ಅಂತರರಾಷ್ಟ್ರೀಯ

ಗಡಿಯಾಚೆಗಿನ ಭಯೋತ್ಪಾದನೆಗೆ ಭಾರತ, ಅಮೆರಿಕ ಖಂಡನೆ

ಗಡಿಯಾಚೆಗಿನ ಭಯೋತ್ಪಾದನೆಗೆ ಭಾರತ, ಅಮೆರಿಕ ಖಂಡನೆ

  ವಾಷಿಂಗ್ಟನ್, ಸೆ. 25 ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಧ್ಯಕ್ಷ ಜೋ ಬಿಡೆನ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
  ದ್ವಿಪಕ್ಷೀಯ ಸಂದರ್ಭದಲ್ಲಿ ಭಾರತ ಮತ್ತು ಯುಎಸ್, ಗಡಿಯಾಚೆಗಿನ ಭಯೋತ್ಪಾದನೆಯನ್ನು ಖಂಡಿಸಿದ್ದು, ರಕ್ಷಣಾ ಪಾಲುದಾರಿಕೆ ಬಲಪಡಿಸುವ ಕುರಿತು ದೃಢಪಡಿಸಿದ್ದಾರೆ.  ಹಾಗೂ 26/11ರ ಮುಂಬೈ ಭಯೋತ್ಪಾದಕ ದಾಳಿಯ ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ನ್ಯಾಯದಾನಕ್ಕೆ ಆಗ್ರಹಿಸಿದ್ದಾರೆ.
  ಶುಕ್ರವಾರದ ಮಾತುಕತೆಯ ನಂತರ ಹೊರಡಿಸಲಾದ ಜಂಟಿ ಹೇಳಿಕೆಯಲ್ಲಿ, ಭಯೋತ್ಪಾದಕ ಪ್ರಾಕ್ಸಿಗಳನ್ನು ಬಳಸುವುದನ್ನು ಖಂಡಿಸಿದರು ಮತ್ತು ಭಯೋತ್ಪಾದಕ ಗುಂಪುಗಳಿಗೆ ಯಾವುದೇ ಲಾಜಿಸ್ಟಿಕಲ್, ಹಣಕಾಸು ಅಥವಾ ಮಿಲಿಟರಿ ಬೆಂಬಲವನ್ನು ನಿರಾಕರಿಸುವ ಪ್ರಾಮುಖ್ಯತೆಯನ್ನು ಉಭಯ ಮುಖಂಡರು ಒತ್ತಿ ಹೇಳಿದ್ದಾರೆ.
  ಜಾಗತಿಕ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅಮೆರಿಕ ಮತ್ತು ಭಾರತವು ಒಟ್ಟಾಗಿ ನಿಲ್ಲುತ್ತವೆ, ವಿಶ್ವಸಂಸ್ಥೆಯಿಂದ ನಿಷೇಧಿಸಲ್ಪಟ್ಟ ಗುಂಪುಗಳು ಸೇರಿದಂತೆ ಎಲ್ಲಾ ಭಯೋತ್ಪಾದಕ ಗುಂಪುಗಳ ವಿರುದ್ಧ ಸಂಘಟಿತ ಕ್ರಮ ಕೈಗೊಳ್ಳುತ್ತವೆ ಎಂದು ನಾಯಕರು ಪುನರುಚ್ಚರಿಸಿದ್ದಾರೆ.
 

ಸುದ್ದಿ ಓದಿ