ಅಲ್ಪಸಂಖ್ಯಾತ, ಅಹಿಂದ ನಾಯಕರಿಗೆ ಡಿಸಿಎಂ ಸ್ಥಾನಗಳಿಂದ ಗೌರವಿಸಿ: ಚಿಕ್ಕೋಡಿ
Honor minority and non-Hind leaders with DCM posts: Chikkodi
ಲೋಕದರ್ಶನ ವರದಿ
ಅಲ್ಪಸಂಖ್ಯಾತ, ಅಹಿಂದ ನಾಯಕರಿಗೆ ಡಿಸಿಎಂ ಸ್ಥಾನಗಳಿಂದ ಗೌರವಿಸಿ: ಚಿಕ್ಕೋಡಿ
ಮಹಾಲಿಂಗಪುರ 31: ಅಲ್ಪಸಂಖ್ಯಾತರ ನಾಯಕ ಜಮೀರ್ ಅಹಮದಖಾನ್ ಮತ್ತು ಅಹಿಂದ ನಾಯಕ ಆರ್.ಬಿ.ತಿಮ್ಮಾಪುರ ಕಾಂಗ್ರೆಸ್ ಪಕ್ಷದ ಎರಡು ಶಕ್ತಿಗಳು, ಇವರಿಗೆ ನೂತನ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನಗಳನ್ನು ನೀಡಿ ಸಮುದಾಯಗಳನ್ನು ಗೌರವಿಸಬೇಕೆಂದು ಮಾಜಿ ಪುರಸಭಾ ಸದಸ್ಯ ಮುಖಂಡ ಮುಸ್ತಾಖ ಚಿಕ್ಕೋಡಿ ಕಾಂಗ್ರೆಸ್ ಹೈಕಮಾಂಡ್ ಮತ್ತು ಸಿ.ಎಲ್.ಪಿ ನಾಯಕ ಡಿ.ಕೆ.ಶಿವಕುಮಾರರಲ್ಲಿ ಮನವಿ ಮಾಡಿದ್ದಾರೆ.
ಭಾನುವಾರ ನಡೆದ ಮುಸ್ಲಿಂ ಸಮುದಾಯದ ಸಭೆಯಲ್ಲಿ ಮಾತನಾಡಿದ ಅವರು, ವಸತಿ ಮತ್ತು ವಕ್ಫ್ ಖಾತೆ ಸಚಿವರಾಗಿ ಜಮೀರ ಅಹಮದಖಾನ್ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ ಜನಮಾನಸದಲ್ಲಿ ಸದಾಕಾಲ ಉಳಿಯುವ ವ್ಯಕ್ತಿಯಾಗಿದ್ದರೆ,ಇತ್ತ ಉತ್ತರ ಕರ್ನಾಟಕ ಭಾಗದ ಅಹಿಂದ ನಾಯಕ, ಮುಧೋಳ ಕ್ಷೇತ್ರಕ್ಕೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ತಂದು ಅಭಿವೃದ್ಧಿ ಹರಿಕಾರರೆಂದೇ ಜನತೆಯಿಂದ ಬಿರುದಾಂಕಿತ ಪಡೆದಂತ ಸಚಿವ ಆರ್. ಬಿ.ತಿಮ್ಮಾಪೂರ ಅವರುಗಳಿಗೆ ಹೊಸ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡುವುದು ಸೂಕ್ತ ಎಂದರು.
ಈ ಸಭೆಯಲ್ಲಿ ಸಜನಸಾಬ ಪೆಂಡಾರಿ, ಸಯ್ಯದ ಯಾದವಾಡ,ನಜೀರ ಝಾರೆ, ನಜೀರ ಅತ್ತಾರ, ದಾವಲಸಾಬ ನಗಾರ್ಚಿ,ಮೇಹಬೂಬ ಜೀರಗಾಳ, ಹಾಜಿ ರಾಜೇಸಾಬ ಐನಾಪೂರ,ಹಾಸಿಂ ಪೆಂಡಾರಿ,ರಿಯಾಜ ಪೆಂಡಾರಿ, ರಾಜಅಹ್ಮದ ಐನಾಪೂರ,ಆಸಿಫ ಮಾಲದಾರ, ದಾದಾ ಸನದಿ, ಸಲ್ಮಾನ ಪಠಾಣ,ಯುನೂಸ್ ಅತ್ತಾರ, ರಸೂಲ್ ಸಾಂಗ್ಲಿಕರ, ಮೇಹಬೂಬ ಪೆಂಡಾರಿ, ರಾಜೇಸಾಬ ಐನಾಪುರ, ಶಬ್ಬೀರ ಜಮಾದಾರ, ಷರೀಫ್ ಪೆಂಡಾರಿ,ಇರ್ಷಾದ ಪಟೇಲ್, ಬದ್ರುದ್ದೀನ ಐನಾಪುರ, ಇಬ್ರಾಹಿಂ ಪೆಂಡಾರಿ, ಯೂಸೂಫ ಅತ್ತಾರ, ಇಬ್ರಾಹಿಂ ಐನಾಪೂರ, ಆಶೀಫ್ ಮಾಲದಾರ,ಗನಸೈದ ಜಂಗಿ,ಶಬ್ಬೀರ ಮಾಲಾಪೂರ, ಸಲಿಂ ಪೆಂಡಾರಿ, ಸುಲೇಮಾನ ಪೆಂಡಾರಿ ಸೇರಿದಂತೆ ಇನ್ನೂ ಅನೇಕರಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 