IND vs SA: ಆನ್ಲೈನ್ ಟಿಕೆಟ್ ಬುಕ್ ಮಾಡುವುದು ಹೇಗೆ?
ಬೆಂಗಳೂರು: ಜೂನ್ 02: ಕಳೆದ ಹಲವು ದಿನಗಳಿಂದ ಐಪಿಎಲ್ ನಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ಉಣಬಡಿಸಿದ ಟೀಂ ಇಂಡಿಯಾ ಆಟಗಾರರು, ಇದೇ ತಿಂಗಳು ಜೂನ್ 9 ರಿಂದ ದಕ್ಷಿಣ ಆಫ್ರಿಕಾ ವಿರುದ್ಧದ 5 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಸಜ್ಜಾಗಿದ್ದಾರೆ. ಕೆ ಎಲ್ ರಾಹುಲ್ ನಾಯಕತ್ವದಲ್ಲಿ ಈ ಪಂದ್ಯಗಳು ನಡೆಯಲಿದ್ದು, ರಿಷಬ್ ಪಂತ್ ಗೆ ಉಪ ನಾಯಕನ ಹೊಣೆ ನೀಡಲಾಗಿದೆ. ಇನ್ನು ಸ್ಟಾರ್ ಆಟಗಾರರದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯಗಳನ್ನು ಮೈದಾನಕ್ಕೆ ತೆರಳಿ ನೋಡುವುದು ಹೇಗೆ ಅನ್ನೋದನ್ನ ಯು.ಎನ್.ಐ. ಕನ್ನಡ ನಿಮಗೆ ತಿಳಿಸಕೊಡಲಿದೆ.
ಪಂದ್ಯದ ಟಿಕೆಟ್ಗಳು ಆನ್ಲೈನ್ ಮತ್ತು ಆಫ್ಲೈನ್ನಲ್ಲಿ ಲಭ್ಯವಿರುತ್ತವೆ. ಆನ್ಲೈನ್ನಲ್ಲಿ ಟಿಕೆಟ್ಗಳನ್ನು ಬುಕ್ ಮಾಡಲು, ವೀಕ್ಷಕರು ತಮ್ಮ ಮೊಬೈಲ್ ಫೋನ್ಗಳಲ್ಲಿ Paytm ಇನ್ಸೈಡರ್ ಅಪ್ಲಿಕೇಶನ್ ಅನ್ನು ಓಪನ್ ಮಾಡಬೇಕು. ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಬಳಸಿ ನೋಂದಾಯಿಸಿಕೊಳ್ಳಬೇಕು. ಮುಂದಿನ ಹಂತದಲ್ಲಿ, ಪ್ರೇಕ್ಷಕರು ಪ್ರಸ್ತುತ ಸ್ಥಳವನ್ನು ಆಯ್ಕೆ ಮಾಡಬೇಕಾಗುತ್ತದೆ. ಬಳಿಕ ಟಿಕೆಟ್ಗಳನ್ನು ಖರೀದಿಸಲು ಅವರು ಆಸಕ್ತಿ ಹೊಂದಿರುವ ಪಂದ್ಯವನ್ನು ಆಯ್ಕೆ ಮಾಡಬೇಕಾಗುತ್ತದೆ.
ಕ್ರಿಕೆಟ್ ಅಭಿಮಾನಿಗಳು ತಾವು ಕುಳಿತು ನೋಡಲು ಬಯಸುವ ಸ್ಟ್ಯಾಂಡ್ಗಳನ್ನು ಆಯ್ಕೆ ಮಾಡಬೇಕು, ಟಿಕೆಟ್ಗಳ ಸಂಖ್ಯೆಯನ್ನು ಆಯ್ಕೆ ಮಾಡಿ ಮತ್ತು ಟಿಕೆಟ್ಗಳನ್ನು ಖರೀದಿಸಲು ಮುಂದುವರಿಯಬೇಕು. ಈ ವೇಳೆ ಪ್ರೇಕ್ಷಕರು, ಸರ್ಕಾರಿ ಗುರುತಿನ ಚೀಟಿಯನ್ನು ಸಲ್ಲಿಸಬೇಕಾಗುತ್ತದೆ. ವೋಟರ್ ಐಡಿ / ಡ್ರೈವಿಂಗ್ ಲೈಸೆನ್ಸ್ ಐಡಿ ಅಥವಾ ಇತರೆ, ಅಗತ್ಯ ವಿವರಗಳನ್ನು ಒದಗಿಸಿ ಮತ್ತು ಪಾವತಿಯನ್ನು ಮುಂದುವರಿಸಬೇಕಾಗುತ್ತದೆ. ಟಿಕೆಟ್ ಖರೀದಿ ಯಶಸ್ವಿಯಾದ ಬಳಿಕ ಗ್ರಾಹಕರು ತಮ್ಮ ಮೊಬೈಲ್ ಫೋನ್ ಮತ್ತು ಇಮೇಲ್ ಐಡಿಯ ದೃಢೀಕರಣವನ್ನು ಪಡೆಯಲಿದ್ದಾರೆ. ಟಿಕೆಟ್ ದರಗಳು 850 ರೂಪಾಯಿಯಿಂದ ಪ್ರಾರಂಭವಾಗುತ್ತವೆ. ದೆಹಲಿಯಲ್ಲಿ ಮೊದಲ T20I ವೀಕ್ಷಿಸಲು ಉತ್ಸುಕರಾಗಿರುವವರಿಗೆ 10,000ಕ್ಕೂ ಅಧಿಕ ಹಣ ಪಾವತಿ ಮಾಡಬೇಕಾಗುತ್ತದೆ.