ಹಿಪ್ಪರಗಿಯಲ್ಲಿ ಅದ್ದೂರಿ ಕೃಷ್ಣ ಆರತಿ ಸಂಭ್ರಮ

ಹಿಪ್ಪರಗಿಯಲ್ಲಿ ಅದ್ದೂರಿ ಕೃಷ್ಣ ಆರತಿ ಸಂಭ್ರಮ Grand Krishna Aarathi celebrations in Hipparagi

ಲೋಕದರ್ಶನ ವರದಿ 

 ಜಮಖಂಡಿ ಸೆ.6: ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಮಾಜಿ ಸಚಿವ, ಉದ್ಯಮಿ ಡಾ. ಮುರುಗೇಶ್ ನಿರಾಣಿ ಅವರ 61ನೇ ಜನ್ಮದಿನದ ಅಂಗವಾಗಿ ತಾಲ್ಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಆಯೋಜಿಸಿದ್ದ ಕೃಷ್ಣ ಆರತಿ ಸಂಭ್ರಮ ಭಕ್ತಿ, ಸಾಂಸ್ಕೃತಿಕ ವೈಭವ ಹಾಗೂ ಅಭಿಮಾನದ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಯಿತು.  

ಕೃಷ್ಣಾ ನದಿ ತೀರದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮಕ್ಕಾಗಿ ಇಡೀ ಹಿಪ್ಪರಗಿ ಗ್ರಾಮವನ್ನು ತ್ರಿವರ್ಣ ದೀಪಗಳಿಂದ ಅಲಂಕರಿಸಲಾಗಿತ್ತು. ವಿದ್ಯುತ್ ದೀಪಗಳ ಬೆಳಕಿನಲ್ಲಿ ಗ್ರಾಮ ಕಂಗೊಳಿಸಿದ್ದು, ನೋಡುಗರ ಗಮನ ಸೆಳೆಯಿತು.  

ಶ್ರೀಶೈಲದಿಂದ ಆಗಮಿಸಿದ್ದ ಧರ್ಮರಥಕ್ಕೆ ಗ್ರಾಮಸ್ಥರು ಹಾಗೂ ಭಕ್ತರು ಅದ್ದೂರಿ ಸ್ವಾಗತ ಕೋರಿದರು. ಕರಡಿ ಮಜಲು, ಶಹನಾಯಿ, ಡೊಳ್ಳು ಸೇರಿದಂತೆ ವಿವಿಧ ವಾದ್ಯಮೇಳಗಳೊಂದಿಗೆ ಧರ್ಮರಥದ ಶೋಭಾಯಾತ್ರೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಭಕ್ತಿಭಾವ ಮೆರೆದರು.  

ಸಹಜಾನಂದ ದೇವಗಿರಿ ಬಾಬಾ ಸೇರಿದಂತೆ ವಿವಿಧ ಯೋಗಿಗಳು, ನಾಡಿನ ಪ್ರಮುಖ ಮಠಾಧೀಶರು, ಸಂತರು ಹಾಗೂ ಧಾರ್ಮಿಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗ್ರಾಮಸ್ಥರು ಮತ್ತು ಅಭಿಮಾನಿಗಳು ಡಾ. ಮುರುಗೇಶ್ ನಿರಾಣಿ ಅವರನ್ನು ಭವ್ಯ ಮೆರವಣಿಗೆಯ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು.  

ಕೃಷ್ಣಾ ನದಿ ತೀರದಲ್ಲಿರುವ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀಶೈಲದಿಂದ ಆಗಮಿಸಿದ್ದ ಪಂಡಿತರು ಹಾಗೂ ಅರ್ಚಕರ ನೇತೃತ್ವದಲ್ಲಿ ಹೋಮ-ಹವನ, ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಕೃಷ್ಣಾ ನದಿಗೆ ಆರತಿ ಸಲ್ಲಿಸುವ ಮೂಲಕ ನದಿತಾಯಿಗೆ ಕೃತಜ್ಞತೆ ಅರ​‍್ಿಸಲಾಯಿತು.  

ಶೋಭಾಯಾತ್ರೆಯಲ್ಲಿ ಸಾಗುತ್ತಿದ್ದ ಡಾ. ಮುರುಗೇಶ್ ನಿರಾಣಿ ಅವರಿಗೆ ಅಭಿಮಾನಿಗಳು ಪುಷ್ಪವೃಷ್ಟಿ ಮಾಡುವ ಮೂಲಕ ಶುಭಾಶಯ ಕೋರಿದರು. ಹೂಮಳೆ, ಬೃಹತ್ ಕಬ್ಬು ಹಾಗೂ ಸೇಬಿನ ಹಾರಗಳ ಮೂಲಕ ಗ್ರಾಮಸ್ಥರು ಆತ್ಮೀಯ ಸ್ವಾಗತ ನೀಡಿದರು.