ಗೋವಾ ರಾಜ್ಯಪಾಲೆ ಸೀಬರ್ಡ ನೌಕಾನೆಲೆಗೆ ಭೇಟಿ
ಕಾರವಾರ: ಗೋವಾ ರಾಜ್ಯದ ರಾಜ್ಯಪಾಲೆ ಮೃದುಲಾ ಸಿನ್ಹಾ ಅವರು ಎ.24 ರಿಂದ ಎ.26 ರವರಗೆ ಕಾರವಾರ ಬಳಿಯ ಸೀಬರ್ಡ ಐಎನ್ಎಸ್ ಕದಂಬ ನೌಕಾನೆಲೆಗೆ ಭೇಟಿ ನೀಡಿ ಅಲ್ಲಿನ ಎರಡನೇ ಹಂತದ ಕಾಮಗಾರಿಗಳನ್ನು ವೀಕ್ಷಿಸಿದರು.
ಕದಂಬ ನೌಕಾನೆಲೆಯನ್ನು ಕಂಡು ತೃಪ್ತಿ ವ್ಯಕ್ತಪಡಿಸಿದ ಅವರು ಶಿಫ್ ಲಿಫ್ಟ್ ವ್ಯವಸ್ಥೆ ಸೇರಿದಂತೆ ನೌಕಾನೆಲೆಯ ಅಗಧತೆಯನ್ನು ಕಣ್ತುಂಬಿಕೊಂಡರು. ಯುದ್ಧನೌಕೆಗಳ ನೆಲೆ ಹಾಗೂ ವಿಶಾಲ ಕಡಲು ಹಾಗೂ ಯುದ್ಧನೌಕೆಗಳ ನಿಲುಗಡೆಗೆ ಸಂಬಂಧಿಸಿದಂತೆ ನಿಮರ್ಿತವಾಗಿರುವ ಬಂದರನ್ನು ವೀಕ್ಷಿಸಿದರು.
ಹೆಚ್ಚಿನ ಯುದ್ಧನೌಕೆಗಳು ಹಾಗೂ ಸಬ್ ಮರೀನ್ ನೌಕೆಗಳ ತಾಣದ ಬಗ್ಗೆ ನೌಕಾ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಿಬ್ಬಂದಿಗಳ ಕಾರ್ಯಕ್ಷಮತೆ ಮತ್ತು ನೌಕಾನೆಲೆ ನಿಮರ್ಾಣದಲ್ಲಿ ವಿಸ್ತಾರವಾಗಿ ನಡೆದಿರುವ ಕಾಮಗಾರಿಗಳ ವಿವರ ಕೇಳಿ ಸಂತೃಪ್ತಿ ವ್ಯಕ್ತಪಡಿಸಿದರು.
ದೇಶದ ರಕ್ಷಣೆಯಲ್ಲಿ ನೇವಿಯ ಮಹತ್ವ ಕಂಡು ನೇವಿ ಸಿಬ್ಬಂದಿಯನ್ನು ಅಭಿನಂದಿಸಿದರು. ಅಲ್ಲದೇ ತಲವಾರ್ ನೌಕೆಯಲ್ಲಿ ಕುಳಿತು ಸ್ವಲ್ಪ ದೂರ ಸಮುದ್ರಯಾನ ಸಹ ಮಾಡಿದರು. ನೌಕಾ ಸೇನೆಯ ನೆನಪಿನ ಕಾಣಿಕೆಯನ್ನು ರಾಜ್ಯಪಾಲೆ ಮೃದುಲಾ ಸಿನ್ಹಾ ಅವರಿಗೆ ನೀಡಲಾಯಿತು. ಕರ್ನಾಟಕ ನೇವಿ ವಿಭಾಗದ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 