ಅಂತರರಾಷ್ಟ್ರೀಯ

ರಷ್ಯಾದಲ್ಲಿ ದಾಖಲೆ ಮಟ್ಟದ ಕೊರೊನಾ ಪ್ರಕರಣಗಳು

ರಷ್ಯಾದಲ್ಲಿ  ದಾಖಲೆ ಮಟ್ಟದ ಕೊರೊನಾ   ಪ್ರಕರಣಗಳು

ಮಾಸ್ಕೋ, ನವೆಂಬರ್ 3:  ವಿಶ್ವದಲ್ಲಿ  ಕೊರೊನಾ ಬಾಧಿತರ  ಸಂಖ್ಯೆ 4.69 ಕೋಟಿ ದಾಟಿದೆ. ಸಾವಿನ ಸಂಖ್ಯೆ 12.06 ಲಕ್ಷ ತಲುಪಿದೆ.  ಸೋಂಕಿನಿಂದ  ಚೇತರಿಸಿಕೊಂಡವರ  ಸಂಖ್ಯೆ 3.38 ಕೋಟಿ  ದಾಟಿದೆ.  ಪ್ರಪಂಚದಲ್ಲಿ  ಪ್ರಸ್ತುತ 1.19 ಕೋಟಿ ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 85,510  ಮಂದಿ  ಸೋಂಕಿತರ   ಪರಿಸ್ಥಿತಿ ಗಂಭೀರವಾಗಿದೆ.

ಮತ್ತೊಂದು ಕಡೆ  ಕೊರೊನಾಗೆ  ಲಸಿಕೆ   ರೂಪಿಸಿದ್ದೇವೆ  ಎಂದು  ಹೇಳಿಕೊಳ್ಳುತ್ತಿರುವ  ರಷ್ಯಾದಲ್ಲಿ   ದಿನ ದಿನಕ್ಕೂ ಕೊರೊನಾ  ಪ್ರಕರಣಗಳು  ಹೊಸ ದಾಖಲೆ  ಸೃಷ್ಟಿಸುತ್ತಿವೆ. ಭಾನುವಾರ ಒಂದೇ ದಿನ ರಷ್ಯಾದಲ್ಲಿ  ಒಟ್ಟು 18,665 ಕೊರೊನಾ  ಪ್ರಕರಣಗಳು ವರದಿಯಾಗಿವೆ. ಈ ಮೊದಲು, ಅಕ್ಟೋಬರ್ ಕೊನೆಯ ದಿನ  18,140  ಪ್ರಕರಣಗಳು ವರದಿಯಾಗಿದ್ದವು. ಅದಕ್ಕೂ  ಹಿಂದಿನ ದಿನದಲ್ಲಿ 18,183 ಪ್ರಕರಣಗಳು ಪತ್ತೆಯಾಗಿದ್ದವು.  ಬ್ರೆಜಿಲ್ ನಲ್ಲಿ  ಕಳೆದ 24 ಗಂಟೆಗಳಲ್ಲಿ 190 ಜನರು  ಕೊರೊನಾದಿಂದ  ಸಾವನ್ನಪ್ಪಿದ್ದಾರೆ ಇದರಿಂದ  ಬ್ರೆಜಿಲ್‌ನಲ್ಲಿ ಒಟ್ಟು ಸಾವಿನ ಸಂಖ್ಯೆ 1,60,074 ಕ್ಕೆ ತಲುಪಿದೆ.

ಸುದ್ದಿ ಓದಿ