ಗುರುಸಿದ್ದೇಶ್ವರ ಬ್ಯಾಂಕ್ ವಾರ್ಷಿಕ ಸಭೆ 20ರಂದು
ಲೋಕದರ್ಶನ ವರದಿ
ಬೀಳಗಿ 19: ಪಟ್ಟಣದ ಪ್ರತಿಷ್ಠಿತ ಗುರುಸಿದ್ದೇಶ್ವರ ಪತ್ತಿನ ಸಹಕಾರಿ ಸಂಘ ನಿಯಮಿತದ 21ನೇ ವಾರ್ಷಿಕ ಸರ್ವಸಾಧಾರಣ ಸಭೆ ಸೆ.20ರಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಕಲ್ಮಠದ ಆವರಣದಲ್ಲಿ ನಡೆಯಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಶ್ರೀಶೈಲ ಯಂಕಂಚಿಮಠ ತಿಳಿಸಿದ್ದಾರೆ.
ಬ್ಯಾಂಕ್ ಸಭಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 21 ವರ್ಷಗಳಿಂದ ಸಂಘವು ರೈತರು, ವ್ಯಾಪಾರಸ್ಥರು ಹಾಗೂ ಸಣ್ಣಪುಟ್ಟ ಉದ್ಯಮಿಗಳಿಗೆ ಸಾಲ ಸೌಲಭ್ಯ ಒದಗಿಸುವ ಮೂಲಕ ಆರ್ಥಿಕವಾಗಿ ಬೆಂಬಲ ನೀಡುತ್ತ ಬಂದಿದೆ. ಗ್ರಾಹಕರು, ಷೇರುದಾರರು ಹಾಗೂ ಸದಸ್ಯರ ಸಹಕಾರದೊಂದಿಗೆ ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯ ಪ್ರಾಮಾಣಿಕ ಕಾರ್ಯದಿಂದ ಸಂಸ್ಥೆ ಅಭಿವೃದ್ಧಿ ಸಾಧಿಸಿದೆ ಎಂದರು.
ಸೆ.20ರಂದು ನಡೆಯುವ ಸಭೆಗೆ ಸಂಘದ ಎಲ್ಲ ಸದಸ್ಯರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಬ್ಯಾಂಕ್ ಉಪಾಧ್ಯಕ್ಷ ಕೆಂಪಯ್ಯ ವಿರಕ್ತಮಠ, ನಿರ್ದೇಶಕರಾದ ಎಸ್.ಎಚ್. ಯಾಳವಾರಮಠ, ಎಸ್.ಐ. ಗೋಡೆ, ಐ.ಎಸ್. ಬಂಗಾರಿಮಠ, ಎನ್.ಎಸ್. ಹಿರೇಮಠ, ಎಸ್.ಸಿ. ಹಿರೇಮಠ ಹಾಗೂ ಮುಖ್ಯ ಕಾರ್ಯನಿರ್ವಾಹಕ ಪಂಚಾಕ್ಷರಿ ಹಿರೇಮಠ ಉಪಸ್ಥಿತರಿದ್ದರು.