ದ್ವಿಚಕ್ರವಾಹನ ಕಳ್ಳನ ಬಂಧನ : 2.55 ಲಕ್ಷ ಮೌಲ್ಯದ 5 ಬೈಕ್‌ಗಳ ವಶ
Two-wheeler thief arrested: 5 bikes worth Rs 2.55 lakh seized
ಲೋಕದರ್ಶನ ವರದಿ
ಬೆಳಗಾವಿ 02: ಬೆಳಗಾವಿ ನಗರ ಸೇರಿದಂತೆ ವಿವಿಧ ಭಾಗಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಖದೀಮನೋರ್ವನನ್ನು ಬಂಧಿಸಿರುವ ಹಿರೇಬಾಗೆವಾಡಿ ಪೊಲೀಸ್‌ರು ಬಂಧಿತನಿಂದ 2.55 ಲಕ್ಷ ಮೌಲ್ಯ ವಿವಿಧ ಕಂಪನಿಯ 5 ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಳ್ಳತನ ಪ್ರಕರಣದಲ್ಲಿ ಲಕ್ಷ್ಮಣ ವಿರುಪಾಕ್ಷಿ ಕಣಬರ್ಗಿ(31), (ಸಾ: ಅಡಿವೆಪ್ಪನ ಅಂಕಲಗಿ, ಎಮ್ ಮಲ್ಲಾಪೂರ ರೋಡ, ತಾ: ಗೋಕಾಕ ಜಿ: ಬೆಳಗಾವಿ) ಬಂಧಿತ ವ್ಯಕ್ತಿಯಾಗಿದ್ದಾನೆ. ಬೆಳಗಾವಿ ನಗರದಲ್ಲಿ ಇತ್ತಿಚಿಗೆ ಮೋಟಾರ ಸೈಕಲ್ ಕಳ್ಳತನ ಪ್ರಕರಣಗಳ ಪತ್ತೆ ಮಾಡುವ ಕುರಿತು ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಬೊರಸೆ ಭೂಷಣ ಗುಲಾಬರಾವ ಹಾಗೂ ನಾರಾಯಣ ಭರಮನಿ ಉಪಪೊಲೀಸ್ ಆಯುಕ್ತ (ಕ್ಘಾಸು) ಹಾಗೂ ನಿರಂಜನ ರಾಜೆ ಅರಸ ಉಪಪೊಲೀಸ್ ಆಯುಕ್ತ (ಅ್ಘಸಂ) ಮತ್ತು ಗ್ರಾಮೀಣ ಉಪವಿಭಾಗದ ಎಸಿಪಿ ಬಿ.ಎಂ.ಗಂಗಾಧರ ಇವರ ಮಾರ್ಗದರ್ಶನದಲ್ಲಿ ಹಿರೇಬಾಗೆವಾಡಿ ಪೊಲೀಸ್ ಠಾಣೆಯ ಪೊಳೆನ್ನವರ ಇವರ ನೇತೃತ್ವದ ಬಿ.ಕೆ.ಮಿಟಗಾರ ಪಿಎಸ್‌ಐ ಹಾಗೂ ಸಿಬ್ಬಂದಿ ಜನರು ಆರೋಪಿತನ ಪತ್ತೆ ಕಾರ್ಯದಲ್ಲಿ ಇದ್ದಾಗ ದಿ. 1ರಂದು ಹಿರೇಬಾಗೆವಾಡಿ ಪೊಲೀಸ್ ಠಾಣಿ ಅಪರಾಧ ಸಂಖ್ಯೆ : 02/2026 ಕಲಂ 303(2) ಬಿಎನ್‌ಎಸ್-2023 ಪ್ರಕರಣದಲ್ಲಿ ಆರೋಪಿತನಾದ ಲಕ್ಷ್ಮಣ ವಿರುಪಾಕ್ಷಿ ಕಣಬರ್ಗಿ ಈತನ ಕಡೆಯಿಂದ ಹಿರೇಬಾಗೆವಾಡಿ ಪೊಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಅಂದಾಜು 2,55,000 ರೂಪಾಯಿ ಮೌಲ್ಯದ 5 ಮೋಟಾರ ಸೈಕಲಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಆರೋಪಿತರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಹಿರೇಬಾಗೆವಾಡಿ ಪೊಲೀಸ್ ಠಾಣಿಯ ಇನ್ಸಪೆಕ್ಟರ್ ಎಸ್.ಕೆ.ಹೊಳೆನ್ನವರ, ಪಿಎಸ್‌ಐ ಅವಿನಾಶ ಐ ಯರಗೊಪ್ಪ, ಪಿಎಸ್‌ಐ ಬಿ.ಕೆ.ಮಿಟಾರ ಹಾಗೂ ಸಿಬ್ಬಂದಿ ಜನರಾದ ಎಂ.ಐ.ತುಮರಿ, ಪ್ರಭಾಕರ ಭೂಷಿ, ಆರ್.ಎಸ್.ಹಾಲ್ ಎಸ್ ಕೆಳಗಿನಮನಿ, ಮಹಾಂತೇಶ ಕಡೆನ್ನವರ, ಎಮ್.ಜಿ.ಮಾಣಿಹಾರ ಇವರ ತಂಡ ಕರ್ತವ್ಯ ನಿರ್ವಹಿಸಿದ್ದು, ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿರುತ್ತಾರೆ.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 