ಅಂತರರಾಷ್ಟ್ರೀಯ

ಉಕ್ರೇನ್ ಯುದ್ಧಭೂಮಿಗೆ ಬಾಡಿಗೆ ಸೈನಿಕರು

ಉಕ್ರೇನ್ ಯುದ್ಧಭೂಮಿಗೆ ಬಾಡಿಗೆ ಸೈನಿಕರು

ಮಾಸ್ಕೋ: ಮಾರ್ಚ್ 05: ಪಾಶ್ಚಿಮಾತ್ಯ ದೇಶಗಳು ಉಕ್ರೇನ್‌ನ ಯುದ್ಧಭೂಮಿಗೆ ಬಾಡಿಗೆ ಸೈನಿಕರನ್ನು ಕರೆತಂದಿವೆ ಎಂದು ರಷ್ಯಾದ ರಾಯಭಾರ ಕಚೇರಿ ಆರೋಪಿಸಿದೆ. ಬ್ರಿಟನ್, ಡೆನ್ಮಾರ್ಕ್, ಲಾಟ್ವಿಯಾ, ಪೋಲೆಂಡ್ ಮತ್ತು ಕ್ರೊಯೇಷಿಯಾ ರಾಷ್ಟ್ರಗಳು ತಮ್ಮ ನಾಗರಿಕರಿಗೆ ಉಕ್ರೇನ್ ಭೂಪ್ರದೇಶದಲ್ಲಿ ಹೋರಾಡಲು ಅಧಿಕೃತವಾಗಿ ಅವಕಾಶ ಮಾಡಿಕೊಟ್ಟಿವೆ. ಇದೇ ಸಂದರ್ಭದಲ್ಲಿ ಅಮೆರಿಕ, ಅಕಾಡೆಮಿ, ಕ್ಯೂಬಿಕ್ ಮತ್ತು ಡೈನ್‌ಕಾರ್ಪ್‌ನಂತಹ ಖಾಸಗಿ ಮಿಲಿಟರಿ ಸಂಸ್ಥೆಗಳನ್ನು ನೇಮಿಸಿಕೊಳ್ಳಲು ಬೃಹತ್ ಅಭಿಯಾನ ಪ್ರಾರಂಭಿಸಿದೆ ಎಂದು ರಷ್ಯಾದ ರಾಯಭಾರ ಕಚೇರಿ ಆರೋಪಿಸಿದೆ.

ಫ್ರೆಂಚ್ ಫಾರಿನ್ ಲೀಜನ್ ಕೂಡ ಉಕ್ರೇನಿಯನ್ ಮೂಲದ ಜನರನ್ನು ಕಳುಹಿಸಲು ಯೋಜಿಸುತ್ತಿದೆ. ಇದೇ ರೀತಿ ಜರ್ಮನಿಯಿಂದಲೂ ಸಹಕಾರ ದೊರೆಯುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ರಷ್ಯಾ ಆರೋಪ ಮಾಡಿದೆ.

ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅನುಸಾರ ರಾಯಭಾರ ಕಚೇರಿ ನೀಡಿರುವ ಮಾಹಿತಿ ಪ್ರಕಾರ ರಷ್ಯಾದ ವಿರುದ್ಧ ಹೋರಾಟ ಮಾಡಲು ಸುಮಾರು 16,000 ವಿದೇಶಿ ಹೋರಾಟಗಾರರು ಉಕ್ರೇನ್‌ಗೆ ಆಗಮಿಸುವ ನಿರೀಕ್ಷೆಯಿದೆ ಎಂದು ತಿಳಿಸಿದೆ. ಸುಮಾರು 200 ಕ್ರೊಯೇಷಿಯಾದ ಬಾಡಿಗೆ ಸೈನಿಕರು ಈಗಾಗಲೇ ಪೋಲೆಂಡ್ ಮೂಲಕ ದೇಶ ಪ್ರವೇಶಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದ್ದು, ಅವರೆಲ್ಲ ಉಕ್ರೇನ್‌ನ ಆಗ್ನೇಯದಲ್ಲಿ ರಾಷ್ಟ್ರೀಯವಾದಿಗಳ ಬಣವನ್ನು ಸೇರಿಕೊಂಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಸುದ್ದಿ ಓದಿ