ಹಿಟ್ಟಿನಹಳ್ಳಿ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ವಿನೂತನ ಹಾಗೂ ವೈವಿಧ್ಯಮಯ ಕಾರ್ಯಕ್ರಮ
An innovative and diverse program was organized at the premises of PMShri Karnataka Public School, H
ಲೋಕದರ್ಶನ ವರದಿ
ದೇವರ ಹಿಪ್ಪರಗಿ 01 : ಹಿಟ್ಟಿನಹಳ್ಳಿ ತಾಂಡಾದ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯು ಇಂದು ಖಾಸಗಿ ಶಾಲೆಗಳೂ ಹುಬ್ಬೇರಿಸುವಂತಹ ರೀತಿಯಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ, ಎಂದು ಶಾಲಾ ಮುಖ್ಯಗುರುಗಳಾದ ಶ್ರೀ ವಿಲಾಸ ಚವ್ಹಾಣ ಹೇಳಿದರು.
ಹೊಸ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ತಾಲೂಕಿನ ಹಿಟ್ಟಿನಹಳ್ಳಿ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ವಿನೂತನ ಹಾಗೂ ವೈವಿಧ್ಯಮಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಡಿದ ಅವರು ಸರಕಾರಿ ಶಾಲೆಗಳು ಸೌಲಭ್ಯಗಳಲ್ಲಿ ಯಾರಿಗೂ ಕಮ್ಮಿಯಿಲ್ಲ ಎಂಬುದನ್ನು ಈ ಶಾಲೆ ಸಾಬೀತುಪಡಿಸಿದೆ. ಸರ್ಕಾರದಿಂದ ದೊರೆಯುವ ಉಚಿತ ಪಠ್ಯಪುಸ್ತಕಗಳು, ಸಮವಸ್ತ್ರಗಳು ಅಕ್ಷರ ದಾಸೋಹ ಹಾಗೂ ಪೌಷ್ಟಿಕಯುಕ್ತ ಬಿಸಿಯೂಟದ ವ್ಯವಸ್ಥೆಯನ್ನು ನಾವು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದೇವೆ. ಪ್ರತಿಯೊಂದು ಮಗುವೂ ಶಾಲೆಯತ್ತ ಹೆಜ್ಜೆ ಹಾಕಬೇಕು, ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂಬುದೇ ನಮ್ಮ ಶಿಕ್ಷಕ ವೃಂದದ ಸಂಕಲ್ಪವಾಗಿದೆ ಎಂದರು.
ಹೊಸ ವರ್ಷದ ಮೊದಲ ದಿನದ ಅಂಗವಾಗಿ ಶಾಲೆಯ ವತಿಯಿಂದ ಗ್ರಾಮದಲ್ಲಿ ಭವ್ಯ ಪ್ರಭಾತಪೇರಿಯನ್ನು ಹಮ್ಮಿಕೊಳ್ಳಲಾಗಿತ್ತು. ಶಿಕ್ಷಣದ ಮಹತ್ವ ಸಾರುವ ಘೋಷಣೆಗಳನ್ನು ಕೂಗುತ್ತಾ, ಬ್ಯಾನರ್ ಹಿಡಿದು ಸಾಗಿದ ಮಕ್ಕಳ ಮೆರವಣಿಗೆಯು ಊರಿನ ಪ್ರಮುಖ ಬೀದಿಗಳಲ್ಲಿ ಜಾಗೃತಿ ಮೂಡಿಸಿತು. ಶಾಲೆಗೆ ಮರಳಿದ ಪುಟಾಣಿ ಮಕ್ಕಳನ್ನು ಬರಮಾಡಿಕೊಳ್ಳಲು ಶಾಲೆಯ ಮುಖ್ಯ ದ್ವಾರವನ್ನು ತಳಿರು ತೋರಣ ಹಾಗೂ ಬಣ್ಣ ಬಣ್ಣದ ರಂಗೋಲಿಗಳಿಂದ ವಿಭಿನ್ನವಾಗಿ ಅಲಂಕರಿಸಲಾಗಿತ್ತು.
