ಗುಣಮಟ್ಟದ ಶಿಕ್ಷಣ ನೀಡುವುದೇ ನಮ್ಮ ಉದ್ದೇಶ: ಹಣಮಂತ ಬೋಸಗಿ

ಗುಣಮಟ್ಟದ ಶಿಕ್ಷಣ ನೀಡುವುದೇ ನಮ್ಮ ಉದ್ದೇಶ: ಹಣಮಂತ ಬೋಸಗಿ  Our aim is to provide quality education: Hanamant Bosagi

ಇಂಡಿ 01 : ತಾಲ್ಲೂಕಿನ ಹೊರ್ತಿಯ ಗ್ರಾಮದ ಮಂತ್ರಾವಾಯಿ ಮಂಗಲ ಕಾರ್ಯಾಲದಲ್ಲಿ ಭಾನುವಾರ ನಡೆದ ಸತತ 21ನೇ ವರ್ಷದ ಹಾಗೂ 2 ತಿಂಗಳಿಂದ ನಡೆಸಿಕೊಂಡು ಬಂದ  ಬೇಸಿಗೆ ಶಿಬಿರದ ಸಮಾರೋಪ ಹಾಗೂ  ಮಾಡರ್ನ ಕೋಚಿಂಗ್ ಕ್ಲಾಸ್ ನಲ್ಲಿ  ಕೋಚಿಂಗ್ ಪಡೆದು  ವಿವಿಧ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಶೇ 90ಕ್ಕಿಂತ ಹೆಚ್ಚು ಅಂಕ ಗಳಿಸಿದ ಹಳೇ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಥಮವಾಗಿ ಶ್ರೀ ರೇವಣಸಿದ್ಧೇಶ್ವರ ಫೋಟೋ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಝಳಕಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಗುರುಗಳಾದ ಎಸ್ ಎನ್ ನಾಗವೇಣಿ ಮಾತನಾಡಿ’ಸತತ,ಕಠಿಣ ಪರಿಶ್ರಮದಿಂದ ಅಭ್ಯಸಿಸಿದರೆ, ಪರೀಕ್ಷೆಯಲ್ಲಿ  ಯಶಸ್ಸು ಕಾಣಲು ಸಾಧ್ಯ’ಸತತ ಹಾಗೂ ಕಠಿಣ ಪರಿಶ್ರಮ ಮತ್ತು ಆಯಾದಿನದ ಪಠ್ಯಕ್ರಮದನುಸರವಾಗಿ ಅಭ್ಯಸಿಸಿದರೆ, ಪರೀಕ್ಷೆಯಲ್ಲಿ  ಹೆಚ್ಚಿನ ಅಂಕ ಪಡೆದು ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.

