ಅಂತರರಾಷ್ಟ್ರೀಯ

ಜಾಗತಿಕ ಕೊವಿಡ್ ಪ್ರಕರಣಗಳ ಸಂಖ್ಯೆ 2 ಕೋಟಿ 18 ಲಕ್ಷ ಕ್ಕೆ ಏರಿಕೆ

ಜಾಗತಿಕ ಕೊವಿಡ್ ಪ್ರಕರಣಗಳ ಸಂಖ್ಯೆ  2 ಕೋಟಿ 18 ಲಕ್ಷ ಕ್ಕೆ ಏರಿಕೆ

ವಾಷಿಂಗ್ಟನ್ ಆಗಸ್ಟ್ 18: ವಿಶ್ವದಾದ್ಯಂತ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಮಂಗಳವಾರ 2 ಕೋಟಿ 18 ಲಕ್ಷಕ್ಕೆ ತಲುಪಿದ್ದು,  ಸಾವಿನ ಸಂಖ್ಯೆ 7,72,000 ಕ್ಕಿಂತ ಹೆಚ್ಚಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ. 

ಸದ್ಯ, ಒಟ್ಟು ಪ್ರಕರಣಗಳ ಸಂಖ್ಯೆ 2,18,14,597ರಷ್ಟಿದ್ದು, ಸಾವಿನ ಸಂಖ್ಯೆ 7,72,782 ಕ್ಕೆ ಏರಿದೆ ಎಂದು ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್ಎಸ್ಇ) ತನ್ನ ಇತ್ತೀಚಿನ ನವೀಕೃತ ಅಂಕಿ-ಅಂಶಗಳಲ್ಲಿ ತಿಳಿಸಿದೆ.  

ಸಿಎಸ್ಎಸ್ಇ ಮಾಹಿತಿಯಂತೆ, ಅಮೆರಿಕದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಪ್ರಕರಣಗಳು ಮತ್ತು ಸಾವುಗಳು ವರದಿಯಾಗಿದ್ದು, ಈ ಪ್ರಮಾಣ ಕ್ರಮವಾಗಿ 54,37,969 ಮತ್ತು 1,70,491 ರಷ್ಟಿದೆ. 

ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್ ನಲ್ಲಿ 33,59,570 ಸೋಂಕು ಪ್ರಕರಣಗಳು ಮತ್ತು 1,08,536 ಸಾವುಗಳು ವರದಿಯಾಗಿವೆ. 

ಸೋಂಕು ಪ್ರಕರಣಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದ್ದರೆ (26,47,663), ನಂತರದ ಸ್ಥಾನದಲ್ಲಿ ರಷ್ಯಾ (9,25,558), ದಕ್ಷಿಣ ಆಫ್ರಿಕಾ (5,89,886), ಪೆರು (5,35,946), ಮೆಕ್ಸಿಕೊ (5,25,733), ಕೊಲಂಬಿಯಾ (4,68,332), ಚಿಲಿ (3,87,502), ಸ್ಪೇನ್ (3,59,082) ) ಮತ್ತು ಇರಾನ್ (345,450) ಇವೆ ಎಂದು ಸಿಎಸ್ಎಸ್ಇ ಅಂಕಿ-ಅಂಶಗಳು ತಿಳಿಸಿವೆ. 

ಸುದ್ದಿ ಓದಿ