ಕಾಯಬೇಡಿ, ಹೊರಟು ಬನ್ನಿ’ ಭಾರತೀಯ ವಿದ್ಯಾರ್ಥಿಗಳಿಗೆ ಸ್ವದೇಶಕ್ಕೆ ಮರಳಲು ಭಾರತೀಯ ರಾಯಭಾರಿ ಕಚೇರಿ ಕರೆ
ಕೈವ್: 22: ಉಕ್ರೇನ್ ಮತ್ತು ರಷ್ಯಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಸ್ವದೇಶಕ್ಕೆ ಮರಳಲು ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಹೇಳಿದೆ.ಭಾರತೀಯ ರಾಯಭಾರ ಕಚೇರಿಯು ವೈದ್ಯಕೀಯ ವಿಶ್ವವಿದ್ಯಾಲಯಗಳಿಂದ ಆನ್‌ಲೈನ್ ತರಗತಿಗಳ ದೃಢೀಕರಣದ ಕುರಿತು ಹೆಚ್ಚಿನ ಕರೆಗಳನ್ನು ಸ್ವೀಕರಿಸುತ್ತಿರುವ ಹಿನ್ನೆಲೆ ವಿಶ್ವವಿದ್ಯಾನಿಲಯಗಳಿಂದ ಆನ್‌ಲೈನ್ ತರಗತಿಗಳ ದೃಢೀಕರಣಕ್ಕೆ ಕಾಯುವ ಬದಲು ಸ್ವದೇಶಕ್ಕೆ ಮರಳುವಂತೆ ಭಾರತೀಯ ರಾಯಭಾರ ಕಚೇರಿಯು ಹೇಳಿದೆ.ಈ ನಿಟ್ಟಿನಲ್ಲಿ, ಮೊದಲೇ ತಿಳಿಸಿದಂತೆ, ಭಾರತೀಯ ವಿದ್ಯಾರ್ಥಿಗಳಿಗೆ ಶಿಕ್ಷಣ ಪ್ರಕ್ರಿಯೆಯನ್ನು ಸುಗಮಗೊಳಿಸಲು ರಾಯಭಾರ ಕಚೇರಿಯು ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸುತ್ತಿದೆ.ಇದು ಕೈವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ನೀಡಿದ ಮೂರನೇ ಸಲಹೆಯಾಗಿದೆ. ಫೆಬ್ರವರಿ 20 ರಂದು ನೀಡಿದ ಸಲಹೆಯಲ್ಲಿ, ಉಕ್ರೇನ್‌ನಲ್ಲಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ಹೆಚ್ಚಿನ ಮಟ್ಟದ ಉದ್ವಿಗ್ನತೆ ಮತ್ತು ಅನಿಶ್ಚಿತತೆಗಳ ಹಿನ್ನೆಲೆಯಲ್ಲಿ, ಉಳಿದುಕೊಳ್ಳುವುದು ಅನಿವಾರ್ಯವಲ್ಲ. ಹಾಗಾಗಿ ಎಲ್ಲಾ ಭಾರತೀಯ ಪ್ರಜೆಗಳು ಮತ್ತು ಎಲ್ಲಾ ಭಾರತೀಯ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಉಕ್ರೇನ್ ತೊರೆಯಲು ಸೂಚಿಸಲಾಗಿದೆ ಎಂದು ಹೇಳಿತ್ತು. ಫೆಬ್ರವರಿ 15 ರಂದು, ರಾಯಭಾರ ಕಚೇರಿಯು ಭಾರತೀಯರನ್ನು ಸ್ವದೇಶಕ್ಕೆ ಹಿಂತಿರುಗುವಂತೆ ಹೇಳಿತ್ತು.ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಮಧ್ಯೆ ಭಾರತೀಯರನ್ನು ಮರಳಿ ಕರೆತರುವ ಸಲುವಾಗಿ ಉಕ್ರೇನ್‌ಗೆ ನಿಯೋಜನೆಗೊಂಡಿರುವ ಮೂರು ಏರ್ ಇಂಡಿಯಾ ವಿಮಾನಗಳಲ್ಲಿ ಮೊದಲನೆಯದು ಮಂಗಳವಾರ ಬೆಳಿಗ್ಗೆ 7:36 ಕ್ಕೆ ನವದೆಹಲಿಯ ಐಜಿಐ ವಿಮಾನ ನಿಲ್ದಾಣದಿಂದ ಹೊರಟಿದೆ.