ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪಾರೇಶ ಭೋಸಲೆ
ಬೆಳಗಾವಿ : ಕೋಮು ಸೌಹಾರ್ದತೆಗೆ ಧಕ್ಕೆಯನ್ನು ಉಂಟು ಮಾಡುವ ಹಂತದಲ್ಲಿದ್ದ ಸಂಕೇಶ್ವರ- ನಿಡಸೋಸಿ ರಸ್ತೆ ಅಗಲಿಕರಣ ಕಾಮಗಾರಿಗೆ ಶುಕ್ರದೆಶ ಉಂಟಾಗಿದ್ದು, ಈ ರಸ್ತೆಯನ್ನು ಅಗಲಿಕರಣ ಮಾಡಿಕೊಡುವ ನಿಟ್ಟಿನಲ್ಲಿ ಜವಾಬ್ದಾರಿ ವಹಿಸಿಕೊಂಡಿದ್ದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ ಅವರು ಆಡಿತ ಮಾತು ಉಳಿಸಿಕೊಳ್ಳುವ ಮೂಲಕ ನುಡಿದಂತೆ ನಡೆದುಕೊಂಡಿದ್ದಾರೆ. ಅಲ್ಲದೆ ಅಗಲಿಕರಣಕ್ಕೆ ಸಮಸ್ಯೆಯಾಗಿದ್ದ ಮುಸ್ಲಿಂ ಸಮುದಾಯದ ಸ್ಮಶಾನದಲ್ಲಿನ ಸಮಾಧಿಗಳನ್ನು ಸ್ಥಳಾಂತರ ಮಾಡುವ ಕಾರ್ಯ ಪ್ರಾರಂಭವಾಗಿದೆ.
ಕಳೆದ ತಿಂಗಳಗಳ ಹಿಂದೆ ಲೋಕೋಪಯೋಗಿ ಇಲಾಖೆಯಿಂದ ಸಂಕೇಶ್ವರ ನಿಡಸೋಸಿ ರಸ್ತೆ ಅಗಲಿಕರಣ ಜೊತೆಗೆ ಡಾಂಬರಿಕರಣ ಕೆಲಸ ಪ್ರಾರಂಭಿಸಿದ್ದರು. ಸಂಕೇಶ್ವರ ರಾಯಲ್ ಕ್ವಾಲನಿದಿಂದ ಸಂಕೇಶ್ವರದ ಬಸ್ ನಿಲ್ದಾಣ ವರೆಗಿನ ರಸ್ತೆ ಅಗಲಿಕರಣಕ್ಕೆ ರಸ್ತೆ ಪಕ್ಕದಲ್ಲಿದ್ದ ಮುಸ್ಲಿಂ ಸಮುದಾಯದ ಸ್ಮಶಾನ ಭುಮಿಯಲ್ಲಿನ ಸಮಾಧಿಗಳು ಸ್ಥಳಾಂತರ ಮಾಡುವದು ಸಮಸ್ಯೆಯಾಗಿಬಿಟ್ಟಿತ್ತು.
ಸ್ಮಶಾನದ ಆವರಣ ಗೋಡೆಯ ಬಳಿ ಹಲಾವಾರು ಸಮಾಧಿಗಳು ಇದ್ದವು. ಆದರೆ ಅವುಗಳನ್ನು ಸ್ಥಳಾಂತರ ಮಾಡುವದು ದೊಡ್ಟ ಸಮಸ್ಯೆ ಯಾಗಿತ್ತು. ಬಳಿಕ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕ ನಿಖಿಲ್ ಕತ್ತಿ ಅವರ ಬಳಿಯು ಈ ಸಮಸ್ಯೆ ಕೊಂಡೊಯ್ಯಲಾಗಿತ್ತು.
ಬಳಿಕ ಕೆಲವರು ಇದಕ್ಕೆ ಹಿಂದು ಮುಸ್ಲಿಮ್ ಬಣ್ಣ ನೀಡಿ ಶಾಂತವಾಗಿದ್ದ ಸಂಕೇಶ್ವರದ ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟಾಗುವ ಕಾರ್ಯ ಕೂಡಾ ನಡೆದಿತ್ತು. ವಿಷಯ ಅರಿತ ಬೆಳಗಾವಿ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ ಅವರು ಸ್ವತಃ ಸ್ಥಳಕ್ಕೆ ಎಸ್ ಪಿ ರಾಮರಾಜನ್ ಅವರ ಜೊತೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು.
ಅಲ್ಲದೆ ಮುಸ್ಲಿಂ ಸಮುದಾಯದ ಮುಖಂಡರ ಜೊತೆಗೆ ಸಮಾಲೋಚನೆ ಮಾಡಿ, ಅಗಲಿಕರಣಕ್ಕೆ ಅಡ್ಡಿಯುಂಟು ಮಾಡುವ ಸಮಾಧಿಗಳ ಸ್ಥಳಾಂತರಕ್ಕೆ ಅವರ ಕುಟುಂಬಸ್ಥರ ಮನಮೊಲಿಸುವ ಕಾರ್ಯ ಮಾಡುವಂತೆ ಮುಸ್ಲಿಂ ಮುಖಂಡರಿಗೆ ಸೂಚಿಸಿದ್ದರು.
ಬಳಿಕ ಕೆಲ ಅಧಿಕಾರಿಗಳು ಸ್ಮಶಾನದಲ್ಲಿ ಸರ್ವೇ ಕಾರ್ಯ ಮಾಡಿದ್ದರು. ಆದರೆ ಸರ್ವೇ ಕಾರ್ಯದಲ್ಲಿ 74 ಸಮಾಧಿಗಳು ಒಳಪಡುತ್ತಿದ್ದವು. ಆದರೆ ಇವಾಗ ಎರಡು ಬದಿಯ ಸಮಾಧಿಗಳಲ್ಲಿ ರಸ್ತೆ ಅಗಲಿಕರಣ ನಡೆಯಲಿದ್ದು, ಸ್ವಲ್ಪ ಮಟ್ಟದಲ್ಲಿ ಸಮಾಧಿಗಳು ಸ್ಥಳಾಂತರವಾಗಲಿವೆ.
ಸಮಾಧಿಗಳ ಸ್ಥಳಾಂತರ ಮಾಡಲು ಹಿರಿಯರ ಸಮಾಧಿ ಇರುವ ಕುಟುಂಬಸ್ಥರ ಮನವೊಲಿಕೆ ಕಾರ್ಯವನ್ನು ಸಂಕೇಶ್ವರ ಮುಸ್ಲಿಂ ಸಮುದಾಯದ ಮುಖಂಡರು ಮಾಡಿದ್ದು, ಸದ್ಯ ಸಮಾಧಿ ಗಳ ಸ್ಥಳಾಂತರ ಕಾರ್ಯ ಪ್ರಾರಂಭವಾಗಿದೆ.
ಸಮಾಧಿಗಳ ಸ್ಥಳಾಂತರ ಬಳಿಕ ಸ್ಮಶಾನ ದ ಆವರಣ ಗೋಡೆ ತೆರವು ಹಾಗೂ ರಸ್ತೆ ಅಗಲಿಕರಣ ಕಾರ್ಯ ನಡೆಯಲಿದೆ.