ಅಂತರರಾಷ್ಟ್ರೀಯ

ಒಂದೇ ದಿನ ಉಕ್ರೇನ್‌ನ ನೆರೆಯ ದೇಶಗಳಿಂದ 3000 ಭಾರತೀಯರನ್ನು ಏರ್ ಲಿಫ್ಟ್ ಮಾಡಿದ ಭಾರತ!

ಒಂದೇ ದಿನ ಉಕ್ರೇನ್‌ನ ನೆರೆಯ ದೇಶಗಳಿಂದ 3000 ಭಾರತೀಯರನ್ನು ಏರ್ ಲಿಫ್ಟ್ ಮಾಡಿದ ಭಾರತ!

ಕೈವ್: ಮಾರ್ಚ್ 05: ಭಾರತೀಯ ನಾಗರಿಕರನ್ನು ರಕ್ಷಿಸುವ ‘ಆಪರೇಷನ್ ಗಂಗಾ’ ಅಡಿಯಲ್ಲಿ, ಉಕ್ರೇನ್‌ನ ನೆರೆಯ ದೇಶಗಳಿಂದ 15 ವಿಶೇಷ ವಿಮಾನಗಳ ಮೂಲಕ ಸುಮಾರು 3000 ಭಾರತೀಯರನ್ನು ಶನಿವಾರದಂದು ಏರ್ ಲಿಫ್ಟ ಮಾಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

3000 ಭಾರತೀಯರನ್ನು 12 ವಿಶೇಷ ನಾಗರಿಕ ಮತ್ತು ಮೂರು ಭಾರತೀಯ ವಾಯುಪಡೆಯ ವಿಮಾನಗಳ ಮೂಲಕ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೇಳಿದೆ.

2022 ಫೆಬ್ರವರಿ 22 ರಂದು ವಿಶೇಷ ವಿಮಾನಗಳು ಪ್ರಾರಂಭವಾದಾಗಿನಿಂದ 13,700 ಹೆಚ್ಚು ಭಾರತೀಯರನ್ನು ಮರಳಿ ಕರೆತರಲಾಗಿದೆ. 55 ವಿಶೇಷ ನಾಗರಿಕ ವಿಮಾನಗಳ ಮೂಲಕ ಮರಳಿ ಕರೆತರಲಾದ ಭಾರತೀಯರ ಸಂಖ್ಯೆ 11728 ಕ್ಕೆ ಏರಿದೆ. ಇಲ್ಲಿಯವರೆಗೆ ಗಂಗಾದ ಭಾಗವಾಗಿ ಈ ದೇಶಗಳಿಗೆ 26 ಟನ್ ರಿಲೀಫ್ ಲೋಡ್ ಕೊಂಡೊಯ್ಯುವಾಗ 2056 ಪ್ರಯಾಣಿಕರನ್ನು ವಾಪಸ್ ಕರೆತರಲು ಕ್ರಮಕೈಗೊಳ್ಳಲಾಗಿದೆ

ಹಿಂದಾನ್ ವಾಯುನೆಲೆಯಿಂದ ನಿನ್ನೆ ಟೇಕಾಫ್ ಆಗಿದ್ದ IAF ನ ಮೂರು C-17 ಹೆವಿ ಲಿಫ್ಟ್ ಸಾರಿಗೆ ವಿಮಾನಗಳು ಇಂದು ಬೆಳಿಗ್ಗೆ ಹಿಂದಾನ್‌ಗೆ ಮರಳಿದವು. ಈ ವಿಮಾನಗಳು ರೊಮೇನಿಯಾ, ಸ್ಲೋವಾಕಿಯಾ ಮತ್ತು ಪೋಲೆಂಡ್‌ನಿಂದ 629 ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಿವೆ.

ಇಂದು ಬೆಳಿಗ್ಗೆ ಒಂದು ವಿಮಾನವನ್ನು ಹೊರತುಪಡಿಸಿ ಎಲ್ಲಾ ನಾಗರಿಕ ವಿಮಾನಗಳು ಬಂದಿಳಿದವು, ಆದರೆ ಕೊಸಿಸ್‌ನಿಂದ ನವದೆಹಲಿಗೆ ವಿಮಾನವು ಸಂಜೆ ತಡವಾಗಿ ಆಗಮಿಸುವ ನಿರೀಕ್ಷೆಯಿದೆ. ಇಂದಿನ ನಾಗರಿಕ ವಿಮಾನಗಳಲ್ಲಿ ಬುಡಾಪೆಸ್ಟ್‌ನಿಂದ 5, ಸುಸೇವಾದಿಂದ 4, ಕೊಸಿಸ್ ನಿಂದ 1 ಮತ್ತು ರ್ಜೆಸ್ಜೋವ್ ನಿಂದ 2 ಸೇರಿವೆ.

ಭಾನುವಾರ ಬುಡಾಪೆಸ್ಟ್, ಕೊಸಿಸ್, ರ್ಜೆಸ್ಜೋವ್ ಮತ್ತು ಬುಕಾರೆಸ್ಟ್ ನಿಂದ 11 ವಿಶೇಷ ವಿಮಾನಗಳು ಕಾರ್ಯನಿರ್ವಹಿಸುವ ನಿರೀಕ್ಷೆಯಿದ್ದು, 2200 ಕ್ಕೂ ಹೆಚ್ಚು ಭಾರತೀಯರನ್ನು ಕರೆತರುವ ನಿರೀಕ್ಷೆಯಿದೆ ಎಂದು ಸಚಿವಾಲಯ ತಿಳಿಸಿದೆ.

ಸುದ್ದಿ ಓದಿ