೆಯಾಗಿ ಭಾರತ  ಮೂಲದ ಮಹಿಳೆ

ಟೊರಾಂಟೋ,  ಅ  27  -  ಕೆನಡಾದ   ಪ್ರಧಾನಿ  ಜಸ್ಟಿನ್ ಟ್ರುಡೊ     ತಮ್ಮ  ಸಚಿವ  ಸಂಪುಟ  ಪುನರ್‌  ರಚಿಸುವ  ಮೂಲಕ   ಮಹತ್ವದ  ನಿರ್ಧಾರ  ಕೈಕೊಂಡಿದ್ದಾರೆ.  ಸಚಿವ  ಸಂಪುಟದಲ್ಲಿ ಭಾರತೀಯ ಮೂಲದ ಮಹಿಳೆಗೆ  ಪ್ರಮುಖ  ಹೊಣೆ   ಲಭಿಸಿದೆ.     ಅತ್ಯಂತ  ಮಹತ್ವದ   ರಕ್ಷಣಾ  ಖಾತೆ  ಸಚಿವರಾಗಿ  ಭಾರತೀಯ ಮೂಲದ ಮಹಿಳೆ ಅನಿತಾ ಆನಂದ್ ಅವರು ನೇಮಕಗೊಂಡಿದ್ದಾರೆ.


ಈವರೆಗೆ  ಭಾರತೀಯ  ಮೂಲದ ಹರ್ಜೀತ್ ಸಜ್ಜನ್    ಕೆನಡಾ   ರಕ್ಷಣಾ ಸಚಿವರಾಗಿದ್ದರು. ಆದರೆ,    ಸೇನಾ ಪಡೆಯಲ್ಲಿ  ನಡೆದ  ಲೈಂಗಿಕ ಕಿರುಕುಳ ವಿಷಯದ ತನಿಖೆಗೆ  ಸಂಬಂಧಿಸಿದಂತೆ    ಅವರ  ವಿರುದ್ದ  ಟೀಕೆಗಳು  ಎದುರಾಗಿದ್ದವು.  ಟ್ರುಡೊ  ಅವರನ್ನು  ರಕ್ಷಣಾ ಇಲಾಖೆಯಿಂದ  ಕೈ ಬಿಟ್ಟು  ಅನಿತಾ ಆನಂದ್ ಅವರಿಗೆ ಜವಾಬ್ದಾರಿ  ವಹಿಸಿದ್ದಾರೆ.  ಆದರೆ, ಸಜ್ಜನ್ ಅವರನ್ನು ಅಂತಾರಾಷ್ಟ್ರೀಯ ಅಭಿವೃದ್ಧಿ ಸಚಿವರನ್ನಾಗಿ  ನೇಮಿಸಲಾಗಿ   ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಸುದ್ದಿ ಓದಿ