ICC T20 ವಿಶ್ವಕಪ್; “ಥಂಡರ್ ಜರ್ಸಿ” ಅನಾವರಣಗೊಳಿಸಿದ ಪಾಕಿಸ್ತಾನ
ನವದೆಹಲಿ: ಸೆಪ್ಟೆಂಬರ್ 19: ಪಾಕಿಸ್ತಾನ ಕ್ರಿಕೆಟ್ ಮಂಡಳಿಯು 2022 ರ ಟಿ20 ವಿಶ್ವಕಪ್ಗಾಗಿ ತನ್ನ ಅಧಿಕೃತ ಜರ್ಸಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು ಅಕ್ಟೋಬರ್ 23 ರಂದು ಭಾರತದ ವಿರುದ್ಧದ ಪಂದ್ಯದೊಂದಿಗೆ ತನ್ನ ಅಭಿಯಾನವನ್ನು ಪ್ರಾರಂಭಿಸುತ್ತದೆ. ಮಾರ್ಕ್ಯೂ ಪಂದ್ಯಾವಳಿಯ ಮೊದಲು ಜರ್ಸಿಯನ್ನು ಅನಾವರಣಗೊಳಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ , ” ಅತಿ ದೊಡ್ಡ ಬಿಗ್ ರಿವೀಲ್! ಅಧಿಕೃತ ಪಾಕಿಸ್ತಾನದ ಟಿ 20 ಥಂಡರ್ ಜರ್ಸಿ22 ಯನ್ನು ಪ್ರಸ್ತುತಪಡಿಸಲಾಗುತ್ತಿದೆ” ಎಂದು ಪೋಸ್ಟ್ ಮಾಡಲಾಗಿದೆ.
ಮುಂಬರುವ ಐಸಿಸಿ ಟಿ20 ವಿಶ್ವಕಪ್ಗೆ ಪಾಕಿಸ್ತಾನ ತಂಡವನ್ನು ಗುರುವಾರ ಪ್ರಕಟಿಸಿದೆ. ಬಾಬರ್ ಅಜಮ್ ನೇತೃತ್ವದ ತಂಡವು ಇತ್ತೀಚೆಗೆ ಏಷ್ಯಾಕಪ್ನಲ್ಲಿ ಸ್ಪರ್ಧಿಸಿದ ತಂಡದ ಸದಸ್ಯರನ್ನೇ ಹೊಂದಿದೆ. ಶಾದಾಬ್ ಖಾನ್ ಅವರನ್ನು ಉಪನಾಯಕನಾಗಿ ಹೆಸರಿಸಲಾಗಿದ್ದು, ಪ್ರಧಾನ ವೇಗಿ ಶಾಹೀನ್ ಶಾ ಆಫ್ರಿದಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಫ್ರಿದಿ ಜೊತೆಗೆ ನಸೀಮ್ ಶಾ, ಹ್ಯಾರಿಸ್ ರೌಫ್, ಮೊಹಮ್ಮದ್ ಹಸ್ನೈನ್ ಅವರಂತಹ ಪೇಸ್ ಬೌಲಿಂಗ್ ವಿಭಾಗವನ್ನು ಪಾಕಿಸ್ತಾನ ಹೊಂದಿದೆ. ಮೀಸಲು ಪಟ್ಟಿಯಲ್ಲಿ ಶಹನವಾಜ್ ದಹಾನಿ ಅವರನ್ನು ಹೆಸರಿಸಲಾಗಿದೆ.
ಏಷ್ಯಾಕಪ್ ನಲ್ಲಿ ಕಳಪೆ ಪ್ರದರ್ಶನ ತೋರಿದ ಫಖರ್ ಜಮಾನ್ ಅವರನ್ನು ಕೈಬಿಡಲಾಗಿದೆ. ಇಫ್ತಿಕರ್ ಅಹ್ಮದ್, ಮೊಹಮ್ಮದ್ ರಿಜ್ವಾನ್, ಆಸಿಫ್ ಅಲಿ, ಖುಶ್ದಿಲ್ ಶಾ ಮತ್ತು ಇತರರೊಂದಿಗೆ ಟೆಸ್ಟ್ ಆರಂಭಿಕ ಶಾನ್ ಮಸೂದ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಪಾಕಿಸ್ತಾನದ T20 ವಿಶ್ವಕಪ್ ತಂಡ: ಬಾಬರ್ ಅಜಮ್ (c), ಶಾದಾಬ್ ಖಾನ್ (vc), ಆಸಿಫ್ ಅಲಿ, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ಹಸ್ನೇನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಮ್, ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ, ಶಾನ್ ಮಸೂದ್, ಉಸ್ಮಾನ್ ಖಾದಿರ್
ಮೀಸಲು: ಫಖರ್ ಜಮಾನ್, ಮೊಹಮ್ಮದ್ ಹ್ಯಾರಿಸ್, ಶಹನವಾಜ್ ದಹಾನಿ.
ಐಸಿಸಿ T20 ವಿಶ್ವಕಪ್ 2022 ಅಕ್ಟೋಬರ್ 16 ರಂದು ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿದೆ.