ಕಾಬೂಲ್ ವಿಮಾನ ನಿಲ್ದಾಣದ ಪುನಾರಂಭಕ್ಕೆ ಟರ್ಕಿ, ಕತಾರ್‌ನೊಂದಿಗೆ ಸಂಪರ್ಕ; ಅಮೆರಿಕ
ವಾಷಿಂಗ್ಟನ್, ಸೆ 1: ಅಫ್ಗಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದ ನಾಗರಿಕ ಭಾಗದ ಕಾರ್ಯಾಚರಣೆಯನ್ನು ಪುನಃಸ್ಥಾಪಿಸಲು ಹಾಗೂ ಮಾನವೀಯ ನೆರವು ಪೂರೈಸಲು ಟರ್ಕಿ ಮತ್ತು ಕತಾರ್ ನೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಅಮೆರಿಕದ ಶ್ವೇತಭವನದ ವಕ್ತಾರ ಜೆನ್ ಸಾಕಿ ಮಂಗಳವಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಬೂಲ್ ವಿಮಾನ ನಿಲ್ದಾಣದ ಮುಂಭಾಗದಲ್ಲಿ, ಕತಾರಿಗಳು ಮತ್ತು ಅಲ್ಲಿನ ಪ್ರಮುಖ ಪಾಲುದಾರರಾಗಿರುವ ಟರ್ಕಿಯರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
ವಿಮಾನ ನಿಲ್ದಾಣದ ನಾಗರಿಕ ಭಾಗವನ್ನು ಮತ್ತೆ ಕಾರ್ಯಗತಗೊಳಿಸುವುದರಿಂದ, ಜನಸಾಮಾನ್ಯರು ಅದನ್ನು ಬಳಸಲು ನೆರವಾಗುವುದರ ಜೊತೆಗೆ, ಮಾನವೀಯ ನೆರವು ಒದಗಿಸಲು ಅನುಕೂಲಕರವಾಗುತ್ತಿದೆ. ಈ ನಿಟ್ಟಿನಲ್ಲಿ ಅಮೆರಿಕ ವಿಶ್ವ ಆಹಾರ ಕಾರ್ಯಕ್ರಮ ಮತ್ತು ಇತರ ವಿತರಣೆಯಂತಹ ಕಾರ್ಯಕ್ರಮಗಳ ಮೂಲಕ ಕೆಲಸ ಮಾಡಲಿದೆ ಎಂದು ಹೇಳಿದರು.