ಹೊರ್ತಿಯ ಮಾಡರ್ನ ಕೋಚಿಂಗ್ ಕ್ಲಾಸ್  ಸಂಸ್ಥಾಪಕ ಅಧ್ಯಕ್ಷ ಮತ್ತು ಸಂಚಾಲಕ ಎಚ್ ಆರ್‌. ಭೋಸಗಿ ಅವರು ಮಾತನಾಡಿ  ಮಾಡರ್ನ ಕೋಚಿಂಗ್ ಕ್ಲಾಸ್ ಸನ ವತಿಯಿಂದ 2 ತಿಂಗಳಿಂದ ನಡೆಸಿಕೊಂಡು ಬಂದ ಸತತ 21ನೇ ವರ್ಷದ ಬೇಸಿಗೆ ಶಿಬಿರದಲ್ಲಿ  ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಸುಮಾರು 200ಕ್ಕೂ ಹೆಚ್ಚು  ವಿಜ್ಞಾನ ವಿಷಯಗಳ ಪ್ರಯೋಗಗಳನ್ನು  ಮಾಡಿ ತೋರಿಸಲಾಗಿದೆ ಅಲ್ಲದೇ ಇಂಗ್ಲಿಷ್  ಹಾಗೂ ಕನ್ನಡ ವ್ಯಾಕರಣ ಮತ್ತು ಪಠ್ಯದ  ಪ್ರತಿ ಎಲ್ಲ ಪಾಠದ ವಿಷಯ ಗಳನ್ನು ಮಕ್ಕಳಿಗೆ ತಿಳಿಯುವ ಹಾಗೇ ಬೋಧನೆ ಮಾಡಿ ತಿಳಿಸಿ ಹೇಳಲಾಗಿದೆ’ ಎಂದು ಹೇಳಿದರು.’ಈ ಕೋಚಿಂಗ್ ಕ್ಲಾಸ್ ಸ ನಿಂದ ಕಲಿತ ವಿದ್ಯಾರ್ಥಿಗಳು ಮತ್ತೇ ವಿಷಯಗಳನ್ನು ಸತತ ಅಭ್ಯಸಿಸಿ, ಮುಂಬರುವ ವಾರ್ಷಿಕ ಪರೀಕ್ಷೆ ಯಲ್ಲಿ ಹೆಚ್ಚು ಅಂಕ ಪಡೆಯಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಹೊರ್ತಿಯ ಸರ್ವೋದಯ ಇಂಗ್ಲಿಷ್ ಮಾಧ್ಯಮ ಸಂಸ್ಥಾಪಕ ರೇವಣಸಿದ್ಧ ಪೂಜಾರಿ ಮಾತನಾಡಿ ವಿದ್ಯಾರ್ಥಿಗಳು ಈಗಾಗಲೇ ಈ ಹೊರ್ತಿ ಮಾಡರ್ನ ಕೋಚಿಂಗ್ ಕ್ಲಾಸ್ ಸನಲ್ಲಿ  ಕ್ಲಾಸಸ್ ನಲ್ಲಿ 2026-27ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪಠ್ಯದ ಎಲ್ಲ ವಿಷಯಗಳನ್ನು ಪ್ರಯೋಗಗಳ  ಮತ್ತು ಬೋಧನೆಯ ಮೂಲಕ ಎಲ್ಲ ವಿಷಯಗಳನ್ನು ತಿಳಿ ಹೇಳಿದ್ದಾರೆ ಇದನ್ನು ನೀವು ಮತ್ತೇ ಸತತ ಅಧ್ಯಯನದ ಮೂಲಕ ಮುಂದಿನ 2027ರ ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ  ಉನ್ನತ ಶ್ರೇಣಿಯಲ್ಲಿ ಪಾಸಾಗಿ, ಮುಂದಿನ ಶಿಕ್ಷಣಕ್ಕೆ ಅನುಕೂಲವಾಗಲ್ಲಿದೆ. ಮುಂದೆ ಉನ್ನತ ಶಿಕ್ಷಣ ಪಡೆದು ಒಳ್ಳೆಯ ಹುದ್ದೆ ಪಡೆದು ತಂದೆ -ತಾಯಿಗಳಿಗೆ ಹೊರೆ ಯಾಗದೇ, ಸುಂದರ ಜೀವನ ಕಂಡುಕೊಂಡು ಪೋಷಕರ ಜೀವನಕ್ಕೆ ಆಧಾರ-ಆಶಾ ಕಿರಣವಾಗಬೇಕು’ ಎಂದು ಸಲಹೆ ನೀಡಿದರು.

ಉಮರಾಣಿ ಶಿಕ್ಷಕ ಶ್ರೀಶೈಲ ಕರಜಗಿ ಮತ್ತು ವಿಜಯಕುಮಾರ ಬೆ ಕನಾಳ ಮಾತನಾಡಿ,’ ಜಗತ್ತಿನಲ್ಲೇ ಭಾರತ ದೇಶ ಸಂಸ್ಕೃತಿ, ಸಂಸ್ಕಾರ ಹೊಂದಿ ರುವ ಮೇರು ದೇಶವಾಗಿದೆ. ಇಂದಿನ ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ, ತಂದೆ,ತಾಯಿ, ಗುರು ಹಿರಿಯರನ್ನು ಗೌರವಿಸ ಬೇಕಾದ ಅಗತ್ಯವಿದೆ’ ಎಂದು ಹೇಳಿದರು.ಶಿಕ್ಷಕರಾದ ಅಣ್ಣಪ್ಪ ಬಿರಾದಾರ, ಎಸ್ ಜಿ.ಅಂದೇವಾಡಿ ಸೇರಿದಂತೆ ಅನೇಕರು ಮಾತನಾಡಿದರು ವೇದಿಕೆಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಗುರುರಾಜ ಲಾಳಸಂಗಿ, ಕೆ ಬಿ. ಸಂಖ, ಪ್ರಕಾಶ ಬನಗೊಂಡೆ ಸಂತೋಷ್ ಕೊಳೇಕರ ಮಲ್ಲೇಶಿ ಭೋಸಗಿ, ಆರ್ ಟಿ ವಸ್ತ್ರದ ಸಚಿನ್ ಇಂಡಿ ಸಂತೋಷ್ ಜಾದವ್  ಚೆನ್ನಪ್ಪ ಹೆಗದ್ಯಾಲ್ ಸರಸ್ವತಿ ಮಠಪತಿ  ತಾನಾಜಿ ಮಸ್ಕಿ  ಕಮಲಾ ಬೋಸಗಿ ದುಂಡಪ್ಪ ಮೇತ್ರಿ ತಮ್ಮರಾಯ ಮೇತ್ರಿ ಜಕ್ಕಪ್ಪ ಕರಂಡೆ ಹಾಗೂ ವಿದ್ಯಾರ್ಥಿಗಳು ಪಾಲಕರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು ಶಿಕ್ಷಕರಾದ ಕೆ ಬಿ.ಸಂಖ  ನಿರೂಪಿಸಿದರು. ಸಂತೋಷ್ ಕೊಳೇಕರ ವಂದಿಸಿದರು.