ಬೇಸಿಗೆ ರಜೆಯ ನಂತರ ಶಾಲೆಗೆ ಮರಳುವ ಮಕ್ಕಳನ್ನು ಸ್ವಾಗತಿಸಲು ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಹೂಮಳೆಗೈದು ಅದ್ಧೂರಿ ಸಿದ್ಧತೆ
Government and private schools are showering flowers to welcome children back to school after the su
ಲೋಕದರ್ಶನ ವರದಿ
ಬೇಸಿಗೆ ರಜೆಯ ನಂತರ ಶಾಲೆಗೆ ಮರಳುವ ಮಕ್ಕಳನ್ನು ಸ್ವಾಗತಿಸಲು ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಹೂಮಳೆಗೈದು ಅದ್ಧೂರಿ ಸಿದ್ಧತೆ
ಯರಗಟ್ಟಿ 01 : ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಮತ್ತು ದಾಖಲಾತಿ ಆಂದೋಲನವು ಜೂನ್ 1 ರಂದು ಆರಂಭವಾಗಿದೆ. ಬೇಸಿಗೆ ರಜೆಯ ನಂತರ ಶಾಲೆಗೆ ಮರಳುವ ಮಕ್ಕಳನ್ನು ಸ್ವಾಗತಿಸಲು ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ತಳಿರು-ತೋರಣಗಳಿಂದ ಅಲಂಕರಿಸಿ, ಆರತಿ ಬೆಳಗಿ ಹಾಗೂ ಹೂಮಳೆಗೈದು ಅದ್ಧೂರಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.
ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಸೋಮವಾರ ಆರಂಭವಾಯಿತು. ಶಾಲಾ ಆವರಣದಲ್ಲಿ ತಳೀರು ತೋರಣ, ಫರಾರಿ, ರಂಗೋಲಿಗಳಿಂದ ಶೃಂಗರಿಸಿ ಗ್ರಾಮದ ಗಣ್ಯರನ್ನು ಮತ್ತು ಮಕ್ಕಳು ಸೇರಿ ಶಾಲಾ ಪ್ರಾರಂಭೋತ್ಸವ ಹಾಗೂ ಮಕ್ಕಳ ಸ್ವಾಗತ ಹೊಸ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ, ನೋಟ ಬುಕ್ಕು ನೀಡಿ ತರಗತಿ ಕೊಠಡಿಗಳನ್ನು ಸಿಂಗರಿಸಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಪ್ರಾಸ್ಥಾವಿಕವಾಗಿ ರಾಜ್ಯ ಸಂಪನ್ಮೂಲ ವ್ಯಕ್ತಿ ಎಂ. ಎಂ. ಚಿಲದ ಅವರು ಮಾತನಾಡಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಲ್‌ಕೆಜಿ ಹಾಗೂ ಒಂದನೇ ತರಗತಿಗೆ ಮಕ್ಕಳನ್ನು ದಾಖಲಿಸಿಕೊಳ್ಳಲು ಮತ್ತು ಮರು ದಾಖಲಾತಿಯನ್ನು ಹೆಚ್ಚಿಸಲು ಆಯಾ ಸ್ಥಳೀಯ ಶಾಲೆಗಳ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಮ್‌ಸಿ) ಸದಸ್ಯರುಗಳು ವಿಶೇಷ ಆಂದೋಲನಗಳನ್ನು ನಡೆಸುತ್ತಿದ್ದಾರೆ.
ಎಸ್‌ಡಿಎಂಸಿ ಅಧ್ಯಕ್ಷ ಲಕ್ಕಪ್ಪ ಜಗದಾರ ಅವರು ಎಲ್‌ಕೆಜಿ ಹಾಗೂ ಒಂದನೇ ತರಗತಿಗೆ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಿಸಿದರು. ಪಟ್ಟಣದಲ್ಲಿ ಮಕ್ಕಳು ಶಿಕ್ಷಕರು ಪಾಲಕರು ತೆರಳಿ ಸಾರ್ವಜನಿಕರಲ್ಲಿ ಶಾಲಾ ಪ್ರಾರಂಭೋತ್ಸವದ ಜಾಗೃತಿ ಮೂಡಿಸುವ ಮೆರವಣಿಗೆ ಜರುಗಿತು.
ತಹಶೀಲ್ದಾರ ಎಂ. ವ್ಹಿ. ಗುಂಡಪ್ಪಗೋಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗಾಗಿ ಆಸ್ತಿ ಮಾಡಬಾರದು ಮಕ್ಕಳೆ ಆಸ್ತಿಗಳಾಗಿ ಮಾಡಿರಿ, ಧರ್ಮ ನೀತಿಯಲ್ಲಿ ನಡೆಯುವಂತೆ ಮನೆಯ ಮೊದಲ ಪಾಠ ಶಾಲೆ ಎನ್ನುವ ಹಾಗೆ ಶಿಕ್ಷಕ, ಶಿಕ್ಷಕಿಯರನ್ನು ಪಾಠ ಮಾಡಿದಲ್ಲಿ ಗಾಂಧಿ, ವಿವೇಕಾನಂದರಂತಹ ಮಕ್ಕಳನ್ನು ನಿರ್ಮಾಣ ಮಾಡಲು ಸಾಧ್ಯ ಎಂದರು. ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು. ನಂತರ ಮಕ್ಕಳಿಗೆ ಸಿಹಿ ಊಟ ಉಣಬಡಿಸಿದರು.
ಈ ವೇಳೆ ಶಾಲಾ ಪ್ರಧಾನ ಗುರುಗಳಾದ ಎ. ಎ. ಮಕ್ತಮನವರ, ಶಿಕ್ಷಕರಾದ ಎಸ್. ಬಿ. ಮಿಕಲಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ಸುನೀತಾ ಹಿರೇಮಠ, ಎಸ್‌ಡಿಎಂಸಿ ಸದಸ್ಯರಾದ ಫೀರೊಜ ಖಾದ್ರಿ, ವಿಜಯ ಬಡಿಗೇರಿ, ದುಂಡಯ್ಯಾ ಹಿರೇಮಠ, ಮುದ್ದಕಪ್ಪ ತಡಸಲೂರು, ಶಕುಂತಲಾ ಹಡಪದ, ಪ್ರೇಮಾ ಹೂಲಿಕಟ್ಟಿ, ಸುಹಾನಾ ಉಗರಗೋಳ, ಶಾಹೀನ ಹುಕ್ಕೇರಿ, ಲಕ್ಷ್ಮೀ ಸರೇಬಾನ, ಶಿಕ್ಷಕ, ಶಿಕ್ಷಿಯರು, ಗ್ರಾಮದ ಹಿರಿಯ ಮುಖಂಡರು, ಮತ್ತಿತರರು ಇದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 