ಅಂತರರಾಷ್ಟ್ರೀಯ

ಗ್ರೀಸ್; ಏಜಿಯನ್‌ ಸಮುದ್ರದಲ್ಲಿ ದೋಣಿ ಮುಳುಗಿ 13 ಮಂದಿ ಸಾವು

ಗ್ರೀಸ್; ಏಜಿಯನ್‌ ಸಮುದ್ರದಲ್ಲಿ ದೋಣಿ ಮುಳುಗಿ 13 ಮಂದಿ ಸಾವು

ಗ್ರೀಸ್, ಡಿ 25 : ಗ್ರೀಸ್ ದೇಶದ ಏಜಿಯನ್‌ ಸಮುದ್ರದಲ್ಲಿ ಶುಕ್ರವಾರ ಮಧ್ಯರಾತ್ರಿ ಸಂಭವಿಸಿದ ದೋಣಿ ದುರಂತದಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ. ಕಳ್ಳಸಾಗಾಣಿಕೆದಾರರು ಟರ್ಕಿಯಿಂದ ಇಟಲಿಗೆ ತೆರಳುವ ಅಪಾಯಕಾರಿ ಸಮುದ್ರ ಮಾರ್ಗದಲ್ಲಿ ಈ ದೋಣಿ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ 13 ಮಂದಿಸಾವನ್ನಪ್ಪಿದ್ದಾರೆ ಎಂದು ಕರಾವಳಿ ರಕ್ಷಣಾ ಪಡೆ ತಿಳಿಸಿದೆ. ಸೆಂಟ್ರಲ್‌ ಏಜಿಯನ್‌ ಸಮುದ್ರದ ಪರೋಸ್‌ ದ್ವೀಪಕ್ಕೆ 8 ಕಿ.ಮೀ ದೂರದಲ್ಲಿ ಶುಕ್ರವಾರ ಮಧ್ಯ ರಾತ್ರಿ ದೋಣಿ ಮುಳುಗಿದ ಪರಿಣಾಮಪ್ರಾಣಾಪಾಯದಿಂದ ಪಾರಾಗಿರುವವರು ಕರಾವಳಿ ರಕ್ಷಣಾ ಪಡೆಗೆ ತಿಳಿಸಿದ್ದಾರೆ. ಐದು ಕರಾವಳಿ ಪಡೆ ದೋಣಿಗಳು, ಒಂಬತ್ತು ಖಾಸಗಿ ದೋಣಿಗಳು, ಒಂದು ಹೆಲಿಕಾಪ್ಟರ್‌, ಸೇನಾ ಸಾರಿಗೆ ವಿಮಾನ ರಾತ್ರಿ ಕಾರ್ಯಾಚರಣೆ ನಡೆಸಿ 62 ಮಂದಿಯನ್ನು ರಕ್ಷಿಸಿವೆ. ಕಾರ್ಯಾಚರಣೆಯಲ್ಲಿ ಕರಾವಳಿ ಪಡೆಯ ಡೈವರ್ಸ್‌ ಕೂಡಾ ಪಾಲ್ಗೊಂಡಿದ್ದರು.

ಈ ಘಟನೆಯಲ್ಲಿ 13 ಮಂದಿಸಾವನ್ನಪ್ಪಿದ್ದಾರೆ ಎಂದು ಕರಾವಳಿ ರಕ್ಷಣಾ ಪಡೆ ತಿಳಿಸಿದೆ.

ಸೆಂಟ್ರಲ್‌ ಏಜಿಯನ್‌ ಸಮುದ್ರದ ಪರೋಸ್‌ ದ್ವೀಪಕ್ಕೆ 8 ಕಿ.ಮೀ ದೂರದಲ್ಲಿ ಶುಕ್ರವಾರ ಮಧ್ಯ ರಾತ್ರಿ ದೋಣಿ ಮುಳುಗಿದ ಪರಿಣಾಮಪ್ರಾಣಾಪಾಯದಿಂದ ಪಾರಾಗಿರುವವರು ಕರಾವಳಿ ರಕ್ಷಣಾ ಪಡೆಗೆ ತಿಳಿಸಿದ್ದಾರೆ. ಐದು ಕರಾವಳಿ ಪಡೆ ದೋಣಿಗಳು, ಒಂಬತ್ತು ಖಾಸಗಿ ದೋಣಿಗಳು, ಒಂದು ಹೆಲಿಕಾಪ್ಟರ್‌, ಸೇನಾ ಸಾರಿಗೆ ವಿಮಾನ ರಾತ್ರಿ ಕಾರ್ಯಾಚರಣೆ ನಡೆಸಿ 62 ಮಂದಿಯನ್ನು ರಕ್ಷಿಸಿವೆ. ಕಾರ್ಯಾಚರಣೆಯಲ್ಲಿ ಕರಾವಳಿ ಪಡೆಯ ಡೈವರ್ಸ್‌ ಕೂಡಾ ಪಾಲ್ಗೊಂಡಿದ್ದರು.

ಸುದ್ದಿ ಓದಿ