ಶಿರಹಟ್ಟಿ

22ರಿಂದ ಹೊಳಲಮ್ಮದೇವಿ ನವರಾತ್ರಿ ಉತ್ಸವ ಪ್ರಾರಂಭ

22ರಿಂದ ಹೊಳಲಮ್ಮದೇವಿ ನವರಾತ್ರಿ ಉತ್ಸವ ಪ್ರಾರಂಭ

ಶಿರಹಟ್ಟಿ 19 : ಶಿರಹಟ್ಟಿ ತಾಲೂಕಿನ ಶ್ರೀಮಂತಗಡದ ಆದಿಶಕ್ತಿ ಹೊಳಲಮ್ಮದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವನ್ನು ದಿ. 22-9-2025 ಸೋಮವಾರದಿಂದ 2-10-2025 ಗುರುವಾರದವರೆಗೆ ಸಾಯಂಕಾಲ 7 ಗಂಟೆಯಿಂದ 9 ಗಂಟೆಯವರೆಗೆ ಶ್ರೀ ಹೊಳಲಮ್ಮದೇವಿ ಪಾರಾಯಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು.

ಪುರಾಣ ಪ್ರವಚನವನ್ನು ಗುಲಬುರ್ಗಾ ಜಿಲ್ಲೆಯ ಆಳಂದ ತಾಲೂಕಿನ ದೋತರಗಾಂವದ ಮನಿಪ್ರ ಕೊರಣೇಶ್ವರ ಮಹಾಸ್ವಾಮಿಜಿಗಳು ಮತ್ತು ಪಠಣವನ್ನು  ಪ್ರಕಾಶ ಶಿವಬಸಪ್ಪ ಮೇಟಿಯವರಿಂದ  ಹಾಗೂ ಹಾರ್ಮೋನಿಯಂ ವಿಠೋಬ ಕಾಶಣ್ಣವರ, ತಬಲಾ ಸಾಥ ಜಗನ್ನಾಥ ವಿನಾಯಕ ಹಣಗಿ ಯವರು ನೆರವೇರಿಸಲಿದ್ದಾರೆ. 

ಈ ಬಾರಿ ಅದ್ದೂರಿಯಾಗಿ ಆಚರಿಸಲಿದ್ದು ಭಕ್ತಾಧಿಗಳು  ಹೆಚ್ಚಿನ ಸಂಖ್ಯಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು   ಹೋಳಲಮ್ಮದೇವಿ ಟ್ರಸ್ಟ ಕಮೀಟಿ ಅಧ್ಯಕ್ಷ ದಾಮೋಜಿ ತೆಗ್ಗಿಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