ಬೂದಿಹಾಳ್ ಗ್ರಾಮದಲಿ ಅಕ್ಷರ್ ಫೌಂಡೇಶನ್ಟಿ ಬೇಸಿಗೆ ಶಿಬಿರ
Akshar Foundation Summer Camp in Budihal Village
ಬೈಲಹೊಂಗಲ್ 26 : ತಾಲೂಕಿನ ಬೂದಿಹಾಳ್ ಗ್ರಾಮದಲ್ಲಿ ಅಕ್ಷರ್ ಫೌಂಡೇಶನ್, ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮದ ವತಿಯಿಂದ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಶಿಬಿರದಲ್ಲಿ ಚಟುವಟಿಕೆ ಆಧಾರಿತ ಅಭ್ಯಾಸಗಳನ್ನು ನೀಡಲಾಯಿತು. ಶಿಬಿರದಲ್ಲಿ ಒಟ್ಟು 42 ವಿದ್ಯಾರ್ಥಿಗಳು ಭಾಗಿಯಾಗಿದ್ದು ಅಕ್ಷರ್ ಫೌಂಡೇಶನ್ ದ ಕ್ಲಸ್ಟರ್ ಸಂಯೋಜಕರಾದ ಗಿರಿ ಗೌಡ ಪಾಟೀಲ್ ಇವರು ಮಕ್ಕಳಿಗೆ ಚಟುವಟಿಕೆ ಆಧಾರಿತ ಅಭ್ಯಾಸಗಳಲ್ಲಿ ಗ್ರಾಮದ ನಕ್ಷೆ, ಒಟ್ಟು ಮನೆಗಳಸಂಖ್ಯೆ, ಒಟ್ಟು ಜನಸಂಖ್ಯೆ, ಗ್ರಾಮದಲ್ಲಿರುವ ಗಿಡಮರಗಳ ಹೆಸರು, ಬೆಳೆಗಳ ಹೆಸರು, ಕನ್ನಡ ಇಂಗ್ಲಿಷ್ ಪದಗಳನ್ನು ಬರೆಯುವುದು ಹಾಗೂ ಚಿತ್ರ ಬಿಡಿಸುವುದು ಹೀಗೆ ಅನೇಕ ಚಟುವಟಿಕೆ ಆಧಾರಿತ ಅಭ್ಯಾಸಗಳನ್ನು ಮಾಡಿಸುವುದಾಗಿ ತಿಳಿಸಿದರು.
ಈ ಅಭ್ಯಾಸಗಳಿಂದ ತಮ್ಮ ಗ್ರಾಮದ ಹಾಗೂ ಸುತ್ತಮುತ್ತಲಿ ಪರಿಸರದ ಮಾಹಿತಿಯನ್ನು ತಿಳಿದುಕೊಂಡು ತಮ್ಮ ಜ್ಞಾನವನ್ನು ತಾವೇ ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳಿಗೆ ಕನ್ನಡ ಓದಲು ಹಾಗೂ ಇನ್ನಿತರ ಚಟುವಟಿಕೆಗಳನ್ನು ಮಾಡಿಸಲಾಯಿತು. ಈ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷರಾದ ಶಿವಾನಂದ್ ಚಚಡಿ ಹಾಗೂ ಸದಸ್ಯರಾದ ಬಾಬು ಕುಲಕರ್ಣಿ ಪಾಲಕರಾದ ಪರಶುರಾಮ್ ಅಳಗುಂಡಿ ಸ್ವಯಂಸೇವಕರಾದ ಮಾದರ್ ಸರ ಹಾಗೂ ಇನ್ನಿತರರು ಭಾಗವಹಿಸಿದ್ದರು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 