ಸಿದ್ದನಾಥ ಮತ್ತು ಹಳೇರೊಳ್ಳಿ ಗ್ರಾಮಕ್ಕೆ ರಂಗ ಮಂದಿರ ನಿರ್ಮಿಸುತ್ತೇನೆ-ತಾನಾಜಿ.ಎಸ್.ನಾಗರಾಳ
I will build a theater for Siddhanatha and Halerolli villages - Tanaji.S.Nagaral
ಕೊಲ್ಹಾರ 11: ಕೊಲ್ಹಾರ ತಾಲೂಕಿನ ಹಳೇರೊಳ್ಳಿ ಗ್ರಾಮದ ಶ್ರೀ ಗ್ರಾಮದೇವತೆ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಸಾಮಾಜಿಕ ನಾಟಕ ಪ್ರದರ್ಶನ ಜರುಗಿತು. ಹಳೇರೊಳ್ಳಿ ಗ್ರಾಮದಲ್ಲಿರುವ ಶ್ರೀ ಗ್ರಾಮ ದೇವತೆ ಜಾತ್ರಾ ಮಹೋತ್ಸವದ ಪ್ರಯುಕ್ತ ಜೈ ಹಣಮಾನ ನಾಟ್ಯ ಸಂಘ ಹಳೇರೊಳ್ಳಿ ಇವರು ಅರ್ಿಸುವ 17ನೇ ಕಲಾಕುಸುಮ. ಹಮ್ಮಿಕೊಳ್ಳಲಾಗಿರುವ "ತುತ್ತು ಕೊಟ್ಟ ರೈತನಿಗೆ ಕುತ್ತು ತಂದ ಸರ್ಕಾರ "(ಅರ್ಥಾತ:ನೇಗಿಲ ಯೋಗಿ) ಸಾಮಾಜಿಕ ನಾಟಕ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಗ್ರಾಮದ ದುರ್ಗಾದೇವಿ ಜಾತ್ರೆ ಅಂಗವಾಗಿ ಅಭಿನಯಿಸಿದ “ತುತ್ತು ಕೊಟ್ಟ ರೈತನಿಗೆ ಕುತ್ತು ತಂದ ಸರ್ಕಾರ"ಎಂಬ ಸಾಮಾಜಿಕ ನಾಟಕ.
ಮಾಜಿ ಜಿಲ್ಲಾ ಪಂಚಾಯತ ಸದಸ್ಯ ತಾನಾಜಿ.ಎಸ್.ನಾಗರಾಳ ಉದ್ಘಾಟಿಸಿ ಮಾತನಾಡಿದ ಅವರು. ಹಳೇರೊಳ್ಳಿ ಗ್ರಾಮ ಚಿಕ್ಕ ಗ್ರಾಮ,ಚಿಕ್ಕದಾಗಿದ್ದರೂ ಈ ಭಾಗದಲ್ಲಿ ತನ್ನದೇ ಆದಂತಹ ಚಾರಿತ್ರ್ಯ ಹೊಂದಿದಂತಹ ಗ್ರಾಮ ಹಳೇರೊಳ್ಳಿ ಎಂದು ಹೇಳಿದರು.ಈ ನಮ್ಮ ಗ್ರಾಮ ಸಂಸ್ಕಾರ ದಿಂದ ಹಾಗೂ ಸಾಮರಸ್ಯಯಿಂದ ಇರುವಂತ ಗ್ರಾಮ ಯಾವುದಾದರೂ ಇದ್ದರೇ ಹಳೇರೊಳ್ಳಿ ಗ್ರಾಮ ಎಂದು ಹೇಳಬಹುದು. ಈ ಗ್ರಾಮದಲ್ಲಿ ಜಾತ್ಯಾತೀತವಾಗಿ ಹಾಗೂ ಪಕ್ಷಾತೀತವಾಗಿ ಸಹೋದರಂತೆ ಒಂದುಗೂಡಿ ಜಾತ್ರಾ ಮಹೋತ್ಸವ ಮಾಡುವುದು ಇದು ನನಗೆ ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಅವಳಿ ಗ್ರಾಮದ ಜನರ ಬೇಡಿಕೆಯಂತೆ ಮುಂಬರುವ ವರ್ಷದಲ್ಲಿ ಸಿದ್ದನಾಥ ಮತ್ತು ಹಳೇರೊಳ್ಳಿ ಗ್ರಾಮಕ್ಕೆ“ರಂಗ ಮಂದಿರ”ಮಾಡಿಕೊಡುತ್ತೇನೆ ಎಂದು ಹೇಳಿದರು.ಎಸ್. ಡಿ. ನದಾಫ ಮಾತನಾಡಿ:ಮಣ್ಣಿಗೆ ಸಂಸ್ಕಾರಕೊಟ್ಟರೆ ಅದು ಮಡಿಕೆ ಆಗುತ್ತದೆ.