ಮೂಡಲಗಿ

ಮಹಾದ್ವಾರದ ಉದ್ಘಾಟನೆ, ಸತ್ಸಂಗ ಕಾರ್ಯಕ್ರಮ

ಮಹಾದ್ವಾರದ ಉದ್ಘಾಟನೆ, ಸತ್ಸಂಗ ಕಾರ್ಯಕ್ರಮ

ಮೂಡಲಗಿ,18:  ಪಟ್ಟಣದ ಈರಣ್ಣ ನಗರದ ಮಡ್ಡಿ ವೀರಭದ್ರೇಶ್ವರ ಜಾತ್ರೆ ಹಾಗೂ ದೇವಸ್ಥಾನದ ರಾಜಗೋಪೂರದ ಕಳಸಾರೋಹಣ, ಮಹಾದ್ವಾರದ ಉದ್ಘಾಟನೆ ಮತ್ತು ಸತ್ಸಂಗ ಹಾಗೂ ಸತ್ಕಾರ ಕಾರ್ಯಕ್ರಮವು ಶುಕ್ರವಾರ ಅ16ರಿಂದ ಅ. 20ರ ವರೆಗೆ ವಿವಿಧ ನಾಡಿನ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಜರುಗಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಬಿ. ಹಂದಿಗುಂದ ತಿಳಿಸಿದರು. 

ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮತ್ತು ಪೋಸ್ಟರ್‌ಗಳನ್ನು ಬುಧವಾರ ದೇವಸ್ಥಾನದ ಆವರಣದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಅವರು ಆ. 16ರಂದು ಮಧ್ಯಾಹ್ನ 3ಕ್ಕೆ ಕುಂಭ ಮೇಳದೊಂದಿಗೆ ಕಳಸಗಳ ಮೆರವಣಿಗೆಯು ಜರುಗುವುದು. ವೇದಿಕೆಯಲ್ಲಿ ಜರುಗುವು ಸತ್ಸಂಗದ ಉದ್ಘಾಟನೆಯ ಸಾನ್ನಿಧ್ಯವನ್ನು ದತ್ತಾತ್ರೇಯಬೋಧ ಸ್ವಾಮಿಗಳು, ಸುಣಧೋಳಿಯ ಶಿವಾನಂದ ಸ್ವಾಮಿಗಳು ವಹಿಸುವರು. ಶೇಗುಣಶಿಯ ಡಾ. ಮಹಾಂತಪ್ರಭು ಸ್ವಾಮಿಗಳು ಸತ್ಸಂಗ ಕಾರ್ಯಕ್ರಮ ಉದ್ಘಾಟಿಸುವರು. ಭಾಗೋಜಿಕೊಪ್ಪದ ಡಾ. ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು ಸಮ್ಮುಖವಹಿಸುವರು. ಗೋಕಾಕದ ಮಾತೋಶ್ರೀ ಸುವರ್ಣಾ ಹೊಸಮಠ ಮತ್ತು ಕಂಕಣವಾಡಿಯ ಮಾರುತಿ ಶರಣರು ಅನುಭಾವದ ನುಡಿ ಹೇಳಿವರು. ಅಧ್ಯಕ್ಷತೆಯನ್ನು ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಭೀಮಪ್ಪ ಬಿ. ಹಂದಿಗುಂದ ವಹಿಸುವರು.  

ಅ. 17ರಂದು ಸಂಜೆ 6ಕ್ಕೆ ಜರುಗುವು ಸಂತ್ಸಗ ದಿವ್ಯ ಸಾನ್ನೀಧ್ಯವನ್ನು ಗುಬ್ಬಲಗುಡ್ಡದ ಮಲ್ಲಿಕಾರ್ಜುನ ಸಾನ್ನಿಧ್ಯವನ್ನು ಹಂದಿಗುಂದದ ಶಿವಾನಂದ ವಹಿಸುವರು, ಹಳೇಹುಬ್ಬಳ್ಳಿಯ ಶ್ರೀಮದ್ ಜಗದ್ಗುರು ಶಿವಶಂಕರ ಶಿವಾಚಾರ್ಯ ಸಮ್ಮುಖವಹಿಸುವರು,  ಶಿವಾಪೂರದ ಅಡಿವಿಸಿದ್ಧರಾಮ ಮತ್ತು ನಾಗನೂರಿನ ಮಾತೋಶ್ರೀ ಕಾವ್ಯಾಶ್ರೀ ಅಮ್ಮನವರು ಅನುಭಾವ ನುಡಿ ಹೇಳುವರು,  

