ಸರಳವಾಗಿ ಮಹಾವೀರ ಜಯಂತಿ ಆಚರಣೆ
ಹುಕ್ಕೇರಿ 27: ಸ್ಥಳೀಯ ಹಳ್ಳದಕೇರಿಯ ಭಗವಾನ 1008 ಫಾಶ್ವನಾಥ ದಿಗಂಬರ ಜೈನ ಮಂದಿರದಲ್ಲಿ ಜೈನ ಬಾಂಧವರ ವತಿಯಿಂದ ಸರಕಾರದ ಮಾರ್ಗಸೂಚಿಯಂತೆ ಮಹಾವೀರ ಜಯಂತಿಯನ್ನು ಸರಳವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಮುಂಜಾನೆ ಬೆರಳೆಣಿಕೆಯಲ್ಲಿ ಮಾತ್ರ ಜನ ಉಪಸ್ಥಿತರಿದ್ದರು. ಮುತೈದೆಯರು ಮಹಾವೀರ ಜನ್ಮೋತ್ಸವವನ್ನು ಮಹಾವೀರರನ್ನು ತೊಟ್ಟಿಲಲ್ಲಿ ಹಾಕಿ ನಾಮಕರಣ ಮಾಡಿದರು. ರಾಜು ಉಪಾಧ್ಯೆಯವರು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಿದರು.
ಮಹಾವೀರ ನಿಲಜಗಿ, ಕಿರಣ ಸೊಲ್ಲಾಪೂರೆ, ಡಾ. ಬಿ.ಎ.ಸೊಲ್ಲಾಪೂರೆ, ರೋಹಿತ ಚೌಗಲಾ, ಬಾಹುಬಲಿ ಸೊಲ್ಲಾಪೂರೆ, ಸಂಜಯ ನಿಲಜಗಿ, ಪ್ರಜ್ವಲ ನಿಲಜಗಿ, ರಾಜೇಂದ್ರ ಪಾಟೀಲ ಹಾಗೂ ಇನ್ನಿತರರು ಉಪಸ್ಥಿತರಿದ್ದರು.