ಯರಗಟ್ಟಿ

ಜಾತಿ-ಧರ್ಮ ಮೀರಿ ಸಮಾಜ ಸುಧಾರಣೆಗೆ ಶ್ರಮಿಸಿದವರು ಹಡಪದ ಅಪ್ಪಣ್ಣ: ತಹಶೀಲ್ದಾರ್

ಜಾತಿ-ಧರ್ಮ ಮೀರಿ ಸಮಾಜ ಸುಧಾರಣೆಗೆ ಶ್ರಮಿಸಿದವರು ಹಡಪದ ಅಪ್ಪಣ್ಣ: ತಹಶೀಲ್ದಾರ್

ಯರಗಟ್ಟಿ 29 : ಶರಣ ಹಡಪದ ಅಪ್ಪಣ್ಣನವರು ಜಾತಿ, ಧರ್ಮ, ವರ್ಣ ಹಾಗೂ ವರ್ಗರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದು ತಹಶೀಲ್ದಾರ ಎಂ. ವ್ಹಿ. ಗುಂಡಪ್ಪಗೋಳ ಹೇಳಿದರು.  ಬುಧವಾರ ಪಟ್ಟಣ ತಹಶೀಲ್ದಾರ ಕಚೇರಿಯಲ್ಲಿ ಹಡಪದ ಅಪ್ಪಣ್ಣನವರ ಜಯಂತಿ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಚನೆ ಸಲ್ಲಿಸಿ ತಹಶೀಲ್ದಾರ ಅವರು ಮಾತನಾಡಿದರು.  ಅಪ್ಪಣ್ಣನವರು 12ನೇ ಶತಮಾನದ ವಚನ ಚಳವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರಾಗಿದ್ದಾರೆ ಎಂದು ಹೇಳಿದರು.  ಹಡಪದ ಸಮಾಜದ ತಾಲೂಕಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಹಡಪದ ಮಾತನಾಡಿ, ಸರ್ಕಾರ ಕಾರ್ಮಿಕ ಇಲಾಖೆಯಿಂದ ನೋಂದಾಯಿತ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.

ಆದರೆ ಕ್ಷೌರಿಕ ವೃತ್ತಿಯನ್ನು ಮಾಡುತ್ತಿರುವವರು ಯಾರೂ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿಲ್ಲದ ಕಾರಣ ಸರ್ಕಾರದ ಸೌಲಭ್ಯ ಸಿಕ್ಕಿಲ್ಲ ಎಂದರು ಹಾಗೂ ಹಡಪದ ಸಮಾಜಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಮಂಜುರು ಮಾಡುವಂತೆ ತಹಶೀಲ್ದಾರರಿಗೆ ಮನವಿ ಮಾಡಿದರು.  ಈ ವೇಳೆ ಗ್ರಾಮ ಆಡಳಿತಾಧಿಕಾರಿ ಎಲ್‌. ಬಿ. ದಳವಾಯಿ, ಶಾಹೀನ ಮೀಶ್ರಕೋಟಿ, ಬಾಲಕೃಷ್ಣ ಹಡಪದ, ಶಂಕರ​‍್ಪ ನಾವಿ, ಸಿದ್ದಪ್ಪ ನಾವಿ, ಮುತ್ತು ನಾವಿ, ಜಗದೀಶ ನಾವಿ, ಈರಣ್ಣಾ ಹಡಪದ, ಅಪ್ಪಣ್ಣಾ ನಾವಿ, ನಿಂಗಪ್ಪ ನಾವಿ, ಗಣೇಶ ನಾವಿ, ಸಂಗಪ್ಪಾ ನಾವಿ, ಸಂತೋಷ ಹಡಪದ, ರಮೇಶ ನಾವಿ, ತುಕಾರಾಮ ನಾವಿ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