ತಾಲಿಬಾನ್ ಸಹಕರಿಸಿದರೆ ಆಗಸ್ಟ್ 31ರೊಳಗೆ ತೆರವು ಕಾರ್ಯ ಮುಕ್ತಾಯ : ಅಮೆರಿಕ
ವಾಷ್ಇಂಗ್ಟನ್, ಆಗಸ್ಟ್ 25: ತಾಲಿಬಾನ್ ಸಂಘಟನೆಯು ಸೇನಾ ಕಾರ್ಯಾಚರಣೆಗೆ ಅಡ್ಡಿಪಡಿಸದಿದ್ದಲ್ಲಿ ಆಗಸ್ಟ್ ಅಂತ್ಯದ ವೇಳೆಗೆ ಅಫ್ಘಾನಿಸ್ತಾನದಲ್ಲಿ ಸ್ಥಳಾಂತರಿಸುವ ಕಾರ್ಯಾಚರಣೆ ಪೂರ್ಣಗೊಳಿಸಲು ಅಮೆರಿಕ ಸಿದ್ಧವಿದೆ ಎಂದು ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.
"ನಾವು ಪ್ರಸ್ತುತ ಆಗಸ್ಟ್ 31 ರೊಳಗೆ ತೆರವು ಕಾರ್ಯ ಮುಗಿಸುವ ವೇಗದಲ್ಲಿದ್ದೇವೆ" ಎಂದು ಬಿಡೆನ್ ಮಂಗಳವಾರ ಶ್ವೇತಭವನದಲ್ಲಿ ಹೇಳಿಕೆ ನೀಡಿದರು. "ಆದರೆ ಆಗಸ್ಟ್ 31 ರೊಳಗೆ ಪೂರ್ಣಗೊಳ್ಳುವಿಕೆಯು ತಾಲಿಬಾನ್ ಸಹಕಾರವನ್ನು ಮುಂದುವರಿಸುವುದರ ಮೇಲೆ ಅವಲಂಬಿತವಾಗಿರುತ್ತದೆ” ಎಂದಿದ್ದಾರೆ.
ಕಳೆದ 12 ಗಂಟೆಗಳಲ್ಲಿ ಕಾಬೂಲ್‌ನಿಂದ 19 ಅಮೆರಿಕಾ ಸೇನಾ ವಿಮಾನಗಳು 6,400 ಜನರನ್ನು ಸ್ಥಳಾಂತರಗೊಳಿಸಿದೆ. ಮತ್ತು 5,600 ಜನರನ್ನು 31 ಒಕ್ಕೂಟದ ವಿಮಾನಗಳು ಸ್ಥಳಾಂತರಿವೆ. ಆಗಸ್ಟ್ 14 ರ ಹೊತ್ತಿಗೆ, ಕಾಬೂಲ್‌ನಿಂದ 70,700 ಜನರನ್ನು ಸ್ಥಳಾಂತರಿಸಲು ಅಮೆರಿಕ ಸಹಕರಿಸಿದೆ ಎಂದು ಬಿಡೆನ್ ಹೇಳಿದ್ದಾರೆ.
ಇನ್ನೂ ಅಫ್ಘಾನಿಸ್ಥಾನದಲ್ಲಿರುವ ಅಮೆರಿಕನ್ನರ ಸಂಖ್ಯೆಯ ಕುರಿತು ಬುಧವಾರ ನವೀಕರಣವನ್ನು ನೀಡುವಂತೆ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್‌ಗೆ ನಿರ್ದೇಶನ ನೀಡಿರುವುದಾಗಿಯೂ ಬಿಡೆನ್ ಹೇಳಿದ್ದಾರೆ. ಈ ವಾರದ ಆರಂಭದಲ್ಲಿ ಏರ್‌ಪೋರ್ಟ್‌ನಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಅಫ್ಘಾನ್ ಭದ್ರತಾ ಅಧಿಕಾರಿಯನ್ನು ಕೊಂದು ಮೂವರನ್ನು ಗಾಯಗೊಳಿಸಿದಾಗ ನಡೆದ ಗುಂಡಿನ ಚಕಮಕಿಯನ್ನು ಆತ ಉಲ್ಲೇಖಿಸಿ, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕ ಮತ್ತು ಮಿತ್ರ ಪಡೆಗಳು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪಿನಿಂದ ದಾಳಿ ನಡೆಸುವ ಅಪಾಯವನ್ನು ಎದುರಿಸುತ್ತಿದೆ ಎಂದು ಬಿಡೆನ್ ಒತ್ತಿ ಹೇಳಿದ್ದಾರೆ.