ಶ್ರೀಲಂಕಾಕ್ಕೆ ಇಂಧನ ಒದಗಿಸಿದ ಭಾರತ
ಕೊಲಂಬೊ/ನವದೆಹಲಿ: ಏಪ್ರಿಲ್ 07: ದ್ವೀಪ ರಾಷ್ಟ್ರದಲ್ಲಿ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನ ನಡುವೆಯೇ ಭಾರತವು ಶ್ರೀಲಂಕಾಕ್ಕೆ ಹೆಚ್ಚು ಅಗತ್ಯವಿರುವ ಪೆಟ್ರೋಲ್ ಮತ್ತು ಡೀಸೆಲ್ ಸರಕುಗಳನ್ನು ಒದಗಿಸಿದೆ.
ಶ್ರೀಲಂಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವೀಟ್ ನಲ್ಲಿ, ಕಳೆದ 24 ಗಂಟೆಗಳಲ್ಲಿ 36,000 MT ಪೆಟ್ರೋಲ್ ಮತ್ತು 40,000 MT ಡೀಸೆಲ್ ನ್ನು #ಶ್ರೀಲಂಕಾಕ್ಕೆ ತಲುಪಿಸಲಾಗಿದೆ. ಭಾರತೀಯ ನೆರವಿನ ಅಡಿಯಲ್ಲಿ ವಿವಿಧ ರೀತಿಯ ಇಂಧನದ ಒಟ್ಟು ಪೂರೈಕೆಯು ಈಗ 270,000 MT ಗಿಂತಲೂ ಹೆಚ್ಚಿದೆ ಎಂದು ಹೇಳಿದೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಟ್ವೀಟ್ ನಲ್ಲಿ ನಾವು ಹೇಳಿದಂತೆ, ನೆರೆಹೊರೆಯವರು ಮೊದಲು ಎಂದು ಹೇಳಿದ್ದಾರೆ. ಇಂಧನ ಮತ್ತು ಆಹಾರದ ಕೊರತೆ ಮತ್ತು ದೀರ್ಘಾವಧಿಯ ವಿದ್ಯುತ್ ಕಡಿತದಿಂದಾಗಿ ಶ್ರೀಲಂಕಾದಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ.
ಅಲ್ಲದೇ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ಅಲ್ಲಿನ ನಿವಾಸಿಗಳು ಅನ್ನ ಮತ್ತು ಕುಡಿಯುವ ನೀರಿಗೂ ಪರದಾಡುವಂತಹ ಸ್ಥಿತಿ ಬಂದೊದಗಿದೆ.