ಆ. 18ರಂದು ಸಂಜೆ 5ಕ್ಕೆ ಪಲ್ಲಕ್ಕಿ ಉತ್ಸವ, ಸಂಜೆ 6ಕ್ಕೆ ಜರುಗುವ ಸತ್ಸಂಗದ ದಿವ್ಯ ಸಾನ್ನಿದ್ಯವನ್ನು ಸುಣಧೋಳಿಯ ಶಿವಾನಂದ ಮತ್ತು ಸಾನ್ನಿಧ್ಯವನ್ನು ಅಂಕಲಗಿ-ಕುಂದರಗಿಯ  ಅಮರಸಿದ್ಧೇಶ್ವರ ವಹಿಸುವರು. ಹುಬ್ಬಳ್ಳಿಯ ಶ್ಯಾಮನಂದ ಪೂಜೇರಿ ಮತ್ತು ಕಂಕಣವಾಡಿಯ ಮಾರುತಿ ಶರಣರು ಹಾಗೂ ಮಾತೋಶ್ರೀ ಕಾವ್ಯಾಶ್ರೀ ಅಮ್ಮನವರು ಅನುಭಾವ ನುಡಿ ಹೇಳುವರು,  

ಆ. 19ರಂದು ಬೆಳಿಗ್ಗೆ 10ಕ್ಕೆ ಕೂಡಲಸಂಗಮದ ಜಯಮೃತ್ಯುಂಜಯ ದಿವ್ಯ ಸಾನ್ನಿಧ್ಯ ಮತ್ತು  ಹೊಸದುರ್ಗದ ಡಾಽಽ  ಪುರುಷೋತ್ತಮಾನಂದ ಪುರಿ ಸಾನ್ನಿಧ್ಯದಲ್ಲಿ ರಾಜಗೋಪುರದ ಕಳಸಾರೋಹಣ ಜರುಗುವುದು ಗೋಕಾಕದ ಮುರುಘೇಂದ್ರ ಸಮ್ಮುಖ ವಹಿಸುವರು, ಹುಕ್ಕೇರಿ-ಬೆಳಗಾವಿಯ ಚಂದ್ರಶೇಖರ ಶಿವಾಚಾರ್ಯ ಅಥಣಿಯ ಪ್ರಭು ಚನ್ನಬಸವ ಅರಭಾವಿಯ ಗುರುಬಸವಲಿಂಗ ಶ್ರೀಗಳು, ಹುಣಶ್ಯಾಳ ಪಿವೈದ ನಿಜಗುಣ ದೇವರು ಅನುಭಾವ ನುಡಿ ಹೇಳುವರು. ಮದ್ಯಾಹ್ನ 12ಕ್ಕೆ ಪಲ್ಲಕ್ಕಿ ಉತ್ಸವ ಮತ್ತು ಪುರವಂತರಿಂದ ಒಡಪು ಹೇಳುವುದು ಮತ್ತು ಅಗ್ನಿ ಹಾಯುವುದು. ಸಂಜೆ ಸತ್ಸಂಗ ಇರುವುದು,  

ಆ. 20ರಂದು ಮಧ್ಯಾಹ್ನ 1.30ಕ್ಕೆ ಕನ್ನೇರಿಮಠದ ಜಗದ್ಗುರು ಅದೃಶ್ಯ ಕಾಡಸಿದ್ದೇಶ್ವರ  ದಿವ್ಯಸಾನ್ನಿಧ್ಯದಲ್ಲಿ ದೇವಸ್ಥಾನದ ಮಹಾದ್ವಾರದ ಉದ್ಘಾಟನೆ ಜರುಗುವುದು, ಎರೆಹೊಸಹಳ್ಳಿಯ ವೇಮನಾನಂದ ಮತ್ತು ಸುಣಧೋಳಿಯ ಶಿವಾನಂದ ಉದ್ಘಾಟನೆ ನೆರವೇರುವುದು, ಘೋಡಗೆರಿಯ ಮಲ್ಲಯ್ಯ ಮತ್ತು ಮುಧೋಳದ ಸಿದ್ಧರಾಮ ಶಿವಯೋಗಿಗಳು  ಅನುಭಾವ ನುಡಿ ಹೇಳುವರು. ಸಂಜೆ 5ಕ್ಕೆ ರಥೋತ್ಸವ ಜರುಗುವುದು.  

ಕಾರ್ಯಕ್ರಮದಲ್ಲಿ ಪ್ರತಿ ನಿತ್ಯ ದಾನಿಗಳಿಗೆ ಸನ್ಮಾನ,  ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಅನ್ನದಾಸೋಹ ಇರುವುದು ಎಂದು ತಿಳಿಸಿದ್ದರು. 

ವೀರಭದ್ರೇಶ್ವರ ದೇವಸ್ಥಾನ ಆಡಳಿತ ಮಂಡಳಿ ಉಪಾಧ್ಯಕ್ಷ ಮಲ್ಲಪ್ಪ ಗಾಣಿಗೇರ, ಮಲ್ಲಪ್ಪ ಶೆಟ್ಟರ, ಅರ್ಚಕ ಶಿವಾನಂದ ಪೂಜೇರಿ ಇದ್ದರು. 



ಸುದ್ದಿ ಓದಿ