ಐಸಿಸಿ ಏಕದಿನ ಶ್ರೇಯಾಂಕ: ಟಾಪ್ 10ರಲ್ಲಿ ವಿರಾಟ್-ರೋಹಿತ್
ದುಬೈ: ಏಪ್ರಿಲ್ 06 : ಇತ್ತೀಚಿನ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಭಾರತದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಅಗ್ರ ಐದು ಬ್ಯಾಟ್ಸ್ಮನ್ಗಳಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ ಪಾಕಿಸ್ತಾನದ ಬಾಬರ್ ಅಜಮ್ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಭಾರತದ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿ ಉಳಿದಿದ್ದಾರೆ ಮತ್ತು ರೋಹಿತ್ ಶರ್ಮಾ ನಾಲ್ಕನೇ ಸ್ಥಾನದಲ್ಲಿ ಆಸೀನರಾಗಿದ್ದಾರೆ.
ಇದೇ ವೇಳೆ ಜಸ್ಪ್ರೀತ್ ಬುಮ್ರಾ ಬೌಲರ್ಗಳಲ್ಲಿ ಅಗ್ರ 10 ರಲ್ಲಿರುವ ಏಕೈಕ ಭಾರತೀಯ. ಬೌಲರ್ಗಳ ಟೆಸ್ಟ್ ಶ್ರೇಯಾಂಕದಲ್ಲಿ ಅಶ್ವಿನ್ ಎರಡನೇ ಮತ್ತು ಬುಮ್ರಾ ಮೂರನೇ ಸ್ಥಾನದಲ್ಲಿದ್ದಾರೆ. ಬುಮ್ರಾ ಒಂದು ಸ್ಥಾನದ ಲಾಭ ಪಡೆದುಕೊಂಡಿದ್ದಾರೆ. ಶ್ರೇಯಾಂಕದಲ್ಲಿ ಹೆಚ್ಚಿನ ಲಾಭ ಸಿಕ್ಕಿರುವುದು ಪಾಕಿಸ್ತಾನದ ಇಮಾಮ್-ಉಲ್-ಹಕ್ಗೆ. ಬ್ಯಾಟ್ಸ್ಮನ್ಗಳ ODI ಶ್ರೇಯಾಂಕದಲ್ಲಿ ಇಮಾಮ್ ಏಳು ಸ್ಥಾನಗಳನ್ನು ಜಿಗಿದು ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ಮತ್ತೊಂದೆಡೆ, ಶಾಹೀನ್ ಆಫ್ರಿದಿ ಬೌಲರ್ಗಳಲ್ಲಿ 8 ಸ್ಥಾನ ಮೇಲೇರಿ ಏಳನೇ ಸ್ಥಾನಕ್ಕೆ ತಲುಪಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಬಾಬರ್ ಅಜಮ್ ಏಕದಿನ ರಾಂಕಿಂಗ್ ನಲ್ಲಿ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಮತ್ತೊಂದೆಡೆ, ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ 2 ಅರ್ಧಶತಕಗಳನ್ನು ಗಳಿಸಿದ ಡೀನ್ ಎಲ್ಗರ್, 3 ಸ್ಥಾನ ಜಿಗಿದಿದ್ದಾರೆ. 67 ಮತ್ತು 64 ರನ್ಗಳ ಇನ್ನಿಂಗ್ಸ್ ಆಡಿರುವ ಎಲ್ಗರ್ ಗೆ 13ನೇ ಸ್ಥಾನದಲ್ಲಿ ಆಸೀನರಾಗಿದ್ದಾರೆ. ಈ ಪಂದ್ಯದಲ್ಲಿ ಬಾಂಗ್ಲಾದೇಶದ ಮಹಮ್ಮದುಲ್ಲಾ ಹಸನ್ ಜಾಯ್ ಅತ್ಯುತ್ತಮ ಶತಕ ಬಾರಿಸಿದರು. ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ನಲ್ಲಿ ಶತಕ ಸಿಡಿಸಿದ ಬಾಂಗ್ಲಾದೇಶದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಹಸನ್ ಜಾಯ್ ಪಾತ್ರರಾದರು. ಅವರು 37 ಸ್ಥಾನಗಳನ್ನು ಏರಿಕೆಯಾಗಿ ಟೆಸ್ಟ್ ರಾಂಕಿಂಗ್ನಲ್ಲಿ 66ನೇ ಸ್ಥಾನಕ್ಕೆ ತಲುಪಿದ್ದಾರೆ.