ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ 21 ದಿನಗಳ ರಂಗ ತರಬೇತಿ ಶಿಬಿರ ಉದ್ಘಾಟನೆ: ಡಾ. ಶಿವಾನಂದ ಶೆಟ್ಟರ
Inauguration of a 21-day theatre training camp for college students: Dr. Shivananda Shettar
ಲೋಕದರ್ಶನ ವರದಿ
ಧಾರವಾಡ 26: ಕಾಲೇಜುಗಳಲ್ಲಿ ರಂಗ ಚಟುವಟಿಕೆಗಳು ತುಂಬಾ ಕಡಿಮೆ ಆಗಿರುವ ಈ ಸಂದರ್ಭದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು, ಕಾಲೇಜು ವಿದ್ಯಾರ್ಥಿಗಳಿಗೆ 21 ದಿನಗಳ ರಂಗ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದ್ದು ಅಭಿನಂದನೀಯ ಕಾರ್ಯವಾಗಿದೆ ಎಂದು ಡಾ. ಶಿವಾನಂದ ಶೆಟ್ಟರ ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ 21 ದಿನಗಳ ರಂಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ರಂಗಭೂಮಿಗೆ ಹಲವು ಆಯಾಮಗಳು ಇವೆ. ಅದರಲ್ಲಿ ರಂಗ ಸಂಘಟನೆಯೂ ಒಂದು. ಇಂದು ರಂಗ ಸಂಘಟಕರ ಕೊರತೆಯನ್ನು ರಂಗಭೂಮಿ ಎದುರಿಸುತ್ತಿದೆ. ಈ ಶಿಬಿರದಿಂದ ಮತ್ತೆ ಧಾರವಾಡದ ಹಳೆಯ ದಿನಗಳು ಮರುಕಳಿಸಲಿ, ರಂಗಭೂಮಿ ವಿಜ್ರಂಬಿಸಲಿ ಎಂದರು.
ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಡಾ. ಬಾಳಣ್ಣ ಶೀಗೀಹಳ್ಳಿ, ಗಾಂಧೀಜಿಯ ಜೀವನ ಪ್ರಾರಂಭವಾಗಿದ್ದೇ ಸತ್ಯಹರಿಶ್ಚಂದ್ರ ನಾಟಕ ನೋಡುವ ಮೂಲಕ. ಅದು ಅವರಿಗೆ ಹಲವು ರೀತಿಯಲ್ಲಿ ಪ್ರೇರಣೆ ನೀಡಿತು. ಹೀಗೆ ಹಲವು ಮಹನಿಯರಿಗೆ ರಂಗಭೂಮಿ ಹೊಸದಿಕ್ಕನ್ನು ತೋರಿಸಿ ಮುನ್ನಡೆಸಿದ ಇತಿಹಾಸವಿದೆ.
ಭಾಷೆ ಹುಟ್ಟದೇ ಇರುವ ಕಾಲದಲ್ಲಿ ತನ್ನ ಸಂತೋಷವನ್ನು ಹಂಚಿಕೊಳ್ಳಲು ಅಭಿನಯ ಮತ್ತು ಸಂಜ್ಞಾ ಭಾಷೆ ಏಕಕಾಲಕ್ಕೆ ಅಂದು ರೂಢಿಸಿಕೊಂಡಿದ್ದರು. ಭಾಷೆಯನ್ನು ಕಲಿತು ರಂಗಭೂಮಿಯನ್ನು ರೂಪಿಸಿಕೊಂಡರು. ಬರೀ ಮಾತು ಹೇಳುವುದರ ಮೂಲಕ ನಾಟಕವಾಗುವುದಿಲ್ಲ. ಭಾಷೆಗೆ ಆಭಿನಯ ಸೇರಿಸಿದಾಗ ಅದು ನಾಟಕ ಆಗಲು ಸಾಧ್ಯವಾಗುವುದು. ಹವ್ಯಾಸ ರಂಗಭೂಮಿಗೆ ವಿಶಿಷ್ಟವಾದ ಶಕ್ತಿ ಇದೆ.
ರಂಗಭೂಮಿ ಮಾತನಾಡುವ ಶಕ್ತಿ ತಂದುಕೊಡುತ್ತದೆ. ಜೊತೆಗೆ ಮನುಷ್ಯತ್ವವನ್ನು ಕಲಿಯಲು ಸಾಧ್ಯವಿದೆ. ರಂಗಭೂಮಿ ನಿಜವಾದ ಬದುಕನ್ನು ತೆರೆದಿಡುತ್ತದೆ. ನಿಮ್ಮ ಭಾವನೆಗಳನ್ನು ನಿಯಂತ್ರಣ ಮಾಡುವುದನ್ನೂ ರಂಗಭೂಮಿ ಕಲಿಸುತ್ತದೆ. ರಂಗಭೂಮಿಯಲ್ಲಿ ಹಲವು ಪ್ರಯೋಗಗಳು ನಡೆದಿವೆ. ಬಿ.ವಿ ಕಾರಾಂತ, ಸಿ. ಬಸಲಿಂಗಯ್ಯರಂತವರು ರಂಗಭೂಮಿಗೆ ಹೊಸ ದಿಕ್ಕನ್ನು ತೋರಿಸಿದವರು ಎಂದರು.
ಹರ್ಲಾಪುರದ ಸಿ.ವಾ.ಸಿ.ಡಿ. ಕಲಾ ತಂಡದ ಶಂಭಯ್ಯ ಹಿರೇಮಠ ಹಾಗೂ ಸಂಗಡಿಗರು ರಂಗಭೂಮಿ ಹಾಡುಗಾರಿಕೆ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಶಿಬಿರದ ನಿರ್ದೇಶಕ ಲಕ್ಷ್ಮಣ ಪೀರಗಾರ ವೇದಿಕೆ ಮೇಲಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಕಾರ್ಯಕ್ರಮ ನಡೆಸಿಕೊಟ್ಟರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 