ಪುಟ್ಪಾತ್ ಕಸಿಯುತ್ತಿರುವ ಹೋಟೆಲ್ ಮಾಲೀಕರು

ಲೋಕದರ್ಶನವರದಿ

ಹಾವೇರಿ: ನಗರದಲ್ಲಿ ಕೋಟ್ಯಾಂತರ ರೂ ವೆಚ್ಚದಲ್ಲಿ ಸುಂದರ ಪುಟ್ಟಪಾತ್ ನಿಮರ್ಾಣ ಮಾಡಲಾಗಿದೆ. ಸಾರ್ವಜನಿಕರು ಸುಗಮವಾಗಿ ಪುಟ್ಟಪಾತ ಮೇಲೆ ಸಂಚರಿಸಲಿ ಎಂಬ ಉದ್ದೇಶದಿಂದ ಮಾಡಲಾಗಿದ್ದು, ಡಾಬಾ,ಹೋಟೆಲ್ ಮಾಲೀಕರು ಅದೇ ಪುಟ್ಟಪಾತ್ಗಳನ್ನು ಕಿತ್ತಾಕಿ ತಮ್ಮ ಕೆಲಸ ಮಾಡಿಕೊಳ್ಳುತ್ತಿದ್ದಾರೆ ಇದು ದುರಂತವೇ ಸರಿ.

            ನಗರದ ತಾಲೂಕ ಪಂಚಾಯತ ಮುಂಭಾಗದಲ್ಲಿರುವ ಜೈ ಶಂಕರ, ಗ್ರೀನ್ ಹೌಸ್ ಡಾಬಾ ಮುಂದೆ ಇಂತಹ ಘಟನೆಗಳು ನಡೆದಿದ್ದರೂ ನಗರಸಭೆಯ ಯಾವ ಅಧಿಕಾರಿಗಳು, ಸಿಬ್ಬಂಧಿಗಳು ಅತ್ತ ತಲೆ ಹಾಕಿಲ್ಲ. ಇದರಿಂದ ಕೋಟ್ಯಾಂತರ ರೂ ವೆಚ್ಚದಲ್ಲಿ ಹಾಕಲಾಗಿದ್ದ ಗ್ರ್ಯಾನೆಟ್ ಪಿಲ್ಲರ್ ಕಂಬಗಳು, ಸ್ಟಿಲ್ ಪೈಪುಗಳು.ದುಬಾರಿ ಬೆಲೆಯ ಕಲ್ಲು ನಾಶವಾಗುವ ಹಂತಕ್ಕೆ ತಲುಪಿವೆ. 

