ಐಸಿಸಿ ಪುರುಷರ ಏಕದಿನ ಸರಣಿ ಶ್ರೇಯಾಂಕ: ಪುನಃ ಅಗ್ರಸ್ಥಾನದಲ್ಲಿ ಮಿಂಚಿದ ಜಸ್ ಪ್ರೀತ್ ಬೂಮ್ರಾ
ಮುಂಬೈ: ಜುಲೈ 13 :ಐಸಿಸಿ ಪುರುಷರ ಏಕದಿನ ಸರಣಿಯ ಆಟಗಾರರ ಶ್ರೇಯಾಂಕದಲ್ಲಿ ಭಾರತದ ವೇಗದ ಬೌಲರ್ ಜಸ್ ಪ್ರೀತ್ ಬುಮ್ರಾ ಅವರು ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
ಓವಲ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 19 ರನ್ಗಳಿಗೆ ಆರು ವಿಕೆಟ್ಗಳನ್ನು ಗಳಿಸುವ ಮೂಲಕ ಭಾರತವು ಇಂಗ್ಲೆಂಡ್ ವಿರುದ್ಧ 10-ವಿಕೆಟ್ಗಳ ಜಯ ಸಾಧಿಸಿದ ನಂತರ ಜಸ್ ಪ್ರೀತ್ ಬುಮ್ರಾ ಈ ಸಾಧನೆಗೆ ಪಾತ್ರರಾಗಿದ್ದಾರೆ.
ಹಿಂದಿನ ಎರಡು ವರ್ಷಗಳಿಂದ ನಂಬರ್ 1 ಆಗಿದ್ದ ಬುಮ್ರಾ, ಫೆಬ್ರವರಿ 2020 ರಲ್ಲಿ ನ್ಯೂಜಿಲೆಂಡ್ನ ಟ್ರೆಂಟ್ ಬೌಲ್ಟ್ ಎದುರಿಗೆ ಅಗ್ರ ಸ್ಥಾನವನ್ನು ಕಳೆದುಕೊಂಡಿದ್ದರು. ಬೂಮ್ರಾ ಅವರು ಒಟ್ಟು 730 ದಿನಗಳ ಕಾಲ ಅಗ್ರಸ್ಥಾನದಲ್ಲಿದ್ದರು.
ಈ ಹಿಂದೆ ಟಿ20ಐ ಗಳಲ್ಲಿ ನಂ. 1 ಆಗಿರುವ ಮತ್ತು ಪ್ರಸ್ತುತ ಟೆಸ್ಟ್ನಲ್ಲಿ ವೃತ್ತಿಜೀವನದ ಅತ್ಯುತ್ತಮ ಮೂರನೇ ಸ್ಥಾನದಲ್ಲಿರುವ ಬುಮ್ರಾ, ಕಪಿಲ್ ದೇವ್ ನಂತರ ಏಕದಿನ ಸರಣಿ ಶ್ರೇಯಾಂಕದಲ್ಲಿ ನಂ. 1 ಆಗಿರುವ ಎರಡನೇ ಭಾರತೀಯ ವೇಗದ ಬೌಲರ್ ಎಂಬ ಖ್ಯಾತಿ ಕೂಡ ಬೂಮ್ರಾ ಪಾಲಿಗಿದೆ.
ಮಣಿಂದರ್ ಸಿಂಗ್, ಅನಿಲ್ ಕುಂಬ್ಳೆ ಮತ್ತು ರವೀಂದ್ರ ಜಡೇಜಾ ಅಗ್ರ ಶ್ರೇಯಾಂಕ ಪಡೆದ ಭಾರತದ ಇತರ ಬೌಲರ್ಗಳಾಗಿದ್ದಾರೆ. ಇನ್ನು ಮೊಹಮ್ಮದ್ ಶಮಿ ಕೂಡ ೩೧ ರನ್ಗಳಿಗೆ ೩ ವಿಕೆಟ್ ಕಬಳಿಸುವ ಮೂಲಕ ಮೂರು ಸ್ಲಾಟ್ಗಳಲ್ಲಿ ಪ್ರಗತಿ ಸಾಧಿಸಿದ್ದು, ತಂಡದ ಸಹ ಆಟಗಾರ ಭುವನೇಶ್ವರ್ ಕುಮಾರ್ ಅವರೊಂದಿಗೆ ಜಂಟಿ-23ನೇ ಸ್ಥಾನಕ್ಕೆ ತಲುಪಿದ್ದಾರೆ.