ನ್ಯೂಯಾರ್ಕ್ ಟೈಂ ಸ್ಕ್ವೇರ್ ಬಿಲ್ ಬೋರ್ಡ್ ಮೇಲೆ ಇಳಯರಾಜ ...!
ನ್ಯೂಯಾರ್ಕ್, ನ 20 : ಸುಪ್ರಸಿದ್ದ ಸಂಗೀತ ಸಂಯೋಜಕ ಇಳಯರಾಜ ಅವರ ಸಂಗೀತ ಮಾಧುರ್ಯದ ಬಗ್ಗೆ ಹೊಸದಾಗಿ ಹೇಳುವ ಅಗತ್ಯವಿಲ್ಲ. ನಿನ್ನೆ ನ್ಯೂಯಾರ್ಕ್ ನಗರದಲ್ಲಿರುವ ಟೈಂ ಸ್ಕ್ವೇರ್ ಬಿಲ್‌ಬೋರ್ಡ್ ಮೇಲೆ ಅವರ ಚಿತ್ರ ವಿರುವ ಬ್ಯಾನರ್ ಪ್ರದರ್ಶಿಸಲಾಯಿತು. ಈ ವಿಷಯವನ್ನು ಸಂಗೀತ ಸಂಯೋಜಕ ಇಳಯರಾಜ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ. ಮ್ಯೂಜಿಕಲ್ ಸ್ಟ್ರೀಮಿಂಗ್ ಸೇವೆ ನೀಡುವ ಸ್ಪೂಟಿ ಫೈ ಜಾಹಿರಾತು ಭಾಗವಾಗಿ ಚಿತ್ರ ಪ್ರದರ್ಶಿಸಿಲಾಗಿದೆ. ನ್ಯೂಯಾರ್ಕ್‌ನಲ್ಲಿ ಇಸೈಜ್ಞಾನಿ (ಮ್ಯೂಜಿಕಲ್ ಜೀನಿಯಸ್) ಇಳಯರಾಜ ಪೋಸ್ಟರ್ ನೋಡಿ ಅವರ ಕುಟುಂಬ ಸದಸ್ಯರು, ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.
ದೇಶದ ಸುಪ್ರಸಿದ್ಧ ಸಂಗೀತ ನಿರ್ದೇಶಕರಲ್ಲಿ ಇಳಯರಾಜ ಒಬ್ಬರು. ಇತ್ತೀಚೆಗೆ ಸ್ಪೂಟಿಫೈ ನೊಂದಿಗೆ ಅವರು ಸಹಯೋಗ ಸಾಧಿಸಿ, ಪ್ರಚಾರ ನಡೆಸುತ್ತಾರೆ. ಸ್ಪೂಟಿಫೈನಲ್ಲಿ ಅವರ ಪ್ಲೇ ಲಿಸ್ಟ್ ಪ್ರಮೋಟ್ ಮಾಡಲು 3 ನಿಮಿಷಗಳ ಜಾಹಿರಾತಿನಲ್ಲೂ ಇಳಯರಾಜ ಕಾಣಿಸಿಕೊಂಡಿದ್ದಾರೆ. ನವೆಂಬರ್ 19 ರಂದು ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ಮೇಲೆ ಇಳಯರಾಜ ಬ್ಯಾನರ್ ಪ್ರದರ್ಶಿಸಲಾಯಿತು. 'ಈ ದಿನ ಬಹಳ ಪವಿತ್ರವಾದ ದಿನ ನ್ಯೂಯಾರ್ಕ್‌ನ ಬಿಲ್ ಬೋರ್ಡ್ಸ್ ಆಫ್ ಟೈಮ್ಸ್ ಸ್ಕ್ವೇರ್‌ನಲ್ಲಿ 'ರಾಜಾ ಆಫ್' ಸಂಗೀತ', 'ರಾಜಾ ರೂಲ್ಸ್' ಎಂದು ಬರೆದಿದ್ದಾರೆ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಇಳಯರಾಜ ಪುತ್ರ ಸಂಗೀತ ನಿರ್ದೇಶಕ ಕಾರ್ತಿಕ್ ರಾಜಾ, ಈ ಯಶಸ್ಸು ಅವರ ವೃತ್ತಿ ಜೀವನದ ಒಂದು ಮೆಟ್ಟಿಲು ಎಂದು ಬಣ್ಣಿಸಿದ್ದಾರೆ.
'ಅವರು ನಮ್ಮೆಲ್ಲರಿಗಿಂತ ಮುಂದಿರುತ್ತಾರೆ. ಕುಟುಂಬದೊಂದಿಗಿರಿ, ದೊಡ್ಡವರು ಸದಾ ಮೊದಲಿರುತ್ತಾರೆ ಎಂದು ವಸ್ತ್ರ ವಿನ್ಯಾಸಕ ವಾಸುಕಿ ಭಾಸ್ಕರ್ ಹೇಳಿದ್ದಾರೆ. ಪ್ರಸ್ತುತ ವಿದುತಾಲಯ, ಮಾಯನ್, ತುಪ್ಪರಿವಾಳನ್, ತಮಿಳುರಸನ್ ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಇಳಯರಾಜ ಕಾರ್ಯನಿರ್ವಹಿಸುತ್ತಿದ್ದಾರೆ.