       ಜನದಟ್ಟನೆಯನ್ನು ಮನಗಂಡು ಜನರಿಗೆ ಸುಗಮವಾಗಲಿ ಎಂದು ರಸ್ತೆ ಬದಿಯಲ್ಲಿ ಪುಟ್ಟಪಾತ್ ನಿಮರ್ಾಣ ಮಾಡಿದ್ದರೇ ಪುಟಪಾತ್ನ್ನೇ ಕಿತ್ತು ಹಾಕಿ ತಮ್ಮ ವೈಯುಕ್ತಿಕ ಅಂಗಡಿ ಕೆಲಸ ಮಾಡುವಂತಹ ಕಾರ್ಯದಲ್ಲಿ ವ್ಯಾಪಾರಿಗಳು ನಿರತರಾಗಿದ್ದಾರೆ. ಪುಟ್ಟಪಾತ್ ಉತ್ತಮವಾಗಿದ್ದು ಅದನ್ನು ದಾಟಿ ಹೋಗಲು ತಡೆಗೋಡೆ ಇರುವ ಎಲ್ಲಾ ಕಂಬಗಳನ್ನು ಕಿತ್ತು ಹಾಕಿ ಅಂಗಡಿಗೆ ಬಂದು - ಹೋಗುವವವರಿಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಅಂದು ಶಾಸಕರಾಗಿದ್ದ ನೆಹರೂ ಓಲೇಕಾರ ಅವಧಿಯಲ್ಲಿ ಸರಕಾರದಿಂದ ವಿಶೇಷ ಅನುದಾನ ತಂದು, ನಗರವು ಸುಂದರವಾಗಿರಲಿ ಎಂದು ದುಬಾರಿ ಬೆಲೆಯ ಕಲ್ಲುಗಳನ್ನು ಹಾಕಿ, ಹೈಟೆಕ್ ಪುಟ್ ಪಾತ್ ನಿಮರ್ಾಣ ಮಾಡಲಾಗಿತ್ತು. ಹಾವೇರಿ ನಗರದಲ್ಲಿ ಹಾಕಲಾಗಿರುವ ಪುಟ್ ಪಾತ್ ಕೋಲಾರ ಜಿಲ್ಲೆಯ ಚಿಂತಾಮಣಿ ಬಿಟ್ಟರೆ, ಎರಡನೇ ಸ್ಥಾನದಲ್ಲಿ ಹಾವೇರಿಯಲ್ಲಿದೆ ಎಂಬ ಹಿರಿಮೆಯಿತ್ತು.  ಇಂತಹ ಪುಟ್ ಪಾತ್ನ್ನು ವಾಣಿಜ್ಯ ಮಳಿಗೆಯ ವ್ಯಾಪಾರಿಗಳು, ಹೋಟೆಲ್,ಡಾಬಾದ ಮಾಲಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಕಿಳುತ್ತಿದ್ದಾರೆ. 

ಇದರಿಂದ ಸುಂದರವಾಗಿ ಕಾಣುತ್ತಿದ್ದ ಪುಟ್ ಪಾತ್ಗಳು ಬಿಕೋ ಎನ್ನುತ್ತಿವೆ. ಚರಂಡಿ ಮೇಲೆ ಸುಮಾರು 4-6 ಇಂಚಿನ ದಪ್ಪದ ಗ್ರ್ಯಾನೆಟ್ ಕಲ್ಲು ಹಾಕಲಾಗಿದೆ. ಈ ಕಲ್ಲುಗಳನ್ನು ವ್ಯಾಪಾರಿಗಳು ತಮ್ಮ ಅನುಕೂಲಕ್ಕೆ ಬೇಕಾದ ರೀತಿಯಲ್ಲಿ ಕಿಳುತ್ತಿದ್ದಾರೆ. ಅವುಗಳನ್ನು ಕಿಳುವಾಗ, ಒಡೆದ ಉದಾರಹಣೆ ಇದ್ದು, ಇವುಗಳಿಗೆ ಯಾರು ಹೇಳೊರು-ಕೇಳೊರು ಇಲ್ಲದಂತಾಗಿದೆ. 

           ನಗರದ ಆಸ್ತಿಯನ್ನು ಕಾಪಾಡಬೇಕಾದ ನಗರಸಭೆ ಅಧಿಕಾರಿಗಳು-ಸಿಬ್ಬಂಧಿಗಳು ಕಣ್ಣು ಮುಚ್ಚಿ ಕುಳಿತುಕೊಂಡಂತೆಯಿದೆ. ಇನ್ನಾದರೂ ಎಚ್ಚತ್ತುಕೊಂಡು ನಗರಸಭೆಯ ಆಸ್ತಿಯಾಗಿರುವ ಪುಟ್ ಪಾತ್ಗೆ ಹಾನಿ ಮಾಡಿದವರು ಮೇಲೆ ಸೂಕ್ತ ಕ್ರ ಕೈಗೊಂಡು, ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಕಾಪಾಡಬೇಕು ಎನ್ನುತ್ತಾರೆ ಸಾರ್ವಜನಿಕರು.ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಕಾಪಾಡುವ ಕೆಲಸವನ್ನು ನಗರಸಭೆ ಅಧಿಕಾರಿಗಳು ಇನ್ನಾದರೂ ಮಾಡತ್ತಾರಾ ಕಾದು ನೋಡುವಂತಾಗಿದೆ.