ಅಫ್ಗಾನ್ ಕುರಿತು ಭಾರತ ಜವಾಬ್ದಾರಿಯುತ ಪಾತ್ರ ನಿರ್ವಹಿಸಬೇಕು; ಪಾಕಿಸ್ತಾನ
ಇಸ್ಲಮಾಬಾದ್, ಸೆ 2: ಅಫ್ಗಾನಿಸ್ತಾನಕ್ಕೆ ಸಂಬಂಧಿಸಿದಂತೆ ಭಾರತ ಜವಾಬ್ದಾರಿಯುತ ಪಾತ್ರ ನಿರ್ವಹಿಸಬೇಕು ಎಂದು ಪಾಕಿಸ್ತಾನ ಹೇಳಿಕೆ ನೀಡಿದೆ.
ಪಾಕಿಸ್ತಾನದ ಚೀನಾ ರಾಯಭಾರಿ ಮೊಯಿನ್ ಉಲ್ ಹಾಖ್ ಈ ಹೇಳಿಕೆ ನೀಡಿದ್ದು, ಚೀನಾ ಹಾಗೂ ಪಾಕಿಸ್ತಾನ ದೇಶಗಳು ಅಪ್ಗಾನಿಸ್ತಾನದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನೀತಿಗಳ ರಚನೆಗೆ ಸಹಕಾರ ನೀಡುತ್ತಿವೆ ಎಂದಿದ್ದಾರೆ.
ಈ ನಿಟ್ಟಿನಲ್ಲಿ ಭಾರತ ಕೂಡ ಮಹತ್ವದ ಪಾತ್ರ ವಹಿಸಬೇಕು. ಅಪ್ಗಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಕ್ಕೆ ಸಹಕಾರ ನೀಡಬೇಕು ಎಂದು ಪಾಕಿಸ್ತಾನ ಬಯಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ ಭಾರತ, ಅಫ್ಗಾನಿಸ್ತಾನದಲ್ಲಿನ ಶಾಂತಿ ನೆಲೆಸುವ ಕೆಲಸದ ವಿರುದ್ಧ ಕೆಲಸ ಮಾಡಿತ್ತು ಎಂದು ಅವರು ಆರೋಪಿಸಿದ್ದಾರೆ.
ಅಫ್ಗಾನ್ ಜನರ ಸಂಕಷ್ಟವನ್ನು ದೂರಗೊಳಿಸಲು ನೆರೆರಾಷ್ಟ್ರಗಳು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.