ಅಂಬೇಡ್ಕರ್ ಸಮುದಾಯ ಭವನ ಹಾಗೂ ಸ್ಮಶಾನ ಅಭಿವೃದ್ಧಿಗೆ ಬದ್ಧ: ಶಾಸಕ ತಮ್ಮಣ್ಣವರ

ಅಂಬೇಡ್ಕರ್ ಸಮುದಾಯ ಭವನ ಹಾಗೂ ಸ್ಮಶಾನ ಅಭಿವೃದ್ಧಿಗೆ ಬದ್ಧ: ಶಾಸಕ ತಮ್ಮಣ್ಣವರ  Committed to the development of Ambedkar Community Hall and Crematorium: MLA Thammanavara

ಮುಗಳಖೋಡ 26: ಪಟ್ಟಣದ 5 ಹಾಗೂ 6ನೆಯ ವಾರ್ಡಿನ ಪರಿಶಿಷ್ಟ ಜಾತಿ ಜನರಿಗೆ ಅನುಕೂಲವಾಗುವಂತೆ ಅಂಬೇಡ್ಕರ್ ಸಮುದಾಯ ಭವನಕ್ಕೆ ರೂ. 75 ಲಕ್ಷ  ಹಾಗೂ ಸ್ಮಶಾನ ಅಭಿವೃದ್ಧಿಗೆ ರೂ.  10 ಲಕ್ಷ , ಕೆರೆ ಅಭಿವೃದ್ಧಿ ಪಡಿಸಲು ಹಂತ ಹಂತವಾಗಿ ಅನುದಾನ ಬಿಡುಗಡೆಗೊಳಿಸಲಾಗುವುದೆಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.  

ಅವರು ರವಿವಾರ ಇಂದು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಜಯಂತೋತ್ಸವದ ಅಂಗವಾಗಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಭವ್ಯ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.  ಶಾಸಕ ಮಹೇಂದ್ರ ತಮ್ಮಣ್ಣವರ ಅವರನ್ನು ಸಮುದಾಯದ ಮುಖಂಡರು ಸತ್ಕರಿಸಿದರು. ಅಂಬೇಡ್ಕರರ ಭವನದಿಂದ ವಿವಿಧ ಓಣಿಗಳಲ್ಲಿ ಬೆಳ್ಳಿ ರಥದಲ್ಲಿ ಬುದ್ಧ ಹಾಗೂ ಡಾ. ಬಿ ಆರ್ ಅಂಬೇಡ್ಕರ ಮೂರ್ತಿ ಹಾಗೂ ಭಾವಚಿತ್ರದ  ಭವ್ಯ  ಮೆರವಣಿಗೆಯು ಜರುಗಿತು.ಜಿಪಂ ಮಾಜಿ ಸದಸ್ಯ ಡಾ. ಸಿ ಬಿ ಕುಲಗೋಡ ಮಾತನಾಡಿ ಡಾ. ಬಿ ಆರ್ ಅಂಬೇಡ್ಕರ್ ರವರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಸುಶಿಕ್ಷಿತರಾಗಿ ಉತ್ತಮ ಸಮಾಜ ನಿರ್ಮಾಣಮಾಡಬೇಕು ಎಂದರು.

ಪುರಸಭೆ ಸದಸ್ಯರಾದ ಪರ​‍್ಪಗೌಡ ಖೇತಗೌಡರ , ರಮೇಶ ಯಡವನ್ನವರ, ಮಹಾವೀರ ಕುರಾಡೆ, ರಾವಸಾಬ ಗವಲೆತ್ತಿನವರ, ಹಣಮಾಸಾಬಗೌಡ ನಾಯಿಕ, ಯುವ ಮುಖಂಡ ಆನಂದ ತುಳಜವ್ವಗೋಳ, ಕರೆಪ್ಪ ಮಂಟೂರ, ಮುಪ್ಪಯ್ಯ ಹಿರೇಮಠ , ವರ್ಧಮಾನ ಶಿರಹಟ್ಟಿ ರಾಮಚಂದ್ರ ಕುರಾಡೆ ,ಅಶೋಕ ಸಣ್ಣತಿಪ್ಪಗೋಳ, ನಿರ್ಮಲ ನಡುವಿನಕೇರಿ, ಸುಖದೇವ ಕರಿಭೀಮಗೋಳ, ಸಚಿನ ಹುಣಸಿಕಟ್ಟಿ, ಆನಂದ ಯರಡೆತ್ತಿ, ಚೇತನ ನಡುವಿನಕೇರಿ, ಭೀಮರಾವ  ಕರಿ ಭೀಮಗೋಳ, ಕೆಂಚಪ್ಪ ಹಳಿಂಗಳಿ ಚಂದ್ರಕಾಂತ ಗವಲೆತ್ತಿನವರ , ಸೇರಿದಂತೆ ದಲಿತ ಮುಖಂಡರು ಹಾಗೂ ಇತರರು ಇದ್ದರು.