ಮುಂಡರಗಿ

ಬಯಲಾಟ ಸಂಭ್ರಮ ಕಾರ್ಯಕ್ರಮ ಉದ್ಘಾಟನೆ

ಬಯಲಾಟ ಸಂಭ್ರಮ ಕಾರ್ಯಕ್ರಮ ಉದ್ಘಾಟನೆ

ಮುಂಡರಗಿ 22:  ವಿಶ್ವದಲ್ಲಿಯೇ ಐತಿಹಾಸಿಕ, ಪರಂಪರೆಯನ್ನು ಹೊಂದಿರುವಂತಹ ಕರ್ನಾಟಕದ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳಸಬೇಕಾಗಿದೆ, ಅದರಲ್ಲಿಯು ನಾಡಿನ ಕಲೆ ಸಂಸ್ಕೃತಿಯನ್ನು  ಬಿಂಬಿಸುವ  ದೊಡ್ಡಾಟ, ಹಾಗೂ ಬಯಲಾಟಗಳನ್ನು ಉಳಿಸಿ ಬೆಳಸುವದಕ್ಕೆ ಯುವ ಜನಾಂಗ ಮುಂದಾಗಬೇಕು ಎಂದು ಶಿರಹಟ್ಟಿ ಕ್ಷೇತ್ರದ ಶಾಸಕರಾದ ರಾಮಣ್ಣ ಲಮಾಣಿ ಹೇಳಿದರು. 

ಪಟ್ಟಣದ ಶಿರೋಳ ರಸ್ತೆಯಲ್ಲಿರುವಂತಹ ಜಗದ್ಗುರು ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಬಯಲಾಟ ಆಕಾಡೆಮಿ ಬಾಗಲಕೋಟಿ, ಹಾಗೂ ಜಾನಪದ ಬಯಲಾಟ (ದೊಡ್ಡಾಟ) ಕಲಾ ಪರಿಷತ್ ಮುಂಡರಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಅ.17 ರಂದು ಹಮ್ಮಿಕೊಂಡ ವಿಚಾರ ಸಂಕಿರಣ, ಪ್ರಾತ್ಯಕ್ಷಿಕೆ, ದೊಡ್ಡಟಾಪ್ರದರ್ಶನ ಹಾಗೂ ಗೌರವ ಸನ್ಮಾನ ಕಾರ್ಯಕ್ರಮಗಳನ್ನು ಒಳಗೊಂಡ ಬಯಲಾಟ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಮುಂಡರಗಿ ತಾಲೂಕಿನ ಕಲಾವಿದರು, ಸಾಹಿತಿಗಳು, ಮುಂಡರಗಿ ನಗರದಲ್ಲಿ ರಂಗ ಮಂದಿರ ನಿರ್ಮಾಣ ಮಾಡಿಸಬೇಕೆಂದು ಬೇಡಿಕೆ ನೀಡಿದ್ದು ಮುಂದಿನ ದಿನಗಳಲ್ಲಿ ಸರಕಾರದ ಮೇಲೆ ಒತ್ತಡ ತರುವದರ ಮೂಲಕ ಸುಂದರವಾದ ರಂಗ ಮಂದಿರ ನಿರ್ಮಾಣ ಮಾಡುವದಕ್ಕೆ ಪ್ರಮಾಣಿ ಪ್ರಯತ್ನ ಮಾಡುತ್ತೆನೆ ಎಂದು ರಾಮಣ್ಣ ಲಮಾಣಿ ಹೇಳಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸರಕಾರದ ಕರ್ನಾಟಕ ಬಯಲಾಟ ಆಕಾಡೆಮಿ ಬಾಗಲಕೋಟಿ, ಅಧ್ಯಕ್ಷರಾದ ಅಜಿತ್ ಬನಾಪೂರ ಮಾತನಾಡುತ್ತಾ, ರಾಜ್ಯದಲ್ಲಿ  ಅದರಲ್ಲಿಯು ಉತ್ತರ ಕರ್ನಾಟಕ ಭಾಗದಲ್ಲಿ ನಶಿಸಿಹೊಗುತ್ತಿರುವಂತಹ ಜಾನಪದ ಕಲೆಯನ್ನು ಉಳಿಸಿ ಬೆಳೆಸುವದಕ್ಕಾಗಿ ರಾಜ್ಯ ಸರಕಾರವು ಬಯಲಾಟ ಆಕಾಡೆಮಿಯ ಸಂಸ್ಥೆಯನ್ನು ಪ್ರಾರಂಭಿಸಿದೆ, ಆದ್ದರಿಂದ ಬಾಗಲಕೋಟಿಯ ಕರ್ನಾಟಕ ಬಯಲಾಟ ಆಕಾಡೆಮಿ ನಾಡಿನಾಧ್ಯಂತಹ ಸಂಚರಿಸಿ ಜಾನಪದ ಕಲೆ ಹಾಗೂ ಸಾಹಿತ್ಯವನ್ನು ಉಳಿಸಿ ಬೆಳಸುವದರೊಂದಿಗೆ ಸಂರಕ್ಷಿಸುವ ಕೆಲಸ ಮಾಡುತ್ತದೆ.  

