‘ಯೂನಿಸ್’ ಹಾಹಾಕಾರ.. ತತ್ತರಿಸಿದ ಯುರೋಪ್: 3 ಸಾವಿರ ಕೋಟಿ ನಷ್ಟ
ಲಂಡನ್: ಫೆಬ್ರವರಿ 20: ಯೂನಿಸ್ ಚಂಡಮಾರುತ ಯುರೋಪ್ ಮತ್ತು ಯುಕೆಯಲ್ಲಿ ವಿನಾಶವನ್ನುಂಟು ಮಾಡಿದೆ. ಬ್ರಿಟನ್‌ನಲ್ಲಿ 35 ವರ್ಷಗಳ ನಂತರ ಇಂತಹ ಭೀಕರ ಚಂಡಮಾರುತ ಬೀಸಿದ್ದು, ಗಂಟೆಗೆ 200 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಿದೆ. ಈ ನೈಸರ್ಗಿಕ ವಿಕೋಪದಿಂದಾಗಿ 13 ಜನರು ಸಾವಿಗೀಡಾಗಿದ್ದಾರೆ.
ಹಲವೆಡೆ ಮರಗಳು ಬಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, 3 ಸಾವಿರ ಕೋಟಿಗೂ ಅಧಿಕ ಹಾನಿ ಸಂಭವಿಸಿದೆ. ಇನ್ನು 2 ಕೋಟಿಗೂ ಅಧಿಕ ಮಂದಿ ಮನೆಯಲ್ಲೇ ಬಂಧಿಯಾಗಿದ್ದಾರೆ. ಈ ಹಿಂದೆ 1987ರಲ್ಲಿ ಗಂಟೆಗೆ 278 ಕಿಮೀ ವೇಗದಲ್ಲಿ ಬ್ರಿಟನ್‌ನಲ್ಲಿ ಚಂಡಮಾರುತ ಬೀಸಿತ್ತು.
ಯುನಿಸ್ ಚಂಡಮಾರುತವು ಯುರೋಪಿನಲ್ಲಿ ಲಕ್ಷಾಂತರ ಜನರಿಗೆ ಕಾಟ ಕೊಟ್ಟಿದೆ. ಹವಾಮಾನ ಇಲಾಖೆಯ ಪ್ರಕಾರ ಗಾಳಿಯ ವೇಗದಿಂದಾಗಿ ಬ್ರಿಟನ್‌ನಲ್ಲಿ ಸುಮಾರು 2 ಲಕ್ಷ ಮನೆಗಳು ವಿದ್ಯುತ್ ಕಳೆದುಕೊಂಡಿವೆ. ಅಲ್ಲದೆ, ಲಂಡನ್‌ನ ಒಳಾಂಗಣ ಕ್ರೀಡಾಂಗಣದ ಮೇಲ್ಛಾವಣಿಯು ಬಲವಾದ ಗಾಳಿಗೆ ಹಾರಿಹೋಗಿದೆ. ಚಂಡಮಾರುತದಿಂದಾಗಿ ಯುನೈಟೆಡ್ ಕಿಂಡ್ ಡಮ್ ನಲ್ಲಿ 400ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ.