ಅಂತರರಾಷ್ಟ್ರೀಯ

ಆರೋಗ್ಯ ಅಮೆರಿಕಾವನ್ನು ಭಯ ಭೀತಗೊಳಿಸುತ್ತಿರುವ ಒಮಿಕ್ರಾನ್…‌ ಶೇ 73 ರಷ್ಟು ಅದೇ ಪ್ರಕರಣಗಳು

ಆರೋಗ್ಯ ಅಮೆರಿಕಾವನ್ನು ಭಯ ಭೀತಗೊಳಿಸುತ್ತಿರುವ ಒಮಿಕ್ರಾನ್…‌ ಶೇ 73 ರಷ್ಟು ಅದೇ ಪ್ರಕರಣಗಳು

ನ್ಯೂಯಾರ್ಕ್ ಪ್ರದೇಶದ ಹೊಸ ಪ್ರಕರಣಗಳಲ್ಲಿ ಶೇ. 90 ಕ್ಕಿಂತ ಹೆಚ್ಚು ಓಮಿಕ್ರಾನ್ ರೂಪಾಂತರಗಳಾಗಿವೆ. ಕಳೆದ ವಾರ ಒಟ್ಟು 6,50,000 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ನವೆಂಬರ್ ಅಂತ್ಯದ ವೇಳೆಗೆ ದಾಖಲಾದ ಶೇ 99.5 ಪ್ರಕರಣಗಳು ಡೆಲ್ಟಾ ರೂಪಾಂತರಗಳಾಗಿವೆ ಎಂದು ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ನಿರ್ದೇಶಕ ಡಾ. ರೋಚೆಲ್ ವೆಲೆನ್ಸ್ಕಿ ಹೇಳಿದ್ದಾರೆ. ಆದರೆ, ಈಗ ಆ ಸ್ಥಾನವನ್ನು ಓಮಿಕ್ರಾನ್ ವೇಗವಾಗಿ ಆಕ್ರಮಿಸಿಕೊಂಡಿದೆ, ಇದು ಅಮೆರಿಕದ ಆರೋಗ್ಯ ವ್ಯವಸ್ಥೆಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

 

ಅಮೆರಿಕಾದಲ್ಲಿ ಮೊದಲ ‘ಓಮಿಕ್ರಾನ್’ ಸಾವು:
ಟೆಕ್ಸಾಸ್ ರಾಜ್ಯದಲ್ಲಿ ಈ ಹಿಂದೆ ಕೋಮಾದಿಂದ ಚೇತರಿಸಿಕೊಳ್ಳುತ್ತಿದ್ದ ಮಧ್ಯ ವಯಸ್ಕ ವ್ಯಕ್ತಿಯೊಬ್ಬರು ಒಮಿಕ್ರಾನ್‌ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಅಮೆರಿಕಾ ವೈದ್ಯಾಧಿಕಾರಿಗಳು ಹೇಳಿದ್ದಾರೆ. ಇದರಿಂದ ಅಮೆರಿಕಾದಲ್ಲಿ ಮೊದಲ ಓಮಿಕ್ರಾನ್ ಸಾವು ದಾಖಲಾಗಿದೆ. ಆತ ಕೋವಿಡ್ ಲಸಿಕೆ ಪಡೆದಿರಲಿಲ್ಲ ಎಂದು ಹ್ಯಾರಿಸ್ ಕೌಂಟಿ ಸಾರ್ವಜನಿಕ ಆರೋಗ್ಯ ಇಲಾಖೆ ಹೇಳಿದೆ.

ಬೈಡನ್‌ ಸಿಬ್ಬಂದಿಯೊಬ್ಬರಿಗೆ ಕೊರೊನಾ:

ಅಮೆರಿಕ ಅಧ್ಯಕ್ಷ ಬೈಡೆನ್ ಅವರ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಬೈಡನ್‌ ತಮ್ಮ “ಏರ್ ಫೋರ್ಸ್ ಒನ್” ವಿಶೇಷ ವಿಮಾನದಲ್ಲಿ ಶುಕ್ರವಾರ ದಕ್ಷಿಣ ಕೆರೊಲಿನಾದ ಆರೆಂಜ್ ಪ್ರದೇಶದಿಂದ ಫಿಲಡೆಲ್ಫಿಯಾಕ್ಕೆ ಪ್ರಯಾಣಿಸಿದ್ದರು. ಆ ಸಮಯದಲ್ಲಿ ವಿಮಾನದಲ್ಲಿದ್ದ ಸಿಬ್ಬಂದಿಯೊಬ್ಬರು ಬೈಡನ್‌ ಅವರೊಂದಿಗೆ 30 ನಿಮಿಷಗಳ ಕಾಲ ಇದ್ದರು. ಆ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ. ಇದರಿಂದ ಬೈಡನ್‌ ಅವರಿಗೂ ಕೊರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಬೈಡೆನ್ ನಿಯಮಿತವಾಗಿ ಕೊರೊನಾ ಪರೀಕ್ಷೆಗಳಿಗೆ ಒಳಗಾಗುತ್ತಿದ್ದಾರೆ. ಬುಧವಾರ ಮತ್ತೆ ಪರೀಕ್ಷೆ ನಡೆಯಲಿದೆ. ಬೈಡೆನ್ ಸರ್ಕಾರ ಕೊರೊನಾ ಹರಡುವಿಕೆ ತಡೆ ಕ್ರಮಗಳನ್ನು ಮತ್ತಷ್ಟು ವೇಗಗೊಳಿಸಲು ತಯಾರಿ ನಡೆಸುತ್ತಿದೆ. ಜನರಿಗೆ ಮನೆಯಲ್ಲಿಯೇ ಕ್ಷಿಪ್ರ ಪರೀಕ್ಷೆ ನಡೆಸಿಕೊಳ್ಳಲು ಸರ್ಕಾರ 50 ಕೋಟಿ ಕಿಟ್‌ಗಳನ್ನು ಉಚಿತವಾಗಿ ನೀಡಲು ಯೋಜಿಸಿದೆ.

 

ಸುದ್ದಿ ಓದಿ