ಉತ್ತರ ಕರ್ನಾಟಕ ಭಾಗದಲ್ಲಿ ಬಯಲಾಟಗಳು, ದೊಡ್ಡಾಟಗಳಿಗೆ ಹೆಚ್ಚು ಪ್ರಾಧಾನ್ಯತೆ ಇದೆ, ಆದರೆ ಅವು ಇಂದಿನ ವೈಜ್ಞಾನಿಕ ಹಾಗೂ ತಂತ್ರಜ್ಞಾನದ ಯುಗಕ್ಕೆ ಹೊಂದಾಣಿಕೆಯಾಗುತ್ತಿಲ್ಲಾ, ಆದ್ದರಿಂದ ಕರ್ನಾಟಕ ಬಯಲಾಟ ಆಕಾಡೆಮಿಯು ಹಳೆಯ ಪ್ರಾಯದ ದೊಡ್ಡಟಾ, ಹಾಗೂ ಬಯಲಾಟಗಳನ್ನು ನವೀಕರಿಸುವದರೊಂದಿಗೆ ಕಾಲಘಟ್ಟಕ್ಕೆ ಹೊಂದುವರ ರೀತಿಯಲ್ಲಿ ವಿನ್ಯಾಸ ಮಾಡುವದಕ್ಕೆ ಮುಂದಾಗಿದೆ, ಹಾಗೇ ವಿದ್ಯಾರ್ಥಿ ಯುವ ಜನತೆಗೆ, ತರಬೇತಿ ಶಿಬಿರ ನಡೆಸುವದು, ಹಾಗೇ ರಾಜ್ಯದಾಧ್ಯಂತಹ ಇರುವಂತಹ ಪ್ರತಿಭಾನ್ವೀತ ಕಲಾವಧಿರನ್ನು ಗುರುತಿಸಿ ಪ್ರಶಸ್ತಿ ಪ್ರಧಾನ ಮಾಡುವದರ ಮೂಲಕ ಗೌರವಿಸುವ ಕೆಲಸವನ್ನು ಕರ್ನಾಟಕ ಬಯಲಾಟ ಆಕಾಡೆಮಿ ಮಾಡುತ್ತಿದೆ. ಆದರೆ ಯುವ ಜನಾಂಗ ಮಾತ್ರ ದೊಡ್ಡಾಟ, ಬಯಲಾಟದ ಬಗ್ಗೆ ಆಸಕ್ತಿ ಕಡಿಮೆ ಮಾಡುತ್ತಿದ್ದು, ಈ ಕಲೆಗಳು ಉಳಿಸುವ ಗುರಿಯನ್ನು ಕರ್ನಾಟಕ ಬಯಲಾಟ ಆಕಾಡೆಮಿ ಹೊಂದಿದೆ ಎಂದು ಹೇಳಿದರು. 

 ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು ವಹಿಸಿದ್ದರು. 

