ಕ್ರೀಡೆ

ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಗೆ 2ನೇ ಬಾರಿ ಸೋಲುಣಿಸಿದ ಭಾರತದ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ

ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಗೆ 2ನೇ ಬಾರಿ ಸೋಲುಣಿಸಿದ ಭಾರತದ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ

ನವದೆಹಲಿ: ಮೇ 21 :ಭಾರತದ ಗ್ರ್ಯಾಂಡ್ ಮಾಸ್ಟರ್ 16 ವರ್ಷದ ಆರ್ ಪ್ರಜ್ಞಾನಂದ ಅವರು ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಮತ್ತೊಮ್ಮೆ ದಂಗುಬಡಿಸಿದ್ದಾರೆ.  ಈ ವರ್ಷ ನಾರ್ವೇಜಿಯನ್ ವಿರುದ್ಧ ಮೂರು ತಿಂಗಳ ಅಂತರದಲ್ಲಿ ತಮ್ಮ ಎರಡನೇ ಗೆಲುವನ್ನ ದಾಖಲಿಸಿದ್ದಾರೆ.

ಶುಕ್ರವಾರ ನಡೆದ ಚೆಸ್ಸಬಲ್ ಮಾಸ್ಟರ್ಸ್ ಆನ್‌ಲೈನ್ ಕ್ಷಿಪ್ರ ಚೆಸ್ ಪಂದ್ಯಾವಳಿಯ ಐದನೇ ಸುತ್ತಿನಲ್ಲಿ ಇಬ್ಬರು ಆಟಗಾರರು ಭೇಟಿಯಾದರು. ಕಾರ್ಲ್‌ಸನ್ ವಿರುದ್ಧದ ಗೆಲುವಿನ ನಂತರ ಪ್ರಗ್ನಾನಂದ ಅವರು ನಾಕೌಟ್ ಹಂತಕ್ಕೆ ಮುನ್ನಡೆಯುವ ಅವಕಾಶಗಳನ್ನು ಜೀವಂತವಾಗಿರಿಸಿಕೊಂಡರು.ಚೆಸ್ಸಬಲ್ ಮಾಸ್ಟರ್ಸ್ 16 ಆಟಗಾರರ ಆನ್‌ಲೈನ್ ಕ್ಷಿಪ್ರ ಚೆಸ್ ಪಂದ್ಯಾವಳಿಯಾಗಿದೆ. ಕಾರ್ಲ್‌ಸೆನ್ ಮತ್ತು ಪ್ರಜ್ಞಾನಂದ ನಡುವಿನ ಸ್ಪರ್ಧೆಯು ಡ್ರಾದತ್ತ ಸಾಗಿತು. ಆದರೆ ಕಾರ್ಲ್‌ಸನ್ ತನ್ನ 40 ನೇ ನಡೆಯಲ್ಲಿ ದೊಡ್ಡ ತಪ್ಪು ಮಾಡಿದರು. ಇದು ಪ್ರಜ್ಞಾನಂದ ಅವರನ್ನು ಗೆಲುವಿನ ದಡಕ್ಕೆ ಸೇರಿಸಿತು.

ಸುದ್ದಿ ಓದಿ