ಸೆಗಣಿಗೆ ಸಂಸ್ಕಾರಕೊಟ್ಟರೇ ಅದು ಇಬುತ್ತಿ ಆಗುತ್ತದೆ.ಬಂಗಾರಕ್ಕೆ ಸಂಸ್ಕಾರಕೊಟ್ಟರೆ ಅದು ಆಭರಣ ಆಗುತ್ತದೆ.ಮಾನವನಿಗೆ ಸಂಸ್ಕಾರಕೊಟ್ಟರೆ ಅವನು ಮಹಾದೇವನಾಗುತ್ತಾನೆ.ಈ ಮಾತಿನಂತೆ ಮನುಷ್ಯಗೆ ಏನು ಬೇಕಾಗಿದೆ ಎಂದರೇ ಸರಸ್ಕಾರಬೇಕಾಗಿದೆ ಆದರೆ ಜನರಲ್ಲಿ ಸಂಸ್ಕಾರ ಮಾಯವಾಗಿ ಹೋಗಿದೆ,ಗುರು ಹಿರಿಯರಿಗೆ ಗೌರವ ಸಿಗುತ್ತಿಲ್ಲ,ತಂದೆ ತಾಯಿಗೆ ಗೌರವ ಕಡಿಮೆ ಆಗುತ್ತದೆ,ನಮ್ಮ ದೇಶದ ಸಂಸ್ಕಾರ ಸಂಪ್ರದಾಯ ಉಳಿಸಿಕೊಂಡು ಎಂದು ಹೇಳಿದರು. ಈ ಭೂಮಿಯ ಮೇಲೆ ಬಂದಿದ್ದೇವೆ ಎಂದರೇ ಹಾಗೆ ಬಂದು ಹಾಗೆ ಹೊರಟು ಹೋಗುವುದು ಅಲ್ಲ,ನಮಗೆ ಪೂರ್ವಜರು 5 ರುಣಗಳನ್ನು ಇಟ್ಟು ಹೋಗಿದ್ದಾರೆ.
ತಾಯಿಯ ಋಣ, ತಂದೆಯ ಋಣ,ಗುರುವಿನ ಋಣ, ಭೂಮಿಯ ಋಣ ಹಾಗೂ ಪ್ರಕೃತಿ ಋಣವನ್ನು ನಾವು ನೀವು ಎಲ್ಲರೂ ಈ ಋಣವನ್ನು ತೀರಿಸಿ.ನಾವು ಎಲ್ಲರೂ ಮಹಾಮಾನವರು ಆಗೋಣ ಹೇಳಿದರು.ನಮ್ಮ ಮೈಮೇಲೆ ಹರಕು ಬಟ್ಟೆ ಇದ್ದರು ಪರವಾಗಿಲ್ಲ, ಕೈಯಲ್ಲಿ ಒಂದು ಪುಸ್ತಕ ಇರಲ್ಲಿ,ಪುಸ್ತಕವನ್ನು ತೆಗೆದುಕೊಂಡರೆ ಒಳ್ಳೆಯ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು. ಯುವಕರು ಯುವತಿಯರು ಮೊಬೈಲ್ ಗೆ ಅಂಟಿಕೊಂಡು ಇಡೀ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ.
ಮೊಬೈಲ್ ಒಳ್ಳೆಯದಕ್ಕಾಗಿ ಬಳಸಿಕೊಳ್ಳಿ,ದುಶ್ಚಟಗಳಿಂದ ದೂರವಿದ್ದು, ಮಾದರಿ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದು ಹೇಳಿದರು. ಈ ಸಂದ್ರಬದಲ್ಲಿ ವೇ.ಮೂ.ಚಿದಾನಂದ ಹಿರೇಮಠ ಹಾಗೂ ಶ್ರೀ ಸಿದ್ರಾಮಯ್ಯ ಪರಡಿಮಠ ದಿವ್ಯ ಸಾನಿದ್ಯಾ ವಹಿಸಿದರು. ವೇದಿಕೆ ಮೇಲೆ ಆಸೀನರಾದ.ತಾನಾಜಿ ಎಸ್ ನಾಗರಾಳ,ನಿಂಗಪ್ಪ ಬ್ಯಾಕೋಡ,ಪುಂಡಲಿಕಪ್ಪ ಸುನಗಾದ,ಕೆಂಚನಗೌಡ ಪಾಟೀಲ,ಗಿರಿಯಪ್ಪ ಸುನಗದ,ಮಲ್ಲಪ್ಪ ಜೋಗಿ,ಶಿವಲಿಂಗಪ್ಪ ತಳೆವಾಡ, ಲಕ್ಷ್ಮಣ ಸುನಗದ,ದುಂಡಪ್ಪ ರೋಳ್ಳಿ,ಶರಣು ಗಾಣಿಗೇರ,ಹಣಮಂತ ಬಿರಾದಾರ ಹಾಗೂ ವಿಠ್ಠಲ ಬಾನಿ ಇತರರು ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 