ಅಮೆರಿಕದಲ್ಲಿ ಹೆಚ್ಚಿದ ಕರೋನ ಸೋಂಕು ಪ್ರಕರಣ - ಹೊಸ ನಿರ್ಬಂಧ ಜಾರಿ
ವಾಷಿಂಗ್ಟನ್, 14: ಅಮೆರಿಕದಲ್ಲಿ ಕೊರೋನ ಅತಿವೇಗವಾಗಿ ಹಬ್ಬತೊಡಗಿದ್ದು , ಕಳೆದ 24 ಗಂಟೆಯಲ್ಲಿ 1ಲಕ್ಷದ ,77 ,ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಈ ಕಾರಣಕ್ಕಾಗಿ ಅಮೆರಿಕದಲ್ಲಿ ಸುತ್ತಿನ ಹೊಸ ನಿರ್ಬಂಧ, ಕಟ್ಟುಪಾಡು ಜಾರಿಯಾಗತೊಡಗಿದೆ.
ಅಮೆರಿಕದ ಪ್ರತಿ ರಾಜ್ಯದಲ್ಲಿ ಕೊರೋನ ಸೋಂಕು ಪ್ರಕರಣ ಹೆಚ್ಚಳವಾಗಿದೆ. ಇದರಲ್ಲಿ ಇಲಿನಾಯ್ಸ್, ಲೋವಾ, ಕಾನ್ಸಾ, ಒಹಿಯೋ ಸೇರಿದಂತೆ ಹತ್ತು ರಾಜ್ಯಗಳಲ್ಲಿ ದಾಖಲೆ ಪ್ರಮಾಣದಲ್ಲಿ ಸೋಂಕು ವರದಿಯಾಗಿದೆಎಂದು ಹೇಳಲಾಗಿದೆ. ಈ ಕಾರಣಕ್ಕಾಗಿ ಅಮೆರಿಕದಲ್ಲಿ ಮತ್ತೊಂದು ಸುತ್ತಿನ ಹೊಸ ನಿರ್ಬಂಧ ಜಾರಿಯಾಗತೊಡಗಿದೆ.
ಪಶ್ಚಿಮ ವರ್ಜಿನಿಯಾದಲ್ಲಿ ಮೊದಲ ಬಾರಿಗೆ ರಾಜ್ಯಾದ್ಯಂತ ದ ಮಾಸ್ಕ್ ಅನ್ನು ಕಡ್ಡಾಯಗೊಳಿಸಿದೆ. ನ್ಯೂಯಾರ್ಕ್ ನಗರದಲ್ಲಿ ಬಾರ್ - ರೆಸ್ಟೋರೆಂಟ್ ಗಳಿಗೆ ಸಮಯದ ಗಡುವು ಹಾಕಲಾಗಿದೆ. ಕೊರೋನ ಲಸಿಕೆ ಲಭ್ಯವಾಗುವವರೆಗೂ ಜನತೆ ಮುಂಜಾಗ್ರತೆ ವಹಿಸುವಂತೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.