ಮಹಲಿಂಗಪುರ

ವಿಷಮುಕ್ತ ಆಹಾರ ಬೆಳೆದು ತಿನ್ನುವುದರಿಂದ ಆರೋಗ್ಯಕ್ಕೂ ಮತ್ತು ಆಯುಷ್ಯಕ್ಕೂ ಒಳ್ಳೆಯದು

ವಿಷಮುಕ್ತ ಆಹಾರ ಬೆಳೆದು ತಿನ್ನುವುದರಿಂದ ಆರೋಗ್ಯಕ್ಕೂ ಮತ್ತು ಆಯುಷ್ಯಕ್ಕೂ ಒಳ್ಳೆಯದು


ಮಹಾಲಿಂಗಪುರ  17: ಇಂದಿನ ಜನಾಂಗ ರಾಸಾಯನಿಕ ಪದಾರ್ಥಗಳ ಬಳಕೆಯಿಂದಾಗುವ ಆಹಾರಕ್ಕೆ ಮೊರೆ ಹೋಗಿದ್ದಾರೆ. ಈ ಆಹಾರ ಪದ್ಧತಿ ಶರೀರಕ್ಕೆ ಗುಣಮಟ್ಟದ್ದಲ್ಲ.ಆದ್ದರಿಂದ ವಿಷಮುಕ್ತ ಆಹಾರ ಬೆಳೆದು ತಿನ್ನುವುದರಿಂದ ಆರೋಗ್ಯಕ್ಕೂ ಮತ್ತು ಆಯುಷ್ಯಕ್ಕೂ ಒಳ್ಳೆಯದು ಎಂದು ಶಿರೂರಿನ ಕನಕ ಬ್ರಹ್ಮವಿದ್ಯಾಶ್ರಮದ ಚಿನ್ಮಯಾನಂದ ಸ್ವಾಮೀಜಿ ಹೇಳಿದರು.  

ಪಟ್ಟಣದ ಶ್ರೀ ಸಿದ್ದಾರೂಢ ಬ್ರಹ್ಮ ವಿದ್ಯಾಶ್ರಮದಲ್ಲಿ ಸಿ ಎಂ ಹುರಕಡ್ಲಿ ಫೌಂಡೇಶನ್ ಹಾಗೂ ಎಸ್ ಜಿ ಎಂ ನೇತ್ರ ಭಂಡಾರ ಸಂಶೋಧನಾ ಸಂಸ್ಥೆ ಹಾಗೂ ಎಂ ಎಂ ಜೋಶಿ ನೇತ್ರ ವಿಜ್ಞಾನ ಅಂಗ ಸಂಸ್ಥೆ ಹುಬ್ಬಳ್ಳಿ, ದೃಷ್ಟಿ ಕೇಂದ್ರ ಮಹಾಲಿಂಗಪುರ ಇವರ ಸಹಯೋಗದಲ್ಲಿ ನಡೆದ ಉಚಿತ ಕಣ್ಣಿನ ತಪಾಸನೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.  

ಪರಮ ಪೂಜ್ಯ ಶ್ರೀ ಸಹಜಾನಂದ ಶ್ರೀಗಳು ಆಶೀರ್ವಚನ ನೀಡಿದರು. ಸಂಸ್ಥಾಪಕ ಚನಬಸು ಹುರಕಡ್ಲಿ ಮತ್ತು ಡಾ.ರಾಘವೇಂದ್ರ ಪ್ರಾಸ್ತಾವಿಕ ಮಾತನಾಡಿ, ಕಾರ್ಯಕ್ರಮದ ಉದ್ದೇಶ ಮತ್ತು ರೂಪುರೇಷೆ ತಿಳಿಸಿದರು. ಮುಂ.10 ಗಂಟೆಯಿಂದ ಸಾ.6ರವರೆಗೆ ಶಿಬಿರ ನಡೆಸಿ 300ಕ್ಕೂ ಹೆಚ್ಚು ಫಲಾನುಭವಿಗಳಿಗೆ ದೂರ ಮತ್ತು ಸಮೀಪ ದೃಷ್ಟಿಕೋನದಿಂದ ಕಣ್ಣಿನ ತಪಾಸನೆ ನಡೆಯಿತು. ಶಸ್ತ್ರ ಚಿಕಿತ್ಸೆಗೆ ಒಳಗಾದ ಜನರಿಗೆ ಮೂಲ ಸೌಲಭ್ಯ ಕಲ್ಪಿಸಿ ಜಮಖಂಡಿಯ ಎಂ ಎಂ ಜೋಶಿ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಲು ಕಲ್ಪಿಸಲಾಯಿತು. ನ.09ರಂದು ಕನ್ನಡಕ ವಿತರಣೆ ಮಾಡಲಾಗುವುದು ಎಂದರು. 

ಈ ಸಂದರ್ಭದಲ್ಲಿ ಹುಬ್ಬಳ್ಳಿಯ ವೈದ್ಯ ಡಾ.ಸೌರಭ,ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆ ಡಾ.ಸೈಯದಾ ನಜೀಮಾ, ಪುರಸಭೆ ಸದಸ್ಯೆ ಸವಿತಾ ಹುರಕಡ್ಲಿ,ಮಹೇಶ ಇಟಕನ್ನವರ,ಶಿವಾನಂದ ಬಿದರಿ,ಗೋವಿಂದಗೌಡ ಪಾಟೀಲ,ಸಂಜೀವ ಬಾರಕೋಲ,ಸಿದ್ದು ದಢೂತಿ,ಪ್ರಕಾಶ ಬಾಡನವರ,ಮಹಾಲಿಂಗಪ್ಪ ಕಂಠಿ,ಬಸವರಾಜ ಗಿರಿಸಾಗರ,ಕುಮಾರ ಮನವಡೆ,ಶಶಿಧರ ಹಳ್ಳಿ,ರಾಜು ಬೆಳಗಾಂವಕರ,ಸಂತೋಷ ಪಾನಶೆಟ್ಟಿ,ರಾಜಶ್ರೀ ಗಿರಿಸಾಗರ ಸೇರಿದಂತೆ ಗ್ರಾಮಸ್ಥರು ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.   



ಸುದ್ದಿ ಓದಿ