ಕಪಿಲ್ ಶರ್ಮಾ ಶೋ ಸೇರಿಕೊಳ್ಳಲು ಇಮ್ರಾನ್ ಖಾನ್‍ಗೆ ಮಾಜಿ ಪತ್ನಿ ಸಲಹೆ
ಇಸ್ಲಾಮಾಬಾದ್: ಏಪ್ರಿಲ್ 14 : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಮ್ ಖಾನ್ ವಿಚಿತ್ರ ಸಲಹೆಯೊಂದನ್ನು ನೀಡಿದ್ದಾರೆ. ಮಾಜಿ ಪ್ರಧಾನಿಗೆ ನಗುವ ಕಲೆ ಇದೆ ಎಂದು ಹೇಳಿರುವ ರೆಹಾಮ್, ಭಾರತೀಯ ಟಿವಿ ಕಾರ್ಯಕ್ರಮ ‘ದಿ ಕಪಿಲ್ ಶರ್ಮಾ ಶೋ’ ಗೆ ಸೇರುವ ಮೂಲಕ ನವಜೋತ್ ಸಿಂಗ್ ಸಿಧುವನ್ನು ಬದಲಾಯಿಸಬಹುದು ಎಂದು ಹೇಳಿದ್ದಾರೆ.
ರೆಹಮ್ ಖಾನ್ ಯಾವಾಗಲೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಹೇಳಿಕೆ ನೀಡುವುದ ಮೂಲಕ ಖ್ಯಾತರಾಗಿದ್ದಾರೆ. ಅಲ್ಲದೆ, ಅವರು ಪಾಕಿಸ್ತಾನದ ಮಾಜಿ ಪ್ರಧಾನಿಯ ಪ್ರಬಲ ಟೀಕಾಕಾರರಲ್ಲೊಬರಾಗಿದ್ದಾರೆ. ಇಮ್ರಾನ್ ಖಾನ್ ಭಾರತೀಯರಿಗೆ ‘ಖುದರ್ ಕ್ವಾಮ್’ ಎಂದು ಹೇಳಿದ್ದಕ್ಕೆ ರೆಹಮ್ ಖಾನ್ ಈ ಸಲಹೆ ನೀಡಿದ್ದಾರೆ. ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಇಮ್ರಾನ್ ಖಾನ್, ಭಾರತ ಮತ್ತು ಭಾರತೀಯರನ್ನು ತೀವ್ರವಾಗಿ ಹೊಗಳಿದ್ದರು. ತನ್ನನ್ನು ಅಧಿಕಾರದಿಂದ ಕೆಳಗಿಳಿಸಲು ವಿದೇಶಿ ಪಿತೂರಿ ನಡೆದಿದೆ ಎಂದು ಆರೋಪಿಸಿದ್ದರು.
ಇಮ್ರಾನ್ ವಿದೇಶಿ ಪಿತೂರಿ ಆರೋಪಕ್ಕೆ ವ್ಯಂಗ್ಯಭರಿತ ಪ್ರತಿಕ್ರಿಯೆ ನೀಡಿರುವ ರೆಹಮ್, ಇಮ್ರಾನ್ ಖಾನ್ ಬಾಲಿವುಡ್‌ನಲ್ಲಿ ಕೆಲಸ ಹುಡುಕಬೇಕು. ಹಾಸ್ಯನಟರಲ್ಲದೆ ಭಾವುಕರಾಗಿಯೂ ಇರಬಲ್ಲರು. ಹೀಗಾಗಿ ಅವರಿಗೆ ಭಾರತ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ಬಾಲಿವುಡ್ ಮೂಲಕ ಅವರು ಆಸ್ಕರ್ ವಿಜೇತ ಪ್ರದರ್ಶನವನ್ನು ಸಹ ನೀಡಬಲ್ಲರು ಎಂದು ವ್ಯಂಗ್ಯ ಮಾಡಿದ್ದಾರೆ.
ರೆಹಮ್ ಖಾನ್ ಅವರು ಪಾಕಿಸ್ತಾನಿ ವರದಿಗಾರರೊಂದಿಗಿನ ಚರ್ಚೆಯಲ್ಲಿ ಈ ವಿಷಯಗಳನ್ನು ಪ್ರಸ್ತಾಪ ಮಾಡಿದ್ದಾರೆ. ಇಮ್ರಾನ್ ಖಾನ್ ನಾಯಕನ ಅಥವಾ ವಿಲನ್ ಪಾತ್ರ ಮಾಡಬೇಕು ಎಂದು ಕೇಳಿದಾಗ, ಇದು ಅವರ ಮೇಲೆ ಅವಲಂಬಿತವಾಗಿದೆ. ಬಾಲಿವುಡ್‌ನಲ್ಲಿ ಹೀರೋ ಪಾತ್ರಧಾರಿಗಳು ವಿಲನ್ ಆಗುತ್ತಾರೆ. ಮುಂದೆ ವಿಲನ್‌ಗಳು ಹೆಚ್ಚು ಜನಪ್ರಿಯರಾಗುತ್ತಾರೆ ಎಂದು ರೆಹಮ್ ತಿಳಿಸಿದ್ದಾರೆ. ಆದರೆ ಇಮ್ರಾನ್ ಖಾನ್ ಹಾಸ್ಯನಟ ಗುಣವನ್ನು ಹೊಂದಿದ್ದಾರೆ. ಆದ್ದರಿಂದ ಅವರು ಕಪಿಲ್ ಶರ್ಮಾ ಶೋನಲ್ಲಿ ‘ಪಾಜಿ’ (ನವಜೋತ್ ಸಿಂಗ್ ಸಿಧು) ಅನ್ನು ಬದಲಾಯಿಸಬಹುದು. ಏಕೆಂದರೆ ಅದು ಖಾಲಿ ಇದೆ. ಇಮ್ರಾನ್ ಖಾನ್ ಸಿಧು ಪಾಜಿಯೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ ಸೋತ ಬಳಿಕ ಸಿಧು ಶೋ ದಿಂದ ಔಟ್
ಮಾಜಿ ಕ್ರಿಕೆಟಿಗ ಹಾಗೂ ಇಮ್ರಾನ್ ಖಾನ್ ಸ್ನೇಹಿತ ನವಜೋತ್ ಸಿಂಗ್ ಸಿಧು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಅವರು ಇತ್ತೀಚಿನ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಅಮೃತಸರ ಪೂರ್ವ ಕ್ಷೇತ್ರದಿಂದ ಹೀನಾಯವಾಗಿ ಸೋತಿದ್ದಾರೆ. ಇದಾದ ಬಳಿಕ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಅವರು ಕಪಿಲ್ ಶರ್ಮಾ ಶೋನಲ್ಲಿ ವಿಶೇಷ ಅತಿಥಿಯಾಗಿದ್ದರು. ಆದರೆ ಪುಲ್ವಾಮಾ ಭಯೋತ್ಪಾದಕ ದಾಳಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನಂತರ ಸಿಧು ಅವರನ್ನು ಕಾರ್ಯಕ್ರಮದಿಂದ ತೆಗೆದು ಹಾಕಲಾಗಿದೆ.