ಸಂಧರ್ಭದಲ್ಲಿ ಮುಂಡರಗಿ ತಾಲೂಕಿನ ಹಿರಿಯ ದೊಡ್ಡಾಟ, ಹಾಗೂ ಬಯಲಾಟ ಕಲಾವಿದರಾದ ದಾನಪ್ಪ ಹಡಪದ, ದೇವೆಂದ್ರ​‍್ಪ ಬಂಡಾರಿ, ಹುಚ್ಚುಸಾಬ ನದಾಫ್, ಧಾಮಲ್ಪೆಪ್ಪ ಲಮಾಣಿ, ರಾಮಸ್ವಾಮಿ ನಿಟ್ಟಾಲಿ, ದೇವಪ್ಪ ನಾಯಕ, ಫಕ್ಕೀರ​‍್ಪ ಉಪ್ಪಾರ, ಚನ್ನಪ್ಪ ಹೂಗಾರ ರನ್ನು ಕರ್ನಾಟಕ ಬಯಲಾಟ ಆಕಾಡೆಮಿ ವತಿಯಿಂದ ಸನ್ಮಾಸಿ ಗೌರವಿಸಲಾಗಿತು. 

ಬಸವರಾಜ ಶಿಗ್ಗಾಂವ ಇವರ ನೇತೃತ್ವದಲ್ಲಿ ಅಶೋಕ ಕುರಬರ, ನೀಲಪ್ಪ ಸುಣಗಾರ, ರಾಮಣಗೌಡ ಪಾಟೀಲ ಹಾಗೂ ಕರ್ನಾಟಕ ಜಾನಪದ ವಿಶ್ವವಿಧ್ಯಾಲಯ ಗೊಟಗೋಡಿ, ಮತ್ತು ರಂಗಚೈತನ್ಯ ಬಯಲಾಟ ಅಧ್ಯಾಯನ ಮತ್ತು ಸಂಶೋಧನಾ ಕೇಂದ್ರ ಹೂವಿನ ಹಡಗಲಿ ಸಂಘಟನೆಯಿಂದ ಪ್ರಾತ್ಯಕ್ಷಿಕೆ. ದೊಡ್ಡಾಟ ಸಂಗೀತ ಮತ್ತು ಕುಣಿತ ಕಾರ್ಯಕ್ರಮ ಜರುಗಿತು. 

ಕಾರ್ಯಕ್ರಮದಲ್ಲಿ ಮುಖಂಡರಾದ ಕರಬಸಪ್ಪ ಹಂಚನಾಳ, ಹೇಮಗೀರೀಶ ಹಾವಿನಾಳ,  ಕುಮಾರಸ್ವಾಮಿ ಹಿರೇಮಠ, ದೇವು ಹಡಪದ, ಮಾರುತಿ ಚಿಟಗಿ, ವೈ.ಎನ್‌. ಗೌಡರ, ಬಿ.ಬಾಬು, ವೆಂಕಟೇಶ ಈಡಿಗರ, ಈಶಪ್ಪ ಬಡಿಗೇರ, ಪ್ರಾಣೇಶ ಪುರದ, ಯಲ್ಲಪ್ಪ ಮಡಿವಾಳರ, ಮರಿಯಪ್ಪ ಹಂಪಸಾಗರ, ಗೋಪಾಲಕೃಷ್ಣ ಭರಮ್ಮಣನವರ, ಮಲ್ಲಿಕಾರ್ಜುನ ಕಲ್ಮಠ, ಮಲ್ಲಿಕಾರ್ಜುನ ಹಡಪದ, ಓಂಪ್ರಕಾಶ ಲಿಂಗಶೇಟ್ಟರ, ಶರಣಪ್ಪ ಮಲ್ಲಾಪೂರ ಮುಂತಾದವರು ಉಪಸ್ಥಿತರಿದ್ದರು. 

ಸರ್ವರನ್ನು ಮುಂಡರಗಿ ಜಾನಪದ ಬಯಲಾಟ ಕಲಾ ಪರಿಷತ್ ಅಧ್ಯಕ್ಷ ಮೌನೇಶ್ವರ ಬಡಿಗೇರ ಸ್ವಾಗತಿಸಿದರೆ, ಡಾ.ಕೆ.ರುದ್ರ​‍್ಪ ನಿರೂಪಿಸಿದರೆ, ಕೊನೆಗೆ ಶಿವಪ್ಪ ಅರವಟಗಿ ವಂದಿಸಿದರು. 


ಸುದ್ದಿ ಓದಿ