ಮಕ್ಕಳ ಮನಗೆದ್ದ ವಿಶೇಷ 'ಸೆಲ್ಫಿ ಕಾರ್ನರ್'
ಮಕ್ಕಳಿಗೆ ಶಾಲೆಯೆಂದರೆ ಭಯವಾಗಬಾರದು, ಬದಲಿಗೆ ಆಕರ್ಷಣೆಯ ಕೇಂದ್ರವಾಗಬೇಕು ಎಂಬ ನಿಟ್ಟಿನಲ್ಲಿ ಶಾಲಾ ಸಿಬ್ಬಂದಿ ವಿನೂತನ ಆಲೋಚನೆಯೊಂದನ್ನು ಮಾಡಿ ಶಾಲೆಗೆ ಬಂದ ಪುಟ್ಟ ಮಕ್ಕಳಿಗೆ ಕಂಗೊಳಿಸುವಂತೆ ಒಂದು ಸುಂದರವಾದ ವಿಶೇಷ ಸೆಲ್ಫಿ ಕಾರ್ನರ್ ಅನ್ನು ಸಿದ್ಧಪಡಿಸಲಾಗಿತ್ತು. ಬಲೂನ್‌ಗಳು, ಕಾಗದದ ಹೂವುಗಳು ಹಾಗೂ ಕಾರ್ಟೂನ್ ಪಾತ್ರಗಳ ಚಿತ್ರಗಳಿಂದ ಸಜ್ಜುಗೊಳಿಸಿದ ಸೆಲ್ಫಿ ಕಾರ್ನರನಲ್ಲಿ ಮಕ್ಕಳು ಮರಳಿ ಶಾಲೆಗೆ ಎಂಬ ಫಲಕಗಳನ್ನು ಹಿಡಿದು ಅತ್ಯಂತ ಉತ್ಸಾಹದಿಂದ ಫೋಟೋ ತೆಗೆಸಿಕೊಂಡರು. ಶಾಲೆಯ ಪ್ರತಿಯೊಂದು ಕೋಣೆಯನ್ನು ವಿಭಿನ್ನ ಶೈಲಿಯಲ್ಲಿ ಅಲಂಕಾರ ಮಾಡಲಾಗಿದ್ದು, ಮಕ್ಕಳಿಗೆ ಹಬ್ಬದ ವಾತಾವರಣದ ಅನುಭೂತಿ ನೀಡಿತು.
ಇಲಾಖೆಯ ನಿರ್ದೇಶನದಂತೆ ಶಾಲಾ ಪ್ರಾರಂಭೋತ್ಸವದಂದೇ ಪಾಲಕರ ಮತ್ತು ಶಿಕ್ಷಕರ ಮಹತ್ವದ ಸಭೆಯನ್ನು ನಡೆಸಲಾಯಿತು. ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರ ಪಾತ್ರದ ಬಗ್ಗೆ ಸಭೆಯಲ್ಲಿ ಚರ್ಚಿಸಿ ಶಾಲೆಗೆ ಹೆಜ್ಜೆ ಇಟ್ಟ ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ ಮಾಡಲಾಯಿತು ಹಾಗೂ ಈ ವರ್ಷದ ನೂತನ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ರವಿ ರಾಠೋಡ, ಸದಸ್ಯರಾದ ಬಹದ್ದೂರ ಚವ್ಹಾಣ ಮತ್ತು ಸುನಿತಾ ರಾಠೋಡ ಅವರು ಉಪಸ್ಥಿತರಿದ್ದು ಶಾಲೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.ಸಹಶಿಕ್ಷಕರುಗಳಾದ ಎಸ್.ಎನ್.ಅಳ್ಳಗಿ, ಆರ್.ಆರ್ ಚವ್ಹಾಣ, ಜೆ.ಎಸ್.ನಾಯಿಕ, ಬಿ.ಬಿ.ದೊಡಮನಿ, ಆಶಾ ರಾಠೋಡ, ದಯಾನಂದ.ಪೋಲೆಶಿ, ಹರ್ಷಾ.ಎಮ್.ಪಿ, ಸೇರಿದಂತೆ ಶಾಲೆಯ ಎಲ್ಲಾ ಪಾಲಕರು, ಪೋಷಕರು, ಅಕ್ಷರ ದಾಸೋಹ ಸಿಬ್ಬಂದಿ, ಊರಿನ ಹಿರಿಯರು ಹಾಗೂ ನೂರಾರು ವಿದ್ಯಾರ್ಥಿಗಳು ಈ ಅದ್ಭುತ ಶೈಕ್ಷಣಿಕ ಹಬ್ಬಕ್ಕೆ ಸಾಕ್ಷಿಯಾದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 