ಮತದಾರ ಸಾಕ್ಷಾರತ ಕ್ಲಬ್ನ ಉದ್ಘಾಟನಾ ಕಾಯಕ್ರಮ
ಲೋಕದರ್ಶನ ವರದಿ
ಮುಂಡರಗಿ 31: ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹಲವಾರು ಪತ್ರಿಕೆಗಳ ಮೂಲಕ ಇಂಗ್ಲೀಷರನ್ನು ದೇಶದಿಂದ ಹೊರಗೆ ಅಟ್ಟುವಲ್ಲಿ ಪತ್ರಿಕೆಗಳು ಬಹುಮುಖ್ಯವಾಗಿ ಕಾರ್ಯನಿರ್ವಹಿಸಿವೆ ಎಂದು ಪತ್ರಕರ್ತ ಹು.ಬಾ.ವಡ್ಡಟ್ಟಿ ತಿಳಿಸಿದರು.
ಪಟ್ಟಣದ ಜೆ.ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್, ಜೆ.ಟಿ.ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಕಸಾಪ ವಿಧ್ಯಾರ್ಥಿ ಘಟಕ, ರೇಜರ್ಸ, ಮತದಾರ ಸಾಕ್ಷಾರತ್ ಕ್ಲಬ್ನ ಉದ್ಘಾಟನಾ ಕಾಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದ ನಾಲ್ಕನೇಯ ಅಂಗವಾಗಿ ಪತ್ರಿಕೆ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರದ ಅನೇಕ ಸಮಸ್ಯೆಗಳ ಜೊತೆಗೆ ತಪ್ಪುಗಳನ್ನು ಹೊಡೆದೊಡಿಸಿ ಸಮಾಜಕ್ಕೆ ಬೆಳಕನ್ನು ಚೆಲ್ಲುವ ಕೆಲಸವನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ ಕೇವಲ ಪತ್ರಿಕೆ ಅಂದರೆ ಓದುವುದಕ್ಕಷ್ಟೇ ಸಿಮೀತವಾಗಬಾರದು, ಅದರಲ್ಲಿರುವ ಮಹತ್ವ ಅಂಶಗಳನ್ನು ಅರಿತುಕೊಂಡಾಗ ಮಾತ್ರ ಮಾದ್ಯಮದಲ್ಲಿನ ಮಹತ್ವದ ಅರಿವು ಗೊತ್ತಾಗುತ್ತದೆ. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಪತ್ರಿಕೆ ಓದುವದರೊಂದಿಗೆ ದೇಶ ಪ್ರೇಮ ಬೆಳೆಸಿಕೊಂಡು ಕನ್ನಡ ನಾಡು, ನೆಲ, ಜಲ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು.
ಕಸಾಪ ತಾಲೂಕಾ ಅದ್ಯಕ್ಷ ಎಂ.ಜಿ.ಗಚ್ಚಣ್ಣವರ ಮಾತನಾಡಿ, ಸಾಹಿತ್ಯ ವಿದ್ಯಾರ್ಥಿ ಘಟಕ ಮಾಡುತ್ತಿರುವುದು ಇತಿಹಾಸವಾಗಿದೆ, ಯಾಕೆಂದರೆ ಸಾಹಿತ್ಯಸಕ್ತರಲ್ಲಿ ಸಾಹಿತ್ಯ ಬೆಳೆಯದೇ ಪ್ರತಿಯೊಬ್ಬ ವಿದ್ಯಾರ್ಥಿಗಳು ಕನ್ನಡ ರಕ್ಷಣೆಯ ಜೊತೆಗೆ ತಾಯಿ ಭುವನೇಶ್ವರಿ ಸೇವೇಗೆ ಸದಾ ಸಿದ್ದರಾಗಬೇಕು ಎನ್ನುವ ಉದ್ದೇಶದಿಂದ ವಿಧ್ಯಾರ್ಥಿ ಘಟಕವನ್ನು ಉದ್ಘಾಟಿಸಲಾಗಿದ್ದು, ಅಗಸ್ಟ 15 ರ 75ನೇ ಅಮೃತ ಮಹೋತ್ಸವದ ಕಾರ್ಯಕ್ರಮವನ್ನು ಕಸಾಪದಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಇದಕ್ಕಾಗಿ ಪದಾಧಿಕಾರಿಗಳು ಕನ್ನಡಾಭಿಮಾನಿಗಳು ಈಗಾಗಲೇ ಕಾರ್ಯಕ್ರಮ ರೂಪರೇಷಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಕಾರ್ಯನಿರತ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಹಾಗೂ ವಿವಿಧ ಘಟಕಗಳ ಉದ್ಘಾಟನೆಟಿಸಿ ಅವರಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಲಾಯಿತು.
ಕಾರ್ಯಕ್ರಮವನ್ನು ಉಪನ್ಯಾಸಕಿ ಕಾವೇರಿ ಭೋಲಾ ಸ್ವಾಗತಿಸಿ, ಉಪನ್ಯಾಸಕಿ ಅರುಣಾ ಗುಜ್ಜರಿ ನಿರೂಪಿಸಿ, ಮಂಜುನಾಥ ಮುದೋಳ ವಂದಿಸಿದರು. ರಮೇಶ ವೈ ಪಾಟೀಲ ಜಾನಪದ ಗೀತೆಯನ್ನು ಸಾದರಪಡಿಸಿದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಕಾಲೇಜ ಅಭಿವೃದ್ದಿ ಸಮಿತಿ ಅದ್ಯಕ್ಷ ಶ್ರೀನಿವಾಸ ಅಬ್ಬಿಗೇರಿ ವಹಿಸಿದ್ದರು.
ಈ ಸಂದರ್ಭದಲ್ಲಿ ಕಾಲೇಜ್ ಪ್ರಾಂಶುಪಾಲರಾದ ಶಂಭುಲಿಂಗ ಚಿಗರಿ, ಕಸಾಪ ಕಾರ್ಯದರ್ಶಿ ಎ.ಕೆ.ಮುಲ್ಲಾನವರ ಡಿ.ಕೆ.ಗುಡ್ಲಾನೂರ, ಮೀನಾಕ್ಷಿ, ಚೇತನ ಪಾಟೀಲ, ಅಕ್ಕಮಹಾದೇವಿ ಹಿರೇಮಠ, ನಾಗೇಶ ಹುಬ್ಬಳ್ಳಿ, ಪ್ರಶಾಂತ ಗುಡದಪ್ಪನವರ, ಮಹಾಂತೇಶ ಕೊರಡಕೇರಿ, ಪ್ರಕಾಶ ಪಾಟೀಲ, ಸೇರಿದಂತೆ ವಿದ್ಯಾರ್ಥಿಗಳು ಕಾಲೇಜ್ ಉಪನ್ಯಾಸಕ ವೃಂದವರು ಇತರರಿದ್ದರು.