5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಸಂಕೇಶ್ವರ : ನಗರ ಪರಿಸರ ಸೇರಿದಂತೆ ಸಮಾಜದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಬೆಳಿಗ್ಗೆ 5ರಿಂದ ಪಟ್ಟಣದ ರಸ್ತೆ ಗಟಾರುಗಳಲ್ಲಿನ ಹೊಲಸು ತ್ಯಾಜ್ಯವನ್ನು ಹೊತ್ತು ಸಾಗುವ ಪೌರ ಕಾರ್ಮಿಕರ ಗೋಳು ಯಾರು ಕೇಳದೆ ಇರುವದು ಶೋಚನೀಯ ಸಂಗತಿಯಾಗಿದೆ. ಕಳೆದ 5 ತಿಂಗಳಿನಿಂದ ವೇತನವಿಲ್ಲದೆ ಅವರಿವರ ಕಡೆಗೆ ಸಾಲಸೂಲ ಮಾಡಿ ಜೀವನ ಸಾಗಿಸುತ್ತಿರುವ ಸಂಕೇಶ್ವರ ಪೌರ ಕಾರ್ಮಿಕರ ಪರಿಸ್ಥಿತಿ ಯಾರಿಗೆ ಹೇಳದಂತಾಗಿದೆ. ಕಳೆದ 5 ತಿಂಗಳಿಂದ ಸರಕಾರ ಮತ್ತು ಪುರಸಭೆಯವರು ವೇತನ ನೀಡದೆ ಇರುವದು ನಾಚಿಕೇಗೇಡಿತನದ ಸಂಗತಿಯಾಗಿದೆ.
ಹೌದು ಓದುಗರೇ ಪೌರ ಕಾರ್ಮಿಕರಾಗಿ ಕೆಲಸ ಮಾಡಲು ಸೇರುವವರಲ್ಲಿ ಯಾರು ಶ್ರೀಮಂತರು ಇರೊಲ್ಲ. ದಿನ ನಿತ್ಯ ಮಳೆ ಬಿಸಿಲಿ ಲಿಕ್ಕೆಸದೆ ತನ್ನ ಆರೋಗ್ಯವನ್ನು ನೋಡಿಕೊಳ್ಳದೆ ಬೆಳಿಗ್ಗೆ 5 ಗಂಟೆಯಿಂದ ರಸ್ತೆಗಳನ್ನು ಗುಡಿಸಿ, ಗಟಾರುಗಳಲ್ಲಿ ತುಂಬಿಕೊಂಡ ಹೊಲಸು ತುಂಬಿ ಪರಿಸರವನ್ನು ಸ್ವಚ್ಛ ಮಾಡುವ ಮೂಲಕ ನಾಗರಿಕರನ್ನು ಆರೋಗ್ಯವಂತಾಗಿಸಿಸುವ ಕೆಲಸ ನಿರ್ವಹಣೆ ಮಾಡುವ ಪೌರ ಕಾರ್ಮಿಕರಿಗೆ ಕಳೆದ 5 ತಿಂಗಳಿಂದ ವೇತನ ನೀಡದೆ ಇರುವ ಸರಕಾರ ಮತ್ತು ಪುರಸಭೆಯ ಅಧಿಕಾರಿಗಳಿಗೆ ಪೌರ ಕಾರ್ಮಿಕರು ಹಿಡಿಶಾಪ ಹಾಕುವಂತಾಗಿದೆ.
ಸರಕಾರದ ಕೆಲಸ ದೇವರ ಕೆಲಸ ಎನ್ನುವ ಈ ಘೋಷ ನಿಜವಾಗಲು ಪೌರ ಕಾರ್ಮಿಕರಿಗೆ ಸರಕಾರದ ಕೆಲಸ ಕಂಟಕವಾಗಿ ಪರಿಣಮಿಸಿದೆ. ಕಳೆದ 5 ತಿಂಗಳು ಗಳಿಂದ ಯಾವದೇ ವೇತನ ಇಲ್ಲದೆ ಸಂಕೇಶ್ವರ ಪೌರ ಕಾರ್ಮಿಕರಿಗೆ ತಮ್ಮ ಕುಟುಂಬಗಳನ್ನು ನಿರ್ವಹಣೆ ಮಾಡುವದು ಕಷ್ಟದ ಕೆಲಸವಾಗಿದೆ.
ಕಳೆದ 5 ತಿಂಗಳಗಳಿಂದ ತಾವು ದುಡಿದ ದುಡಿಮೆಗೆ ಸರಕಾರ ಆಗಲಿ ಪುರಸಭೆ ಆಗಲಿ ಸಂಬಳ ನೀಡದೆ ಪೌರ ಕಾರ್ಮಿಕರಿಂದ ಕೇವಲ ಕೆಲಸವನ್ನು ಮಾಡಿಸಿಕೊಳ್ಳುತ್ತಿರುವ ಅಧಿಕಾರಿಗಳಿಗೆ ಹೇಗೆ ತಮ್ಮ ಅಳನ್ನು ಹೇಳಬೇಕು ಎನ್ನುವ ದಿಕ್ಕು ತೋಚದೆ ಪೌರ ಕಾರ್ಮಿಕರು ತಮ್ಮ ಸಂಕಷ್ಟವನ್ನು ಯಾರ ಮುಂದೆ ತೋಡಿಕೊಳ್ಳದೆ ದಿನ ಕಳೆಯುತ್ತಿದ್ದಾರೆ.
ವೇತನ ಇಂದ ಆಗಬಹುದು ನಾಳೆ ಆಗಬಹುದು ಎನ್ನುತ್ತ ಸುಮಾರು 5 ತಿಂಗಳು ವೇತನ ಇಲ್ಲದೆ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರು ಅವರಿವರ ಬಳಿ ಸಾಲ ಸೂಲ ಮಾಡಿ ಜೀವನದಾಗಿಸುವ ಪರಿಸ್ಥಿತಿ ಎದುರಾಗಿದೆ.
ಆ ಕೆಲಸ ಈ ಕೆಲಸ ಎನ್ನುತ್ತ ಕೋಟಿ, ಕೋಟಿ ಖರ್ಚು ಮಾಡುವ ಸರಕಾರ ಹಾಗೂ ಪುರಸಭೆ ಅಧಿಕಾರಿಗಳು ಪೌರ ಕಾರ್ಮಿಕರ 5 ತಿಂಗಳ ವೇತನ ನೀಡದೆ ಇರುವದು ನಾಚಿಕೆಗೇಡಿತನದ ಸಂಗತಿಯಾಗಿದೆ. ಹೀಗೆ ಇನ್ನು ಮುಂದೆ ವರೆದರೆ ಪೌರ ಕಾರ್ಮಿಕರ ಕುಟುಂಬಗಳು ಬೀದಿಪಾಲು ಆಗುವದರಲ್ಲಿ ಯಾವದೇ ಸಂದೇಹ ಇಲ್ಲ ಎನ್ನುವ ಮಾತುಗಳು ದಟ್ಟವಾಗಿ ಕೇಳಿಬರತೊಡಗಿವೆ.